AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanjay Dutt Birthday: 308 ಹುಡುಗಿಯರ ಜೊತೆ ಸಂಜಯ್ ದತ್ ಡೇಟ್; ಬಾಲಿವುಡ್​ನ ಈ ನಟಿಯರ ಜೊತೆಯೂ ಸುತ್ತಾಡಿದ್ದ ನಟ

Sanjay Dutt: ಸಂಜಯ್ ದತ್ ಅವರ ಕುರಿತು ‘ಸಂಜು’ ಹೆಸರಿನ ಬಯೋಪಿಕ್ ಕೂಡ ಬಂದಿತ್ತು. ಇದರಲ್ಲಿ ವಿವಾದಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರಲಿಲ್ಲ. ಸಂಜಯ್ ದತ್​ಗೆ ಬೋಬ್ಬರಿ 308 ಗರ್ಲ್​ಫ್ರೆಂಡ್ಸ್ ಇದ್ದರು!

Sanjay Dutt Birthday: 308 ಹುಡುಗಿಯರ ಜೊತೆ ಸಂಜಯ್ ದತ್ ಡೇಟ್; ಬಾಲಿವುಡ್​ನ ಈ ನಟಿಯರ ಜೊತೆಯೂ ಸುತ್ತಾಡಿದ್ದ ನಟ
ಸಂಜಯ್ ದತ್
ರಾಜೇಶ್ ದುಗ್ಗುಮನೆ
|

Updated on: Jul 29, 2023 | 8:01 AM

Share

ನಟ ಸಂಜಯ್ ದತ್ (Sanjay Dutt) ಅವರಿಗೆ ಇಂದು (ಜುಲೈ 29) ಬರ್ತ್​ಡೇ ಸಂಭ್ರಮ. ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ಅವರು ಕನ್ನಡದ ಎರಡನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂಜಯ್ ದತ್ ಅವರ ಕುರಿತು ‘ಸಂಜು’ (Sanju Movie) ಹೆಸರಿನ ಬಯೋಪಿಕ್ ಕೂಡ ಬಂದಿತ್ತು. ಇದರಲ್ಲಿ ವಿವಾದಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರಲಿಲ್ಲ. ಸಂಜಯ್ ದತ್​ಗೆ ಬೋಬ್ಬರಿ 308 ಗರ್ಲ್​ಫ್ರೆಂಡ್ಸ್ ಇದ್ದರು! ಇದನ್ನು ಅವರೇ ಒಪ್ಪಿಕೊಂಡಿದ್ದರು. ಅವರು ಅನೇಕ ಬಾಲಿವುಡ್ ಹೀರೋಯಿನ್​ಗಳ ಜೊತೆಯೂ ಸುತ್ತಾಡಿದ್ದರು.

ಟೀನಾ ಮುನಿಮ್

ಸಂಜಯ್ ದತ್ ಮತ್ತು ಟೀನಾ ಮುನಿಮ್ ಡೇಟ್ ಮಾಡುತ್ತಿದ್ದರು. ಇವರು ಬಾಲ್ಯದಿಂದ ಫ್ರೆಂಡ್ಸ್ ಕೂಡ ಹೌದು. ‘ರಾಕಿ’ ಸಿನಿಮಾ ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತ್ತು ಎನ್ನಲಾಗಿದೆ. ಸಂಜಯ್ ದತ್ ಅವರ ಕೆಟ್ಟ ಹವ್ಯಾಸ ಹಾಗೂ ಪೊಸೆಸಿವ್ ನಡವಳಿಕೆಯಿಂದ ಇವರ ಸಂಬಂಧ ಕೊನೆ ಆಯಿತು.

ರಿಚಾ ಶರ್ಮಾ

ಸಂಜಯ್ ದತ್​ಗೆ ರಿಚಾ ಮೇಲೆ ಕ್ರಶ್ ಇತ್ತು. ಮ್ಯಾಗಜೀನ್​ನಲ್ಲಿ ರಿಚಾ ಫೋಟೋ ನೋಡಿ ಸಂಜಯ್ ದತ್ ಫಿದಾ ಆಗಿದ್ದರು. ಅವರ ಮೊಬೈಲ್ ಸಂಖ್ಯೆ ಪಡೆದು, ಡೇಟ್​ಗೆ ಆಹ್ವಾನಿಸಿದ್ದರು. 1987ರಲ್ಲಿ ರಿಚಾ-ಸಂಜಯ್ ಮದುವೆ ನಡೆಯಿತು. ರಿಚಾ ಬ್ರೇನ್​ ಟ್ಯೂಮರ್​ನಿಂದ 1996ರಲ್ಲಿ ಮೃತಪಟ್ಟರು.

ಮಾಧುರಿ ದೀಕ್ಷಿತ್

1991ರಲ್ಲಿ ‘ಸಾಜನ್’ ಸಿನಿಮಾ ಶೂಟಿಂಗ್ ವೇಳೆ ಸಂಜಯ್ ಹಾಗೂ ಮಾಧುರಿ ಡೇಟ್ ಮಾಡಲು ಆರಂಭಿಸಿದರು. 1993ರ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಂಜಯ್ ಹೆಸರು ಕೇಳಿ ಬಂದಿದ್ದರಿಂದ ಇವರ ಸಂಬಂಧ ಕೊನೆ ಆಯಿತು.

ರಿಯಾ ಪಿಳ್ಳೈ

ಮಾಧುರಿ ಬಳಿಕ ಸಂಜಯ್ ಅವರು ರಿಯಾ ಜೊತೆ ಡೇಟ್ ಮಾಡಿದರು. ಮಾಡೆಲ್ ಆಗಿದ್ದ ರಿಯಾನ 1998ರಲ್ಲಿ ಸಂಜಯ್ ದತ್ ಮದುವೆ ಆದರು. 2005ರಲ್ಲಿ ಇವರು ವಿಚ್ಛೇದನ ಪಡೆದರು.

ಇದನ್ನೂ ಓದಿ: Sanjay Dutt: ಕೆಡಿ ಸಿನಿಮಾ ಸೆಟ್​ನಲ್ಲಿ ಸಂಜಯ್ ದತ್​ಗೆ ಗಾಯ, ನಡೆದಿದ್ದೇನು?

ಇಷ್ಟೇ ಅಲ್ಲದೆ, ನಾಡಿಯಾ ದುರಾನಿ, ಲಿಸಾ ರೇ, ರೇಖಾ ಜೊತೆಗೂ ಸಂಜತ್ ದತ್ ರಿಲೇಶನ್​ ಶಿಪ್ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇವುಗಳ ಪೈಕಿ ಕೆಲವು ಅಧಿಕೃತ ಆದರೆ ಇನ್ನೂ ಕೆಲವು ವದಂತಿಗಳಾಗಿ ಉಳಿದುಕೊಂಡಿವೆ. 2008ರಲ್ಲಿ ಸಂಜಯ್ ದತ್ ಮಾನ್ಯತಾ ದತ್ ಅವರನ್ನು ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ