25 ಲಕ್ಷ ಕೊಡುತ್ತೇನೆಂದು ಹೇಳಿ ಒತ್ತಾಯದ ಬಳಿಕ ಕೊಟ್ಟಿದ್ದು ಬರೀ 6 ಲಕ್ಷ: ನಿರ್ಮಾಪಕರ ಮೇಲೆ ನಿರ್ದೇಶಕ ಆರೋಪ
PC Shekhar: ನಿರ್ಮಾಪಕ, ನಟ ಕಡ್ಡಿಪುಡಿ ಚಂದ್ರು ವಿರುದ್ಧ ಆರೋಪ ಮಾಡಿರುವ ನಿರ್ದೇಶಕ ಪಿಸಿ ಶೇಖರ್, ಲವ್ ಬರ್ಡ್ಸ್ ಸಿನಿಮಾಕ್ಕೆ ಕೆಲಸ ಮಾಡಿದ್ದಕ್ಕೆ ಒಪ್ಪಂದದಂತೆ ಸಂಭಾವನೆ ನೀಡಿಲ್ಲ ಎಂದಿದ್ದಾರೆ.
ಡಾರ್ಲಿಂಗ್ ಕೃಷ್ಣ (Darling Krishna), ಮಿಲನಾ ನಾಗರಾಜ್ (Milana Nagaraj) ನಟಿಸಿದ್ದ ಲವ್ ಬರ್ಡ್ಸ್ ಸಿನಿಮಾ ವಿವಾದಕ್ಕೆ ಸಿಲುಕಿದೆ. ಸಿನಿಮಾದ ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ನಿರ್ದೇಶಕ ಪಿಸಿ ಶೇಖರ್ ಹಲವು ಆರೋಪಗಳನ್ನು ಮಾಡಿದ್ದಾರೆ. ಸತತ ಹದಿನೆಂಟು ತಿಂಗಳು ಕೆಲಸ ಮಾಡಿದ್ದರೂ ಸಹ ನಿರ್ಮಾಪಕರು ಹಣ ನೀಡದೆ ಮೋಸ ಮಾಡಿದ್ದಾರೆ ಎಂದಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ನಿರ್ದೇಶಕ ಪಿಸಿ ಶೇಖರ್ ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ