ಮತ್ತೆ ಜೂ ಎನ್​ಟಿಆರ್ ಅನ್ನು ದೂರವಿಟ್ಟ ನಂದಮೂರಿ ಬಾಲಕೃಷ್ಣ-ಚಂದ್ರಬಾಬು ನಾಯ್ಡು

Nandamuri Family: ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪದೇ-ಪದೇ ಸಾಬೀತಾಗುತ್ತಿದೆ. ನಿನ್ನೆ (ಮೇ 20) ನಡೆದ ಎನ್​ಟಿಆರ್ ಜನ್ಮಶತಮಾನೋತ್ಸವಕ್ಕೆ ಜೂ ಎನ್​ಟಿಆರ್ ಗೈರಾಗಿದ್ದರು.

ಮತ್ತೆ ಜೂ ಎನ್​ಟಿಆರ್ ಅನ್ನು ದೂರವಿಟ್ಟ ನಂದಮೂರಿ ಬಾಲಕೃಷ್ಣ-ಚಂದ್ರಬಾಬು ನಾಯ್ಡು
ಜೂ ಎನ್​ಟಿಆರ್
Follow us
ಮಂಜುನಾಥ ಸಿ.
|

Updated on: May 21, 2023 | 11:09 PM

ತೆಲುಗು ಚಿತ್ರರಂಗದ ಅಗ್ರಗಣ್ಯ ಕುಟುಂಬ ನಂದಮೂರಿ ಕುಟುಂಬ (Nandamuri Family). ನಂದಮೂರಿ ತಾರಕ ರಾಮಾರಾವ್ (NTR) ತೆಲುಗು ಚಿತ್ರರಂಗದ ದಂತಕತೆ. ತೆಲುಗು ಚಿತ್ರರಂಗ ಈಗಿನ ಸ್ಥಿತಿಯಲ್ಲಿರಲು ಬುನಾದಿ ಹಾಕಿಕೊಟ್ಟರವರು. ತಮ್ಮದೇ ಸ್ವಂತ ಪಕ್ಷ ಕಟ್ಟಿ ಅವಿಭಜಿತ ಆಂಧ್ರ ಪ್ರದೇಶದ ಸಿಎಂ ಸಹ ಆದವರು. ಈಗ ಅವರ ಕುಟುಂಬದಲ್ಲಿ ಹಲವು ಜನ ಸಿನಿಮಾ ನಟರು, ರಾಜಕಾರಣಿಗಳು ಇದ್ದಾರೆ. ಅದರಲ್ಲಿ ಪ್ರಮುಖರು ಎನ್​ಟಿಆರ್ ಪುತ್ರ ಬಾಲಕೃಷ್ಣ (Nandamuri Balakrishna) ಹಾಗೂ ಅಳಿಯ ಚಂದ್ರಬಾಬು ನಾಯ್ಡು(Chandrababu Naidu). ಆದರೆ ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲವೆಂದು ಪದೇ ಪದೇ ಸಾಬೀತಾಗುತ್ತಿದೆ. ಎನ್​ಟಿಆರ್​ ಶತಮಾನೋತ್ಸವವನ್ನು ಕುಟುಂಬವು ಆಚರಿಸುತ್ತಿದ್ದು ಈ ವರೆಗೆ ನಡೆದ ಎರಡೂ ಕಾರ್ಯಕ್ರಮಗಳಿಂದ ಜೂ ಎನ್​ಟಿಆರ್ ದೂರ ಉಳಿದಿದ್ದಾರೆ.

ಕೆಲವೇ ದಿನಗಳ ಅವಧಿಯಲ್ಲಿ ಎರಡು ಬಾರಿ ಎನ್​ಟಿಆರ್ ಜನ್ಮಶತಾಬ್ಧಿಯನ್ನು ಬಾಲಕೃಷ್ಣ ಹಾಗೂ ಚಂದ್ರಬಾಬು ನಾಯ್ಡು ಸೇರಿ ಆಯೋಜಿಸಿದ್ದಾರೆ ಆದರೆ ಎರಡೂ ಕಾರ್ಯಕ್ರಮಗಳಿಂದ ನಟ ಜೂ ಎನ್​ಟಿಆರ್ ದೂರ ಉಳಿದಿದ್ದಾರೆ. ಕೆಲವು ಸುದ್ದಿಗಳ ಪ್ರಕಾರ, ಜೂ ಎನ್​ಟಿಆರ್ ಅನ್ನು ಬೇಕೆಂದೇ ಹೊರಗೆ ಇಡಲಾಗಿದೆ. ಅವರಿಗೆ ಆಹ್ವಾನವನ್ನು ಸಹ ನೀಡಲಾಗಿಲ್ಲ.

ನಿನ್ನೆ (ಮೇ 20) ರಂದು ಹೈದರಾಬಾದ್​ನಲ್ಲಿ ಎನ್​ಟಿಆರ್ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡದ ನಟ ಶಿವರಾಜ್ ಕುಮಾರ್ ಸೇರಿದಂತೆ ತೆಲುಗಿನ ಹಲವು ನಟರು ಭಾಗವಹಿಸಿದ್ದರು, ಆದರೆ ಜೂ ಎನ್​ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಇಬ್ಬರೂ ಸಹ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಕೆಲವು ದಿನಗಳ ಮುಂಚೆ ಇದೇ ಕಾರ್ಯಕ್ರಮವನ್ನು ಆಂಧ್ರದ ವಿಶಾಖಪಟ್ಟಣದಲ್ಲಿ ಆಯೋಜಿಸಲಾಗಿತ್ತು ಆದರೆ ಆ ಕಾರ್ಯಕ್ರಮಕ್ಕೆ ಸಹ ಜೂ ಎನ್​ಟಿಆರ್​ಗೆ ಆಹ್ವಾನಿಸಲಾಗಿರಲಿಲ್ಲ.

ಇದನ್ನೂ ಓದಿ:ಎನ್​ಟಿಆರ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ? ಜೂ ಎನ್​ಟಿಆರ್ ಏರಿಗೆ, ಬಾಲಕೃಷ್ಣ-ಚಂದ್ರಬಾಬು ನೀರಿಗೆ

ಆದರೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಜೂ ಎನ್​ಟಿಆರ್ ಪಾಲ್ಗೊಳ್ಳದೇ ಇರಲು ಅವರ ವೈಯಕ್ತಿಕ ಕಾರಣ ಎನ್ನಲಾಗುತ್ತಿದೆ ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಜೂ ಎನ್​ಟಿಆರ್ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ನಿನ್ನೆ (ಮೇ 20) ಜೂ ಎನ್​ಟಿಆರ್ ಹುಟ್ಟುಹಬ್ಬವೂ ಆಗಿರುವ ಕಾರಣ ಅವರು ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸ ಬೇಕಾದ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ ಎನ್ನಲಾಗುತ್ತಿದೆ. ಆದರೆ ಇದು ಎಷ್ಟು ಸತ್ಯ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.

ಎನ್​ಟಿಆರ್ ಕುಟುಂಬದಲ್ಲಿ ವೈಮಸ್ಯ ಹೊಸದೇನೂ ಅಲ್ಲ. ಭಾರಿ ಸಂಖ್ಯೆಯ ಅಭಿಮಾನಿಗಳು, ಜನಬೆಂಬಲ ಹೊಂದಿರುವ ಜೂ ಎನ್​ಟಿಆರ್ ಅನ್ನು ಬೇಕೆಂದೇ ಚಂದ್ರಬಾಬು ನಾಯ್ಡು, ಬಾಲಕೃಷ್ಣ ಇನ್ನಿತರರು ಟಿಡಿಪಿ ಪಕ್ಷದಿಂದ ದೂರ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಚಂದ್ರಬಾಬು ನಾಯ್ಡು, ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ಟಿಡಿಪಿ ಪಕ್ಷದ ಭವಿಷ್ಯದ ನಾಯಕನನ್ನಾಗಿಸುವ ಯತ್ನ ಮಾಡುತ್ತಿದ್ದು, ಜೂ ಎನ್​ಟಿಆರ್, ಪಕ್ಷದ ಹತ್ತಿರಕ್ಕೆ ಬಂದರೆ ತಮ್ಮ ಉದ್ದೇಶ ಫಲಿಸುವುದಿಲ್ಲವೆಂಬ ಕಾರಣಕ್ಕೆ ಅವರನ್ನು ದೂರವಿಟ್ಟಿದ್ದಾರೆ ಎನ್ನುವ ಮಾತುಗಳು ಇವೆ.

ಅಲ್ಲದೆ, ಜೂ ಎನ್​ಟಿಆರ್ ಸಹ ಇತ್ತೀಚೆಗೆ ಬಿಜೆಪಿಯ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆಂಧ್ರದ ಆಡಳಿತ ಪಕ್ಷದ ಕೆಲವರೊಟ್ಟಿಗೆ ಆಪ್ತ ಸಂಬಂಧವನ್ನು ಜೂ ಎನ್​ಟಿಆರ್ ಹೊಂದಿದ್ದಾರೆ. ಅಲ್ಲದೆ, ಆಂಧ್ರ ವಿಧಾನಸಭೆಯಲ್ಲಿ ತಮ್ಮ ಪತ್ನಿಯ ಹೆಸರು ಹೇಳಿ ಬೈದಿದ್ದಾರೆ ಎಂದು ಚಂದ್ರಬಾಬು ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಅತ್ತಾಗ, ಎನ್​ಟಿಆರ್ ಕುಟುಂಬದವರು ಒಕ್ಕೂರಲಾಗಿ ವಿಡಿಯೋ ಮಾಡಿ ಖಂಡಿಸಿದ್ದರು. ಕೆಲವರು ಕಟು ಪದಗಳನ್ನು ಆಡಳಿತ ಪಕ್ಷದ ವಿರುದ್ಧ ಬಳಸಿದ್ದರು. ಜೂ ಎನ್​ಟಿಆರ್ ಸಹ ಪ್ರತ್ಯೇಕ ವಿಡಿಯೋ ಮಾಡಿ ಆಡಳಿತ ಪಕ್ಷದ ನಡೆಯನ್ನು ಖಂಡಿಸಿದ್ದರು. ಆದರೆ ಜೂ ಎನ್​ಟಿಆರ್ ಬಹಳ ಮೃದು ಧೋರಣೆಯಲ್ಲಿ ವಿಡಿಯೋ ಮಾಡಿದ್ದಾರೆ ಎಂದು ಆಗಲೂ ಕೆಲವರು ಟೀಕಿಸಿದ್ದರು. ಏನೇ ಆಗಲಿ ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಂತೂ ಪದೇ-ಪದೇ ಜಗಜ್ಜಾಹೀರಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ