ನಾಲ್ಕು ವರ್ಷದ ಬಳಿಕ ‘ಡಾಲಿ ಉತ್ಸವ’: ಅದ್ದೂರಿಯಾಗಿ ನಡೆಯಲಿದೆ ಹುಟ್ಟುಹಬ್ಬ
Daali Utsava: ನಟ ಡಾಲಿ ಧನಂಜಯ್ ನಾಲ್ಕು ವರ್ಷಗಳ ಬಳಿಕ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ.
ನಟ ಡಾಲಿ ಧನಂಜಯ್ (Daali Dhananjay) ಅವರ ಸಿನಿಮಾ ಪಯಣ ಹಲವರಿಗೆ ಸ್ಪೂರ್ತಿಯಾಗುವಂಥಹದ್ದು. ನಟನೆ ಮೇಲಿನ ಪ್ರೀತಿಯೊಂದರಿಂದಲೇ ಕೈಯಲ್ಲದ್ದ ಐದಂಕಿ ಸಂಬಳದ ಎಂಜಿನಿಯರಿಂಗ್ ನೌಕರಿ ಬಿಟ್ಟು ಚಿತ್ರರಂಗದಲ್ಲಿ ಸೈಕಲ್ ತುಳಿಯಲು ಆರಂಭಿಸಿದರು. ಆರಂಭದಲ್ಲಿ ಎದುರಾದ ಎಲ್ಲ ನೋವನ್ನೂ ಸಹಿಸಿಕೊಂಡು ಇಂದು ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ ಡಾಲಿ. ಆರಂಭದ ದಿನಗಳಲ್ಲಿ ತಮಗಾದ ಕಹಿ ಅನುಭವ ಇನ್ಯಾರಿಗೂ ಆಗಬಾರದೆಂಬ ಕಾರಣಕ್ಕೆ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸಬರ ಬೆಂಬಲಕ್ಕೆ ನಿಂತಿದ್ದಾರೆ. ಮಾಸ್-ಕ್ಲಾಸ್ ಎರಡೂ ಮಾದರಿಯ ನಟನಾಗಿ ಹೆಸರು ಪಡೆದುಕೊಂಡಿರುವ ಡಾಲಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದ್ದು, ಹತ್ತಿರದಲ್ಲಿರುವ ಡಾಲಿಯ ಹುಟ್ಟುಹಬ್ಬವನ್ನು (Birthday) ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿದ್ದಾರೆ.
ಡಾಲಿ ಎಂದೇ ಸ್ಯಾಂಡಲ್ವುಡ್ನಲ್ಲಿ ಹೆಸರುಗಳಿಸಿರುವ ನಟ ಧನಂಜಯ್ ಹುಟ್ಟುಹಬ್ಬ ಕೆಲವೇ ದಿನಗಳಲ್ಲಿ ನಡೆಯಲಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಡಾಲಿ ಧನಂಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ‘ಕಾಮನ್ ಮ್ಯಾನ್ ಹೀರೋ’ ಎಂಬ ಬಿರುದು ಪಡೆದಿರುವ ಧನಂಜಯ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳಲು ತಯಾರಾಗಿದ್ದಾರೆ. ತನ್ನ ಹುಟ್ಟುಹಬ್ಬದ ದಿನವನ್ನು ತಮ್ಮ ಮೆಚ್ಚಿನ ಅಭಿಮಾನಿಗಳೊಟ್ಟಿಗೆ ಕಳೆಯಲು ನಿರ್ಧಾರ ಮಾಡಿದ್ದಾರೆ. ಆಗಸ್ಟ್ 23 ರಂದು ಧನಂಜಯ್ ಹುಟ್ಟುಹಬ್ಬವಾಗಿದ್ದು, ಈಗಿನಿಂದಲೇ ಅಭಿಮಾನಿಗಳ ಸಂಭ್ರಮ ಪ್ರಾರಂಭವಾಗಿದೆ. ಧನಂಜಯ್ ಹುಟ್ಟುಹಬ್ಬವನ್ನು ‘ಡಾಲಿ ಉತ್ಸವ’ವೆಂದು ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
‘ಅಭಿಮಾನದ ತೇರು ಎಳೆಯೋಣ ಬನ್ನಿ’ ಎಂಬ ಟ್ಯಾಗ್ ಲೈನ್ ಅಡಿಯಲ್ಲಿ ‘ಡಾಲಿ ಉತ್ಸವ’ ಆಚರಿಸಲು ಅಭಿಮಾನಿಗಳು ತಯಾರಾಗಿದ್ದಾರೆ. ನಾಲ್ಕು ವರ್ಷದ ನಂತರ ಅದ್ಧೂರಿಯಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಧನಂಜಯ್ ಸಜ್ಜಾಗಿದ್ದಾರೆ ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಅವರ ಪಾಲಿಗೆ ಮಹತ್ವವಾದುದು. ಇದೇ ಸಂದರ್ಭದಲ್ಲಿ ಡಾಲಿ ಧನಂಜಯ್ ಚಿತ್ರರಂಗದಲ್ಲಿ ಒಂದು ದಶಕ ಕಳೆದಿದ್ದಾರೆ. ಹಾಗಾಗಿ ಎರಡೂ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಇದನ್ನೂ ಓದಿ:ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿದ ಡಾಲಿ ಧನಂಜಯ್, 25 ಸಿನಿಮಾ ಮಾಡಿದ್ದು ಸಾಧನೆಯೇ?
ಈ ಹಿಂದೆ ಬರಗಾಲ, ಕೋವಿಡ್ ಮಹಾಮಾರಿ, ಪುನೀತ್ ರಾಜ್ ಕುಮಾರ್ ನಿಧನದ ಕಾರಣಗಳಿಂದಾಗಿ ಡಾಲಿ ಧನಂಜಯ್ ಈ ಹಿಂದಿನ ನಾಲ್ಕು ವರ್ಷಗಳಿಂದಲೂ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿರಲಿಲ್ಲ. ಹುಟ್ಟುಹಬ್ಬದ ದಿನದಂದು ಅಭಿಮಾನಿಗಳ ಕೈಗೂ ಸಿಕ್ಕಿರಲಿಲ್ಲ. ಹಾಗಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದು ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆಯೇ ಸಮಯ ಕಳೆಯಲು ನಿರ್ಧರಿಸಿದ್ದಾರೆ.
ಡಾಲಿ ಧನಂಜಯ್ರ ಹುಟ್ಟುಹಬ್ಬವನ್ನು ಆಗಸ್ಟ್ 23 ರಂದು ಜೆಪಿ ನಗರದ ಗ್ರೌಂಡ್‌ನಲ್ಲಿ ಸೆಲೆಬ್ರೇಟ್ ಮಾಡಲಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯ ಅಭಿಮಾನಿಗಳು ಡಾಲಿಯ ಹುಟ್ಟುಹಬ್ಬಕ್ಕೆ ಬರಲಿರುವ ಕಾರಣ ದೊಡ್ಡ ಮೈದಾನದಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲು ಧನಂಜಯ್ ನಿರ್ಧರಿಸಿದ್ದಾರೆ. ಆಗಸ್ಟ್ 22ರ ರಾತ್ರಿಯಿಂದಲೇ ಹುಟ್ಟುಹಬ್ಬದ ಸೆಲೆಬ್ರೇಷನ್ ಪ್ರಾರಂಭವಾಗಲಿದೆ. 23ರಂದು ಗ್ರೌಂಡ್‌ನಲ್ಲಿ ಧನಂಜಯ್ ಎಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಿ ಅಭಿಮಾನಿಗಳ ಪ್ರೀತಿಯ ಹಾರೈಕೆಗಳನ್ನು ಸ್ವೀಕಾರ ಮಾಡಲಿದ್ದಾರೆ. ಮಾತ್ರವಲ್ಲದೆ, ದೂರದ ಊರುಗಳಿಂದ ಹುಟ್ಟುಹಬ್ಬ ಆಚರಣೆಗೆ ಬರುವ ಅಭಿಮಾನಿಗಳಿಗಾಗಿ ಊಟದ ವ್ಯವಸ್ಥೆಯನ್ನು ಮಾಡಿಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Sat, 29 July 23