‘ಅನಿಮಲ್’ ಟ್ರೈಲರ್ ಬಿಡುಗಡೆ: ಪಕ್ಕಾ ಬ್ಲಾಕ್​ಬಸ್ಟರ್ ಎಂದ ಅಭಿಮಾನಿಗಳು

Animal: ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ನೋಡಿದ ಸಿನಿ ಪ್ರೇಮಿಗಳು ಸಿನಿಮಾ ಬ್ಲಾಕ್ ಬಸ್ಟರ್ ಎಂದು ಈಗಲೇ ಘೋಷಿಸಿದ್ದಾರೆ.

‘ಅನಿಮಲ್’ ಟ್ರೈಲರ್ ಬಿಡುಗಡೆ: ಪಕ್ಕಾ ಬ್ಲಾಕ್​ಬಸ್ಟರ್ ಎಂದ ಅಭಿಮಾನಿಗಳು
Follow us
ಮಂಜುನಾಥ ಸಿ.
|

Updated on: Nov 23, 2023 | 9:09 PM

ಬಾಲಿವುಡ್​ನ (Bollywood) ರೊಮ್ಯಾಂಟಿಕ್ ಹೀರೋ, ‘ಪ್ಲೇ ಬಾಯ್’ ಹೀರೋ ಇಮೇಜಿಗೆ ಬ್ರ್ಯಾಂಡ್ ಆಗಿದ್ದ ನಟ ರಣ್​ಬೀರ್ ಕಪೂರ್ (Ranbir Kapoor) ಕೋವಿಡ್ ಬಳಿಕ ಮುನ್ನೆಲೆಗೆ ಬಂದ ಪ್ಯಾನ್ ಇಂಡಿಯಾ ಸಿನಿಮಾ, ಬದಲಾದ ಸಿನಿಮಾ ವ್ಯಾಕರಣ ಇತ್ಯಾದಿಗಳ ನಡುವೆ ರಣ್​ಬೀರ್ ಕಪೂರ್ ಸಹ ತಮ್ಮ ಸಿನಿಮಾ ಆಯ್ಕೆ ವಿಧಾನವನ್ನು ಬದಲಾಯಿಸಿಕೊಂಡಿದ್ದಾರೆ. ‘ಬ್ರಹ್ಮಾಸ್ತ್ರ’, ‘ಶೇರ್​ಷಾ’ ರೀತಿಯ ಮಾಸ್​ ಸಿನಿಮಾಗಳನ್ನು ಆರಿಸಿಕೊಂಡು ನಟಿಸುತ್ತಿದ್ದಾರೆ. ದಿಈಗ ರಣ್​ಬೀರ್​ ಕಪೂರ್ ಅವರ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ರಣ್​ಬೀರ್ ಕಪೂರ್ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ತೆಲುಗಿನ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾದಲ್ಲಿ ರಣ್​ಬೀರ್ ಕಪೂರ್ ನಟಿಸಿದ್ದು ಸಿನಿಮಾದ ಟ್ರೈಲರ್ ಇಂದು (ನವೆಂಬರ್ 23) ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಸಖತ್ ಮಾಸ್ ಆಗಿರುವ ಜೊತೆಗೆ ಸೆಂಟಿಮೆಂಟಲ್ ಆಗಿಯೂ ಇದೆ. ಟ್ರೈಲರ್ ನೋಡಿದ ಸಿನಿಪ್ರಿಯರು ಇದು ಪಕ್ಕಾ ಬ್ಲಾಕ್ ಬಸ್ಟರ್ ಎಂದು ಭವಿಷ್ಯ ನುಡಿದಿದ್ದಾರೆ. ಟ್ರೈಲರ್​ನಲ್ಲಿ ರಣ್​ಬೀರ್ ಕಪೂರ್ ಸ್ವ್ಯಾಗ್ ಮತ್ತು ರಕ್ತವೇ ತುಂಬಿದೆ.

ಇದನ್ನೂ ಓದಿ: ಅನಿಮಲ್ ಸಿನಿಮಾದಲ್ಲಿ ರಣ್​ಬೀರ್ ಕಪೂರ್ ಹಲವು ಅವತಾರಗಳು

‘ಅನಿಮಲ್’ ಸಿನಿಮಾ ಅಪ್ಪ ಮಗನ ನಡುವಿನ ಭಿನ್ನ ರೀತಿಯ ಸಂಬಂಧದ ಕುರಿತಾದದ್ದಾಗಿದೆ. ಜೊತೆಗೆ ಸಿನಿಮಾವು ಮಾಫಿಯಾ ಕುಟುಂಬದ ಕತೆ ಅದರ ದ್ವೇಷ, ವೈಷಮ್ಯ, ಕುಟುಂಬದಲ್ಲಿನ ರಾಜಕೀಯ ಕತೆಗಳನ್ನು ಸಹ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಸಖತ್ ಸ್ಟೈಲಿಷ್ ಆಗಿದ್ದು, ರಣ್​ಬೀರ್ ಕಪೂರ್ ಸಹ ಹಲವು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮಾಯಕ ಮಗನಾಗಿ, ವಯಸ್ಸಾದ ಅಪ್ಪನ ಕೇರ್ ಟೇಕರ್ ಆಗಿ, ದ್ವೇಷ ತೀರಿಕೊಳ್ಳುವ ಮಗನಾಗಿ ಹೀಗೆ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್​ನಲ್ಲಿ ಸಖತ್ ಆಕ್ಷನ್ ಇದೆ ಜೊತೆಗೆ ರಕ್ತವೂ ಸಾಕಷ್ಟಿದೆ. ಟ್ರೈಲರ್​ನ ಅಂತ್ಯದಲ್ಲಿ ಕಾಣಿಸಿಕೊಳ್ಳುವ ವಿಲನ್ ಬಾಬಿ ಡಿಯೋಲ್ ಅಂತೂ ರಣ್​ಬೀರ್​ರ ಸ್ವ್ಯಾಗ್​ ಅನ್ನು ಮೀರಿಸಿ ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ.

‘ಅನಿಮಲ್’ ಸಿನಿಮಾವನ್ನು ತೆಲುಗಿನ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ತೆಲುಗಿನ ಸೂಪರ್ ಡೂಪರ್ ಹಿಟ್ ‘ಅರ್ಜುನ್ ರೆಡ್ಡಿ’ ಸಿನಿಮಾದ ನಿರ್ದೇಶಕ ಇವರು. ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ರಣ್​ಬೀರ್ ತಂದೆಯ ಪಾತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದಾರೆ. ಸಿನಿಮಾದಲ್ಲಿ ಇನ್ನೂ ಕೆಲವು ಪ್ರಮುಖ ನಟರಿದ್ದಾರೆ. ಸಿನಿಮಾ ಡಿಸೆಂಬರ್ 1 ರಂದು ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ