ಬಾಲಕೃಷ್ಣಗೆ ಬೋಲ್ಡ್ ಆದ ಬಾಲಿವುಡ್ ಸ್ಟಾರ್ ರಣ್​ಬೀರ್ ಕಪೂರ್, ಡೈಲಾಗ್​ಗಳ ಮೇಲೆ ಡೈಲಾಗ್

Nandamuri Balakrishna: ನಟ ರಣ್​ಬೀರ್ ಕಪೂರ್, ಬಾಲಕೃಷ್ಣ ಅವರನ್ನು ಭೇಟಿಯಾಗಿದ್ದಾರೆ. ಬಾಲಕೃಷ್ಣರ ಡೈಲಾಗ್​ಗಳನ್ನು ಒಂದರ ಹಿಂದೊಂದರಂತೆ ಹೇಳಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಬಾಲಕೃಷ್ಣಗೆ ಬೋಲ್ಡ್ ಆದ ಬಾಲಿವುಡ್ ಸ್ಟಾರ್ ರಣ್​ಬೀರ್ ಕಪೂರ್, ಡೈಲಾಗ್​ಗಳ ಮೇಲೆ ಡೈಲಾಗ್
ರಣ್​ಬೀರ್ ಕಪೂರ್
Follow us
|

Updated on: Nov 20, 2023 | 3:01 PM

ಮಾಸ್​ಗಳಿಗೇ ಮಾಸ್ ನಂದಮೂರಿ ಬಾಲಕೃಷ್ಣ (Nandamuri Balakrishna) ಎಲ್ಲ ಬಾಲಿವುಡ್​ನ ಚಾಕಲೇಟ್ ಬಾಯ್, ಸಟಲ್ ನಟ ರಣ್​ಬೀರ್ ಕಪೂರ್ ಎಲ್ಲಿ. ನಟನೆಯಲ್ಲಿ, ಸಿನಿಮಾ ಆಯ್ದುಕೊಳ್ಳುವ ವಿಧಾನದಲ್ಲಿ ಉತ್ತರ ಧೃವ-ದಕ್ಷಿಣ ಧೃವ ಎಂಬಂತಿರುವ ಈ ನಟರಿಬ್ಬರೂ ಒಂದೇ ವೇದಿಕೆ ಮೇಲೆ ಸೇರಿದ್ದಾರೆ. ಪರಸ್ಪರ ಮಾತನಾಡಿದ್ದಾರೆ, ಮಸ್ತಿ ಮಾಡಿದ್ದಾರೆ. ಬಾಲಕೃಷ್ಣ ಅವರ ಮಾಸ್ ಡೈಲಾಗ್​ಗಳನ್ನು ತೆಲುಗಿನಲ್ಲಿಯೇ ಹೇಳಿ ಖುಷಿ ಪಟ್ಟಿದ್ದಾರೆ ರಣ್​ಬೀರ್ ಕಪೂರ್.

ನಟ, ರಾಜಕಾರಣಿಯಾಗಿ ಈಗಾಗಲೇ ಯಶಸ್ವಿಯಾಗಿರುವ ನಂದಮೂರಿ ಬಾಲಕೃಷ್ಣ, ನಿರೂಪಕರಾಗಿಯೂ ಯಶಸ್ವಿಯಾಗಿದ್ದಾರೆ. ಆಹಾ ಒಟಿಟಿಗಾಗಿ ಅನ್​ಸ್ಟಾಪೆಬಲ್ ಬಾಲಯ್ಯ ಹೆಸರಿನ ಟಾಕ್ ಶೋ ಅನ್ನು ಬಾಲಕೃಷ್ಣ ನಡೆಸಿಕೊಡುತ್ತಿದ್ದು, ಈ ಶೋ ಭಾರಿ ಹಿಟ್ ಆಗಿದೆ. ಹಲವು ದಿಗ್ಗಜರನ್ನು ತಮ್ಮ ಶೋಗೆ ಕರೆದು ಮಾತನಾಡಿಸಿದ್ದಾರೆ ಬಾಲಯ್ಯ. ಇದೀಗ ಅನ್​ಸ್ಟಾಪೆಬಲ್ ವಿತ್ ಬಾಲಯ್ಯ ಶೋನ ಹೊಸ ಸೀಸನ್ ಆರಂಭವಾಗುತ್ತಿದ್ದು, ಶೋನ ಮೊದಲ ಅತಿಥಿಯಾಗಿ ಬಾಲಿವುಡ್​ನ ನಟ ರಣ್​ಬೀರ್ ಕಪೂರ್ ಆಗಮಿಸಿದ್ದಾರೆ.

ಕೇವಲ ರಣ್​ಬೀರ್ ಕಪೂರ್ ಮಾತ್ರವೇ ಅಲ್ಲದೆ ‘ಅನಿಮಲ್’ ಸಿನಿಮಾದ ನಿರ್ದೇಶಕ, ತೆಲುಗಿನವರೇ ಆದ ಸಂದೀಪ್ ರೆಡ್ಡಿ ವಂಗ ಹಾಗೂ ಸಿನಿಮಾದ ನಟಿ ರಶ್ಮಿಕಾ ಮಂದಣ್ಣ ಸಹ ಶೋಗೆ ಆಗಮಿಸಿದ್ದಾರೆ. ಅತಿಥಿಗಳೊಟ್ಟಿಗೆ ಬಿಡು-ಬೀಸಾಗಿ, ಮುಚ್ಚು ಮರೆ ಇಲ್ಲದೆ ಮಾತನಾಡುವ ಬಾಲಕೃಷ್ಣ, ರಣ್​ಬೀರ್, ರಶ್ಮಿಕಾ ಜೊತೆಗೂ ಹಾಗೆಯೇ ಮಾತನಾಡಿದ್ದಾರೆ. ಶೋನ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು ರಣ್​ಬೀರ್ ಅಂತೂ ಶೋ ಅನ್ನು ಬಹಳ ಎಂಜಾಯ್ ಮಾಡಿದಂತೆ ಕಾಣುತ್ತಿದ್ದಾರೆ.

ಇದನ್ನೂ ಓದಿ:ಸ್ಟಾರ್ ನಟ ಬೇಡವೆಂದಿದ್ದ ಅನಿಮಲ್ ಸಿನಿಮಾ, ರಣ್​ಬೀರ್​ಗೆ ದೊರಕಿದ್ದು ಹೇಗೆ?

ಶೋನಲ್ಲಿ ರಣ್​ಬೀರ್ ಕಪೂರ್, ಡೈಲಾಗ್ ಕಿಂಗ್ ಬಾಲಕೃಷ್ಣರ ಜನಪ್ರಿಯ ಡೈಲಾಗ್​ಗಳನ್ನು ತೆಲುಗಿನಲ್ಲಿಯೇ ಹೇಳಿ ಭೇಷ್ ಎನಿಸಿಕೊಂಡಿದ್ದಾರೆ. ‘ಫ್ಲೂಟು ಜಿಂಕ ಮುಂದು ಊದು, ಸಿಂಹಂ ಮುಂದು ಕಾದು’ ಡೈಲಾಗ್ ಅನ್ನು ಹೇಳಿರುವ ರಣ್​ಬೀರ್ ಕಪೂರ್ ಆ ಬಳಿಕ, ‘ಡೋಂಡ್ ಟ್ರಬಲ್​ ದಿ ಟ್ರಬಲ್, ಇಫ್​ ಯು ಟ್ರಬಲ್​ ದಿ ಟ್ರಬಲ್ ವಿಲ್ ಟ್ರಬಲ್ಸ್​ ಯು, ಐ ಆಮ್ ನಾಟ್ ದಿ ಟ್ರಬಲ್, ಐ ಆಮ್​ ದಿ ಟ್ರೂತ್’ ಎಂಬ ಬಾಲಕೃಷ್ಣರ ಜನಪ್ರಿಯ ಡೈಲಾಗ್ ಅನ್ನು ಸಹ ಹೇಳಿದ್ದಾರೆ.

ಜೊತೆಗೆ ಬಾಲಕೃಷ್ಣರ ಕೆಲವು ಹಾಡುಗಳಿಗೆ ರಣ್​ಬೀರ್ ಕಪೂರ್ ಡ್ಯಾನ್ಸ್ ಸಹ ಮಾಡಿದ್ದಾರೆ. ‘ಅನಿಮಲ್’ ಸಿನಿಮಾದ ಬಗ್ಗೆಯೂ ಪರಸ್ಪರ ಮಾತನಾಡಿದ್ದಾರೆ. ದಕ್ಷಿಣ ಚಿತ್ರರಂಗ ಹಾಗೂ ಬಾಲಿವುಡ್ ಬಗ್ಗೆಯೂ ಇಬ್ಬರ ನಡುವೆ ಚರ್ಚೆಗಳು ನಡೆದಿವೆ. ಅಂದಹಾಗೆ ರಣ್​ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಡಿಸೆಂಬರ್ 1 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾವನ್ನು ಟಿ-ಸೀರೀಸ್, ಭದ್ರಕಾಳಿ ಫಿಲಮ್ಸ್, ಸಿನೆ 1 ಸ್ಟುಡಿಯೋ ನಿರ್ಮಾಣ ಮಾಡಿದೆ. ಎಎ ಫಿಲಮ್ಸ್ ಸಿನಿಮಾದ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್