Nandamuri Balakrishna: ನಂದಮೂರಿ ಬಾಲಕೃಷ್ಣ ನಟನೆಯ 108ನೇ ಚಿತ್ರಕ್ಕೆ ‘ಭಗವಂತ ಕೇಸರಿ’ ಶೀರ್ಷಿಕೆ; ಟೀಸರ್​ ಬಿಡುಗಡೆಗೆ ಟೈಮ್​ ಫಿಕ್ಸ್​

Happy Birthday Balayya: ‘ಭಗವಂತ ಕೇಸರಿ’ ಸಿನಿಮಾಗೆ ಅನಿಲ್​ ರವಿಪುಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಥಮನ್​ ಅವರು ಸಂಗೀತ ನೀಡುತ್ತಿದ್ದಾರೆ. ‘ಐ ಡೋಂಟ್​ ಕೇರ್​’ ಎಂಬ ಟ್ಯಾಗ್​ ಲೈನ್​ ಗಮನ ಸೆಳೆಯುತ್ತಿದೆ.

Nandamuri Balakrishna: ನಂದಮೂರಿ ಬಾಲಕೃಷ್ಣ ನಟನೆಯ 108ನೇ ಚಿತ್ರಕ್ಕೆ ‘ಭಗವಂತ ಕೇಸರಿ’ ಶೀರ್ಷಿಕೆ; ಟೀಸರ್​ ಬಿಡುಗಡೆಗೆ ಟೈಮ್​ ಫಿಕ್ಸ್​
ನಂದಮೂರಿ ಬಾಲಕೃಷ್ಣ
Follow us
ಮದನ್​ ಕುಮಾರ್​
|

Updated on:Jun 10, 2023 | 7:21 AM

ಟಾಲಿವುಡ್​ನ ಸ್ಟಾರ್​ ಹೀರೋ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರಿಗೆ ಇಂದು (ಜೂನ್​ 10) ಹುಟ್ಟುಹಬ್ಬದ (Nandamuri Balakrishna Birthday) ಸಂಭ್ರಮ. ಅವರ ಅಭಿಮಾನಿಗಳು ಈ ದಿನವನ್ನು ಸಡಗರದಿಂದ ಸೆಲೆಬ್ರೇಟ್​ ಮಾಡುತ್ತಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಬಾಲಯ್ಯಗೆ ವಿಶ್​ ಮಾಡುತ್ತಿದ್ದಾರೆ. ಈ ಖುಷಿಯನ್ನು ಹೆಚ್ಚಿಸಲು ಇನ್ನಷ್ಟು ಕಾರಣಗಳು ಸಿಕ್ಕಿವೆ. ನಂದಮೂರಿ ಬಾಲಕೃಷ್ಣ ನಟನೆಯ 108ನೇ ಸಿನಿಮಾದ ಟೈಟಲ್​ ರಿವೀಲ್​ ಆಗಿದೆ. ಈ ಸಿನಿಮಾಗೆ ‘ಭಗವಂತ ಕೇಸರಿ’ (Bhagavantha Kesari) ಎಂದು ಶೀರ್ಷಿಕೆ ಇಡಲಾಗಿದೆ. ಅದರ ಜೊತೆಗೆ ಫಸ್ಟ್​ ಲುಕ್​ ಕೂಡ ಹಂಚಿಕೊಳ್ಳಲಾಗಿದೆ. ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ನಂದಮೂರಿ ಬಾಲಕೃಷ್ಣ ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅಂತಹ ಅಭಿಮಾನಿಗಳಿಗಾಗಿ ಬಾಲಯ್ಯ ಮಾಸ್​ ಸಿನಿಮಾಗಳನ್ನು ಮಾಡುತ್ತಾರೆ. ಹಾಗಾಗಿ ಅವರನ್ನು ‘ಗಾಡ್​ ಆಫ್​ ಮಾಸಸ್​’ ಎಂದು ಕರೆಯಲಾಗುತ್ತಿದೆ. ಟ್ವಿಟರ್​ನಲ್ಲಿ ಈ ಹ್ಯಾಶ್​ಟ್ಯಾಗ್​ ಕೂಡ ಟ್ರೆಂಡ್​ ಆಗಿದೆ. ಇನ್ನು, ‘ಭಗವಂತ ಕೇಸರಿ’ ಸಿನಿಮಾದ ಟೀಸರ್​ ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದೆ. ಇಂದು ಬಾಲಯ್ಯ ಅವರ ಜನ್ಮದಿನ ಪ್ರಯುಕ್ತ ಬೆಳಗ್ಗೆ 10 ಗಂಟೆ 19 ನಿಮಿಷಕ್ಕೆ ಟೀಸರ್​ ರಿಲೀಸ್​ ಆಗಲಿದೆ. ಅದನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾದಿದ್ದಾರೆ.

ಈ ವರ್ಷ ನಂದಮೂರಿ ಬಾಲಕೃಷ್ಣ ಅವರು ನಟಿಸಿದ ‘ವೀರ ಸಿಂಹ ರೆಡ್ಡಿ’ ಸಿನಿಮಾ ಜನವರಿ 12ರಂದು ತೆರೆಕಂಡಿತ್ತು. ಫ್ಯಾಮಿಲಿ ಕಥಾಹಂದರ ಹೊಂದಿದ್ದ ಆ ಮಾಸ್​ ಸಿನಿಮಾಗೆ ಜನರ ಮೆಚ್ಚುಗೆ ಸಿಕ್ಕಿತು. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್​ ನಟಿಸಿದ್ದರು. ಹಾಡುಗಳು ಸೂಪರ್​ ಹಿಟ್ ಆದವು. ಈ ಯಶಸ್ಸಿನಿಂದ ಬಾಲಯ್ಯ ಅವರ ವೃತ್ತಿಜೀವನದ ಮೈಲೇಜ್​ ಹೆಚ್ಚಿತು. ಈಗ ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಜೋರಾಗಿದೆ.

ಇದನ್ನೂ ಓದಿ: Tamannaah: ಒಂದೇ ಹಾಡಿಗೆ 5 ಕೋಟಿ ರೂ. ಡಿಮ್ಯಾಂಡ್​ ಮಾಡಿದ್ರಾ ತಮನ್ನಾ? ಬಾಲಯ್ಯ ಚಿತ್ರದ ಗಾಸಿಪ್​ಗೆ ನಟಿ ಪ್ರತಿಕ್ರಿಯೆ

‘ಭಗವಂತ ಕೇಸರಿ’ ಸಿನಿಮಾಗೆ ಅನಿಲ್​ ರವಿಪುಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಥಮನ್​ ಅವರು ಸಂಗೀತ ನೀಡುತ್ತಿದ್ದಾರೆ. ‘ಐ ಡೋಂಟ್​ ಕೇರ್​’ ಎಂಬ ಟ್ಯಾಗ್​ ಲೈನ್​ ಗಮನ ಸೆಳೆಯುತ್ತಿದೆ. ಟೀಸರ್​ ಬಿಡುಗಡೆ ಆದ ಬಳಿಕ ‘ಭಗವಂತ ಕೇಸರಿ’ ಚಿತ್ರದ ಹೈಪ್​ ಇನ್ನಷ್ಟು ಹೆಚ್ಚಾಗಲಿದೆ. ವಿಶೇಷ ಏನೆಂದರೆ ಈ ಟೀಸರ್​ ಅನ್ನು 108 ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಈ ಸಿನಿಮಾದಲ್ಲಿ ಬಾಲಯ್ಯ ಅವರ ಲುಕ್​ ಹೇಗಿದೆ ಎಂಬುದು ಕೂಡ ಟೀಸರ್​ನಲ್ಲಿ ರಿವೀಲ್​ ಆಗುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:19 am, Sat, 10 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ