ಹಿಂದಿನ ಜನ್ಮದಲ್ಲಿ ರಾಜನಾಗಿದ್ದ ಸಂಜಯ್ ದತ್ ಪತ್ನಿಯನ್ನು ಕೊಂದಿದ್ದರು
ಸಂಜಯ್ ದತ್ ಸ್ಟಾರ್ ಕಿಡ್. ಸುನಿಲ್ ದತ್ ಹಾಗೂ ನರ್ಗೀಸ್ ದತ್ ಅವರ ಮಗನಾಗಿ ಸಂಜಯ್ ದತ್ ನಟಿಸಿದರು. ಸಿನಿಮಾದಲ್ಲಿ ನಟಿಸೋಕೆ ಸುಲಭದಲ್ಲಿ ಅವಕಾಶ ಸಿಕ್ಕಿತು. ಆದರೆ, ಅವರು ಡ್ರಗ್ನ ದಾಸರಾದರು. ಮೊದಲ ಸಿನಿಮಾ ರಿಲೀಸ್ ಆಗುವ ಮೊದಲೇ ತಾಯಿಯನ್ನು ಕಳೆದುಕೊಂಡರು. ಇದೆಲ್ಲ ಹಳೆಯ ಜನ್ಮದ ಪಾಪಫಲ ಅನ್ನೋದು ಅವರ ನಂಬಿಕೆ.
ಸಂಜಯ್ ದತ್ (Sanjay Dutt) ಅವರು ಜೀವನದಲ್ಲಿ ಕಂಡ ಏಳುಬೀಳುಗಳು ಒಂದೆರಡಲ್ಲ. ಅವರು ಡ್ರಗ್ಸ್ಗೆ ಎಷ್ಟು ಅಡಿಕ್ಟ್ ಆಗಿದ್ದರು ಎಂದರೆ ಅದರಿಂದ ಅವರು ಹೊರಗೆ ಬರೋಕೆ ಸಾಧ್ಯವೇ ಇಲ್ಲ ಎಂಬಷ್ಟು. ಆದರೆ, ಒಂದು ದಿನ ಎಲ್ಲವನ್ನೂ ತ್ಯಜಿಸಿದರು. ಇದೆಲ್ಲವೂ ಹಳೆಯ ಜನ್ಮದಿಂದ ಆದ ಪಾಪದ ಫಲ ಎಂಬುದು ಸಂಜಯ್ ದತ್ ಅಭಿಪ್ರಾಯ. ಈ ಬಗ್ಗೆ ಅವರು ಕಾಫಿ ವಿತ್ ಕರಣ್ ಶೋನಲ್ಲಿ ಹೇಳಿಕೊಂಡಿದ್ದರು. ಹಳೆಯ ಜನ್ಮದಲ್ಲಿ ಸಂಜಯ್ ದತ್ ರಾಜನಾಗಿದ್ದರಂತೆ. ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತ್ನಿಯನ್ನು ಅವರು ಕೊಂದಿದ್ದರಂತೆ.
ಸಂಜಯ್ ದತ್ ಸ್ಟಾರ್ ಕಿಡ್. ಸುನಿಲ್ ದತ್ ಹಾಗೂ ನರ್ಗೀಸ್ ದತ್ ಅವರ ಮಗನಾಗಿ ಸಂಜಯ್ ದತ್ ನಟಿಸಿದರು. ಸಿನಿಮಾದಲ್ಲಿ ನಟಿಸೋಕೆ ಸುಲಭದಲ್ಲಿ ಅವಕಾಶ ಸಿಕ್ಕಿತು. ಆದರೆ, ಅವರು ಡ್ರಗ್ನ ದಾಸರಾದರು. ಮೊದಲ ಸಿನಿಮಾ ರಿಲೀಸ್ ಆಗುವ ಮೊದಲೇ ತಾಯಿಯನ್ನು ಕಳೆದುಕೊಂಡರು. 1993ರ ಬಾಂಬೆ ಬ್ಲಾಸ್ಟ್ ವೇಳೆ ಅವರು ಸಂಕಷ್ಟ ಅನುಭವಿಸಿದರು. ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಪ್ರಕರಣದಲ್ಲಿ ಸಂಜಯ್ ದತ್ ಜೈಲು ಸೇರಿದರು. ನಂತರ ಅವರು ಸಂಪೂರ್ಣ ಬದಲಾದರು.
ಜೀವನದಲ್ಲಿ ಹೀಗೇಕೆ ಆಗುತ್ತಿದೆ ಎಂಬುದನ್ನು ಸಂಜಯ್ ದತ್ ವಿವರಿಸಿದ್ದರು. ‘ಚೆನ್ನೈನಿಂದ 2 ಗಂಟೆಯ ಜರ್ನಿ. ಅಲ್ಲಿ ಒಂದು ಸಣ್ಣ ಊರಿದೆ. ಅಲ್ಲಿಗೆ ಹೋದಾಗ ನನ್ನ ಹಳೆಯ ಜನ್ಮದ ಬಗ್ಗೆ ಅವರು ಹೇಳಿದರು’ ಎಂದಿದ್ದಾರೆ ಸಂಜಯ್ ದತ್. ಅಲ್ಲಿದ್ದವರಿಗೆ ಸಂಜಯ್ ದತ್ ಪರಿಚಯ ಇರಲಿಲ್ಲ. ಅವರು ಹೆಸರನ್ನೂ ಹೇಳಿರಲಿಲ್ಲ. ಆದರೂ ‘ನಿಮ್ಮ ತಂದೆಯ ಹೆಸರು ಬಾಲರಾಜ್ ದತ್ ತಾಯಿ ಹೆಸರು ಫಾತಿಮಾ ಹುಸೇನ್’ ಎಂದು ಸಂಜಯ್ ದತ್ಗೆ ಆ ಪಂಡಿತ ಹೇಳಿದ್ದರು. ಸಂಜಯ್ ದತ್ ತಂದೆಯ ನಿಜವಾದ ಹೆಸರು ಬಾಲರಾಜ್ ದತ್. ಫಾತಿಮಾ ಅನ್ನೋದು ನರ್ಗಿಸ್ ಅವರ ಮೊದಲ ಹೆಸರಾಗಿತ್ತು.
‘ನಾನು ಅಶೋಕ ಚಕ್ರವರ್ತಿಯ ಸಮಯದಲ್ಲಿ ರಾಜನಾಗಿದ್ದೆ. ನನ್ನದೇ ಸಚಿವಾಲಯದ ಮಂತ್ರಿಯ ಜೊತೆ ನನ್ನ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ನಾನು ಸಾಯಲಿ ಎಂದು ಯುದ್ಧಕ್ಕೆ ಕಳುಹಿಸಿದಳು. ನಾನು ಅಲ್ಲಿ ಗೆದ್ದು ಬಂದೆ. ಮರಳಿ ಬಂದಾಗ ಅವಳ ಅಕ್ರಮ ಸಂಬಂಧದ ವಿಚಾರ ಗೊತ್ತಾಯಿತು. ಹೀಗಾಗಿ ಅವಳನ್ನು ಕೊಂದೆ. ಮಂತ್ರಿಯನ್ನೂ ಹತ್ಯೆ ಮಾಡಿದೆ. ನಾನು ಶಿವ ಭಕ್ತನಾಗಿದ್ದೆ. ಕಾಡಿನ ಒಳಗೆ ಹೋಗಿ ಹಸಿವಿನಿಂದ ಇದ್ದೆ. ಹಾಗೆಯೇ ಮೃತಪಟ್ಟೆ’ ಎಂದು ಪಂಡಿತರು ಹೇಳಿದ ಹಳೆಯ ಜನ್ಮದ ಕಥೆ ವಿವರಿಸಿದ್ದರು ಸಂಜಯ್ ದತ್.
ಈ ಜನ್ಮದಲ್ಲಿ ಅವರು ಅನುಭವಿಸಿದ್ದು ಹಳೆಯ ಜನ್ಮದ ಕರ್ಮದ ಫಲ ಎನ್ನುತ್ತಾರೆ ಸಂಜಯ್ ದತ್. ‘ಈ ಜನ್ಮದಲ್ಲಿ ನಾನು ಒಳ್ಳೆಯ ಕುಟುಂಬದಲ್ಲಿ ಜನಿಸಿದೆ. ಆದರೂ ಸಾಕಷ್ಟು ಏಳುಬೀಳುಗಳನ್ನು ಕಂಡೆ. ನನಗೆ ಕ್ಯಾನ್ಸರ್ ಬಂತು. ಹಳೆಯ ಜನ್ಮದಲ್ಲಿ ಮಾಡಿದ ಪಾಪಗಳಿಗೆ ಈ ಜನ್ಮದಲ್ಲಿ ಅನುಭವಿಸಿದ್ದೇನೆ’ ಎಂದು ಅವರು ಹೇಳಿದ್ದರು. ಸಂಜಯ್ ದತ್ ಜೀವನದಲ್ಲಿ ಅನೇಕರನ್ನು ಕಳೆದುಕೊಂಡರು. ಸಣ್ಣ ವಯಸ್ಸಲ್ಲೇ ತಾಯಿ ಮೃತಪಟ್ಟರು. ಸಂಜಯ್ ದತ್ ಮೊದಲ ಪತ್ನಿ ರಿಚಾ ಶರ್ಮಾ ಅನಾರೋಗ್ಯದಿಂದ ಕೊನೆಯುಸಿರು ಎಳೆದರು. ಎಕೆ-56 ರೈಫಲ್ ಹೊಂದಿದ್ದಕ್ಕೆ ಅರೆಸ್ಟ್ ಆದರು. ಕ್ಯಾನ್ಸರ್ ಕೂಡ ಬಂತು.
ಇದನ್ನೂ ಓದಿ: Sanjay Dutt: ಸಂಜಯ್ ದತ್ ಈಗ ಬಿಗ್ ಬುಲ್; ‘ಡಬಲ್ ಇಸ್ಮಾರ್ಟ್’ಗೆ ಖಡಕ್ ವಿಲನ್
ಸಂಜಯ್ ದತ್ ‘ಕೆಜಿಎಫ್ 2’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಚಿತ್ರರಂಗದಲ್ಲಿ ಮರುಹುಟ್ಟು ಪಡೆದರು. ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ದಳಪತಿ ವಿಜಯ್ ನಟನೆಯ ‘ಲಿಯೋ’, ಧ್ರುವ ಸರ್ಜಾ ನಟನೆಯ ‘ಕೆಡಿ’ ಮೊದಲಾದ ಚಿತ್ರಗಳಲ್ಲಿ ಅವರು ಖಳನ ಪಾತ್ರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Sat, 7 October 23