Sanjay Dutt: ‘ಪ್ರೇಮ್ ಬೆಸ್ಟ್ ಡೈರೆಕ್ಟರ್’: ಚಾಮುಂಡಿ ಬೆಟ್ಟದಲ್ಲಿ ಹೊಗಳಿದ ಸಂಜಯ್ ದತ್
KD Kannada Movie: ಸಂಜಯ್ ದತ್ ನಟಿಸುತ್ತಿರುವ 2ನೇ ಕನ್ನಡ ಸಿನಿಮಾ ‘ಕೆಡಿ’. ಚಿತ್ರೀಕರಣದ ಬಿಡುವಿನಲ್ಲಿ ನಿರ್ದೇಶಕ ಪ್ರೇಮ್ ಜೊತೆ ಅವರು ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದಿದ್ದಾರೆ.
ಖ್ಯಾತ ನಟ ಸಂಜಯ್ ದತ್ (Sanjay Dutt) ಅವರು ಈಗ ಬಾಲಿವುಡ್ಗಿಂತಲೂ ದಕ್ಷಿಣ ಭಾರತದಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ಅಧೀರನಾಗಿ ಕಾಣಿಸಿಕೊಂಡ ಬಳಿಕ ಅವರಿಗೆ ಸೌತ್ ಸಿನಿಮಾಗಳಲ್ಲಿ ಡಿಮ್ಯಾಂಡ್ ಹೆಚ್ಚಾಯಿತು. ಈಗ ಅವರು ಕನ್ನಡದ ‘ಕೆಡಿ’ (KD Movie) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣದ ಬಿಡುವಿನಲ್ಲಿ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಡಿ ನೀಡಿದ್ದಾರೆ. ಸಂಜಯ್ ದತ್ ಅವರು ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದು, ನಿರ್ದೇಶಕ ‘ಜೋಗಿ’ ಪ್ರೇಮ್ (Director Prem) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸೌತ್ ಸಿನಿಮಾಗಳ ಬಗ್ಗೆ ತಮಗೆ ಇರುವ ಪ್ರೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಅನೇಕ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ನಿರೀಕ್ಷೆ ಡಬಲ್ ಆಗಿದೆ. ಶೂಟಿಂಗ್ ಸಲುವಾಗಿ ಕರುನಾಡಿಗೆ ಬಂದಿರುವ ಸಂಜಯ್ ದತ್ ಅವರು ಚಾಮುಂಡಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ‘ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ. ಮಾತೆಯ ದರ್ಶನ ಮಾಡಿ ತುಂಬಾ ಖುಷಿ ಆಯಿತು’ ಎಂದು ಸಂಜಯ್ ದತ್ ಅವರು ಹೇಳಿದ್ದಾರೆ. ‘ಕೆಡಿ’ ಚಿತ್ರತಂಡದ ಜೊತೆ ಬಂದಿದ್ದ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು.
ಇದನ್ನೂ ಓದಿ: Leo Movie: ಗ್ಯಾಂಗ್ಸ್ಟರ್ ತಂದೆ-ಮಗನ ಪಾತ್ರದಲ್ಲಿ ಸಂಜಯ್ ದತ್-ವಿಜಯ್; ಸಂಜು ಸಂಭಾವನೆ 10 ಕೋಟಿ ರೂಪಾಯಿ?
‘ಕೆಜಿಎಫ್: ಚಾಪ್ಟರ್ 2’ ಬಳಿಕ ಸಂಜಯ್ ದತ್ ಅವರು ನಟಿಸುತ್ತಿರುವ 2ನೇ ಕನ್ನಡ ಸಿನಿಮಾ ‘ಕೆಡಿ’. ಇನ್ನು, ತೆಲುಗು ಮತ್ತು ತಮಿಳು ಚಿತ್ರರಂಗದಿಂದಲೂ ಅವರಿಗೆ ಆಫರ್ಗಳು ಬಂದಿವೆ. ಒಟ್ಟಾರೆ ಸೌತ್ ಚಿತ್ರಗಳ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ನಿರ್ದೇಶಕ ಪ್ರೇಮ್ ಕುರಿತು ಹೊಗಳಿಕೆ ಮಾತುಗಳನ್ನು ಆಡಿದ್ದಾರೆ. ‘ಪ್ರೇಮ್ ಜೊತೆ ಕೆಡಿ ಸಿನಿಮಾದ ಶೂಟಿಂಗ್ ಮಾಡುತ್ತಿದ್ದೇನೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡುವುದು ನನಗೆ ಇಷ್ಟ. ಪ್ರೇಮ್ ಅವರು ಬೆಸ್ಟ್ ಡೈರೆಕ್ಟರ್’ ಎಂದು ಸಂಜಯ್ ದತ್ ಹೇಳಿದ್ದಾರೆ.
ಇದನ್ನೂ ಓದಿ: Sanjay Dutt: ‘ಕೆಡಿ’ ಶೂಟಿಂಗ್ ಸೆಟ್ಗೆ ಕಾಲಿಟ್ಟ ಸಂಜಯ್ ದತ್; ಬಾಲಿವುಡ್ ನಟನ ಎಂಟ್ರಿಯಿಂದ ಹೆಚ್ಚಿತು ನಿರೀಕ್ಷೆ
‘ಸದ್ಯಕ್ಕೆ ಶೂಟಿಂಗ್ ನಡೆಯುತ್ತಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಆಗಲಿದೆ’ ಎಂದು ಪ್ರೇಮ್ ಹೇಳಿದ್ದಾರೆ. ‘ಪ್ರೇಮ್ ಇದ್ದಲ್ಲಿ ಸರ್ಪ್ರೈಸ್, ಸಸ್ಪೆನ್ಸ್ ಎಲ್ಲವೂ ಇರುತ್ತದೆ’ ಎಂದು ನಟ ಶೋಭರಾಜ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್, ಶಿಲ್ಪಾ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ಗಳು ಗಮನ ಸೆಳೆಯುತ್ತಿವೆ. ಟೀಸರ್ಗಾಗಿ ಧ್ರುವ ಸರ್ಜಾ ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.