AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NBK Birthday: ನಂದಮೂರಿ ಬಾಲಕೃಷ್ಣ ಜನ್ಮದಿನಕ್ಕೆ ಟೀಸರ್​ ಮೂಲಕ ವಿಶ್​ ಮಾಡಿದ ‘ಎನ್​ಬಿಕೆ 107’ ಬಳಗ

Balayya Birthday | NBK 107 Teaser: ‘ಎನ್​ಬಿಕೆ 107’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಹೊಸ ಟೀಸರ್​ ಮೂಡಿಬಂದಿದೆ.

NBK Birthday: ನಂದಮೂರಿ ಬಾಲಕೃಷ್ಣ ಜನ್ಮದಿನಕ್ಕೆ ಟೀಸರ್​ ಮೂಲಕ ವಿಶ್​ ಮಾಡಿದ ‘ಎನ್​ಬಿಕೆ 107’ ಬಳಗ
ನಂದಮೂರಿ ಬಾಲಕೃಷ್ಣ
TV9 Web
| Edited By: |

Updated on:Jun 10, 2022 | 8:01 AM

Share

ತೆಲುಗು ಚಿತ್ರರಂಗದ ಮಾಸ್​ ಹೀರೋ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಜನ್ಮದಿನವನ್ನು ಅಭಿಮಾನಿಗಳು ಅದ್ದೂರಿಯಾಗಿ ಇಂದು (ಜೂನ್​ 10) ಆಚರಿಸುತ್ತಿದ್ದಾರೆ. ಅವರ ಬರ್ತ್​ಡೇ ಎಂದರೆ ಫ್ಯಾನ್ಸ್​ ಪಾಲಿಗೆ ಹಬ್ಬ. ಜನ್ಮದಿನದ (Nandamuri Balakrishna Birthday) ಪ್ರಯುಕ್ತ ‘ಎನ್​ಬಿಕೆ 107’ ಸಿನಿಮಾ ತಂಡದಿಂದ ಹೊಸ ಟೀಸರ್​ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಲಾಗಿದೆ. ಅಭಿಮಾನಿಗಳು, ಸ್ನೇಹಿತರು, ಆಪ್ತರು ಮತ್ತು ಅನೇಕ ಸೆಲೆಬ್ರಿಟಿಗಳು ಅವರಿಗೆ ವಿಶ್​ ಮಾಡುತ್ತಿದ್ದಾರೆ. ಟಾಲಿವುಡ್​ನಲ್ಲಿ ನಂದಮೂರಿ ಬಾಲಕೃಷ್ಣ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಕಳೆದ ವರ್ಷ ತೆರೆಕಂಡ ‘ಅಖಂಡ’ ಸಿನಿಮಾ ಮೂಲಕ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಆ ಯಶಸ್ಸಿನ ಖುಷಿಯಲ್ಲೇ ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಎನ್​ಬಿಕೆ 107’ (NBK 107) ಎಂದು ಶೀರ್ಷಿಕೆ ಇಡಲಾಗಿದೆ. ಇದೇ ಸಿನಿಮಾದಲ್ಲಿ ದುನಿಯಾ ವಿಜಯ್​ ಕೂಡ ನಟಿಸುತ್ತಿರುವುದು ವಿಶೇಷ.

ನೂರಾರು ಸಿನಿಮಾಗಳಲ್ಲಿ ನಟಿಸಿರುವ ನಂದಮೂರಿ ಬಾಲಕೃಷ್ಣ ಅವರ ಅನುಭವ ಅಪಾರ. ಮಾಸ್​ ಇಮೇಜ್​ ಹೊಂದಿರುವ ಅವರು ಆ ಬಗೆಯ ಚಿತ್ರಗಳನ್ನೇ ಹೆಚ್ಚಾಗಿ ಮಾಡುತ್ತಿದ್ದಾರೆ. ಇನ್ನು, ಮಾಸ್​ ಸಿನಿಮಾಗಳ ಮೂಲಕವೇ ಹೆಸರಾದವರು ನಿರ್ದೇಶಕ ಗೋಪಿಚಂದ್ ಮಲಿನೇನಿ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ಎನ್​ಬಿಕೆ 107’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಈ ಹೊಸ ಟೀಸರ್​ ಮೂಡಿಬಂದಿದೆ.

ಇದನ್ನೂ ಓದಿ
Image
ದುನಿಯಾ ವಿಜಯ್​ ಎದುರು ಕಾದಾಡಲು ‘ಬೇಟೆ ಶುರು..’ ಎಂದು ಮಾಸ್​ ಅವತಾರ ತಾಳಿದ ನಂದಮೂರಿ ಬಾಲಕೃಷ್ಣ
Image
Duniya Vijay: ‘ಎನ್​ಬಿಕೆ107’ ಚಿತ್ರದ ಶೂಟಿಂಗ್ ಆರಂಭಿಸಿದ ದುನಿಯಾ ವಿಜಯ್
Image
NBK107: ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ ‘ಮಫ್ತಿ’? ಕುತೂಹಲ ಮೂಡಿಸಿದ ‘ಎನ್​ಬಿಕೆ107’ ಪೋಸ್ಟರ್
Image
NBK107: ದುನಿಯಾ ವಿಜಯ್ ಆಯ್ತು, ಇದೀಗ ‘ಮಾಣಿಕ್ಯ’ದ ಬೆಡಗಿಯ ಸರದಿ; ಹಿರಿದಾಗುತ್ತಿದೆ ‘ಎನ್​ಬಿಕೆ107’ ತಾರಾಗಣ

ನಂದಮೂರಿ ಬಾಲಕೃಷ್ಣ ಅವರಿಗೆ ಈಗ 62 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ‘ಎನ್​ಬಿಕೆ 107’ ಚಿತ್ರದಲ್ಲೂ ಸಖತ್​ ಸಾಹಸ ದೃಶ್ಯಗಳಿವೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಪಂಚಿಂಗ್​ ಡೈಲಾಗ್​ಗಳು ಕೂಡ ಅವರ ಅಭಿಮಾನಿಗಳಿಗೆ ಇಷ್ಟ​ ಆಗಿದೆ. ಅಂತಿಮವಾಗಿ ಈ ಸಿನಿಮಾಗೆ ಏನು ಟೈಟಲ್​ ಇಡಬಹುದು ಎಂಬ ಕೌತುಕ ಮೂಡಿದೆ. ದುನಿಯಾ ವಿಜಯ್​ ಅವರಿಗೆ ಇದು ಮೊದಲ ತೆಲುಗು ಸಿನಿಮಾ ಆದ್ದರಿಂದ ಅವರ ಅಭಿಮಾನಿಗಳ ವಲಯದಲ್ಲೂ ನಿರೀಕ್ಷೆ ಹೆಚ್ಚಿದೆ. ಪ್ರತಿಷ್ಠಿತ ‘ಮೈತ್ರಿ ಮೂವೀ ಮೇಕರ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:01 am, Fri, 10 June 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?