ನಂದಮೂರಿ ಕುಟುಂಬದಲ್ಲಿ ಸೂತಕದ ಛಾಯೆ; ಆಸ್ಕರ್​ಗಾಗಿ ಜೂ.ಎನ್​ಟಿಆರ್​ ಅಮೆರಿಕಕ್ಕೆ ತೆರಳುವುದು ಮತ್ತಷ್ಟು ವಿಳಂಬ  

ಮಾರ್ಚ್ 12ರಂದು ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ‘ಆರ್​ಆರ್​ಆರ್​’ ತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸುತ್ತಿದೆ.

ನಂದಮೂರಿ ಕುಟುಂಬದಲ್ಲಿ ಸೂತಕದ ಛಾಯೆ; ಆಸ್ಕರ್​ಗಾಗಿ ಜೂ.ಎನ್​ಟಿಆರ್​ ಅಮೆರಿಕಕ್ಕೆ ತೆರಳುವುದು ಮತ್ತಷ್ಟು ವಿಳಂಬ  
ಜೂ.ಎನ್​ಟಿಆರ್
Follow us
ರಾಜೇಶ್ ದುಗ್ಗುಮನೆ
|

Updated on:Feb 21, 2023 | 9:45 AM

ಜೂ.ಎನ್​ಟಿಆರ್ (Jr.Ntr) ಕುಟುಂಬದ ನಂದಮೂರಿ ತಾರಕ ರತ್ನ ಅವರು ಇತ್ತೀಚೆಗೆ ಮೃತಪಟ್ಟರು. ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಹಲವು ದಿನ ಚಿಕಿತ್ಸೆ ಪಡೆದರು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು. ಅವರ ಅಂತ್ಯಸಂಸ್ಕಾರ ನೆರವೇರಿದೆ. ಈ ಸಂದರ್ಭದಲ್ಲಿ ಜೂ.ಎನ್​ಟಿಆರ್ ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈಗ ಜೂ.ಎನ್​ಟಿಆರ್ ಅವರ ಅಮೆರಿಕ ಟ್ರಿಪ್ ಮತ್ತಷ್ಟು ವಿಳಂಬ ಆಗಲಿದೆ.

ಈ ಬಾರಿ ಆಸ್ಕರ್ ಅವಾರ್ಡ್ ಭಾರತೀಯರ ಪಾಲಿಗೆ ವಿಶೇಷವಾಗಿದೆ. ಇದಕ್ಕೆ ಕಾರಣ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ರೇಸ್​ನಲ್ಲಿರುವುದು. ಮಾರ್ಚ್ 12ರಂದು (ಭಾರತೀಯ ಕಾಲಮಾನ ಮಾರ್ಚ್​ 13 ಮುಂಜಾನೆ 5.30) ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ‘ಆರ್​ಆರ್​ಆರ್​’ ತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸುತ್ತಿದೆ.

ರಾಮ್ ಚರಣ್ ಅವರು ಸೋಮವಾರ (ಫೆ.20) ಅಮೆರಿಕಕ್ಕೆ ತೆರಳಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಕೂಡ ಶೀಘ್ರವೇ ಅಮೆರಿಕ ತಲುಪಲಿದ್ದಾರೆ. ಜೂ.ಎನ್​ಟಿಆರ್ ಕೂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆದರೆ, ಕುಟುಂಬದಲ್ಲಿ ನಡೆದ ದುರ್ಘಟನೆಯಿಂದ ಅವರು ನೊಂದುಕೊಂಡಿದ್ದಾರೆ. ಹೀಗಾಗಿ, ಅಮೆರಿಕಕ್ಕೆ ಅವರು ಪ್ರವಾಸ ಬೆಳೆಸುವುದು ಮತ್ತಷ್ಟು ವಿಳಂಬ ಆಗಲಿದೆ.

ಇದನ್ನೂ ಓದಿ
Image
‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​
Image
ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋಗ್ತಾರೆ ಅಂತ ಭಾವಿಸಿದ್ದ ನಟಿ
Image
ಗಣೇಶನಿಗೆ ಕೈ ಮುಗಿದ ಸೈಫ್​ ಅಲಿ ಖಾನ್​ ವಿರುದ್ಧ ಒಂದು ವರ್ಗದ ನೆಟ್ಟಿಗರು ಗರಂ; ಹಬ್ಬದ ನಡುವೆ ಟ್ರೋಲ್​​
Image
‘ಕೂದಲು ಮುಟ್ಟಿದ್ರೆ ಕರೀನಾ ನನ್ನ ಕೊಂದುಬಿಡ್ತಾಳೆ’; ಸಂಸಾರದ ಗುಟ್ಟು ತೆರೆದಿಟ್ಟ ಸೈಫ್​ ಅಲಿ ಖಾನ್​

ಇದನ್ನೂ ಓದಿ: ಕ್ಯಾನ್ಸರ್​ನಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಬಾಲಕನ ಆಸೆ ಈಡೇರಿಸಿದ ರಾಮ್ ಚರಣ್

ಮಾರ್ಚ್​ 12ರಂದು ಲಾಸ್​ ಏಂಜಲೀಸ್​ನಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಾಲಿವುಡ್​ನ ಅನೇಕ ದಿಗ್ಗಜರು ಅದರಲ್ಲಿ ಭಾಗಿ ಆಗಲಿದ್ದಾರೆ. ಅವರೆಲ್ಲರ ಮುಂದೆ ‘ನಾಟು ನಾಟು..’ ಗೀತೆ ಹಾಡುವ ಅವಕಾಶ ಎಂಎಂ ಕೀರವಾಣಿ ಅವರಿಗೆ ಸಿಗುತ್ತಿದೆ. ಈ ಬಗ್ಗೆ ಅವರು ಕೊಂಚ ನರ್ವಸ್​ ಆಗಿದ್ದಾರೆ. ಚಿತ್ರರಂಗದಲ್ಲಿ ಎಂಎಂ ಕೀರವಾಣಿ ಅವರ ಅನುಭವ ಅಪಾರ. 1990ರಿಂದಲೂ ಅವರು ಸಕ್ರಿಯರಾಗಿದ್ದಾರೆ. ಹಲವಾರು ಸೂಪರ್​ ಹಿಟ್​ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:55 am, Tue, 21 February 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ