AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oh My God 2: ಶಿವನ ವೇಷದಲ್ಲಿ ಢಮರುಗ ಹಿಡಿದು ಬಂದ ಅಕ್ಷಯ್​ ಕುಮಾರ್​; ಆಗಸ್ಟ್​ 11ಕ್ಕೆ ‘ಓಹ್​ ಮೈ ಗಾಡ್​ 2’ ಬಿಡುಗಡೆ

Oh My God 2 Release Date: ಅಕ್ಷಯ್​ ಕುಮಾರ್ ಅವರು ಪೈಪೋಟಿಗೆ ಹೆದರುವವರಲ್ಲ. ಆಗಸ್ಟ್​ 11ರಂದು ‘ಓಹ್​ ಮೈ ಗಾಡ್​ 2’ಬಿಡುಗಡೆ ಆಗುತ್ತಿರುವುದರಿಂದ ಅಂದು ಅವರು ಬೇರೆ ಸ್ಟಾರ್​ ಹೀರೋಗಳ ಸಿನಿಮಾಗಳ ಎದುರು ಪೈಪೋಟಿ ನೀಡಬೇಕಿದೆ.

Oh My God 2: ಶಿವನ ವೇಷದಲ್ಲಿ ಢಮರುಗ ಹಿಡಿದು ಬಂದ ಅಕ್ಷಯ್​ ಕುಮಾರ್​; ಆಗಸ್ಟ್​ 11ಕ್ಕೆ ‘ಓಹ್​ ಮೈ ಗಾಡ್​ 2’ ಬಿಡುಗಡೆ
ಅಕ್ಷಯ್​ ಕುಮಾರ್​
ಮದನ್​ ಕುಮಾರ್​
|

Updated on: Jun 10, 2023 | 8:03 AM

Share

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಒಂದು ಗೆಲುವಿಗಾಗಿ ಕಾದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ನಟಿಸಿದ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡುತ್ತಿಲ್ಲ ಎಂಬ ಬೇಸರ ಇದೆ. ಹಾಗಂತ ಅವರು ಸಿನಿಮಾಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿಲ್ಲ. ಬ್ಯಾಕ್​ ಟು ಬ್ಯಾಕ್​ ಚಿತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅಕ್ಷಯ್​ ಕುಮಾರ್​ ನಟಿಸಿರುವ ‘ಓಹ್​ ಮೈ ಗಾಡ್ 2​’ (Oh My God 2) ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗ ಈ ಚಿತ್ರದ ಬಿಡುಗಡೆ ದಿನಾಂಕ ರಿವೀಲ್​ ಆಗಿದೆ. ಅದನ್ನು ತಿಳಿಸುವ ಸಲುವಾಗಿ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಆಗಸ್ಟ್​ 11ರಂದು ‘ಓಹ್​ ಮೈ ಗಾಡ್ 2​’ ಸಿನಿಮಾ ತೆರೆಕಾಣಲಿದೆ. ಈ ಹೊಸ ಪೋಸ್ಟರ್​ನಲ್ಲಿ ಅಕ್ಷಯ್​ ಕುಮಾರ್​ ಅವರು ಶಿವನ ವೇಷ ಧರಿಸಿ ಪೋಸ್ ನೀಡಿದ್ದಾರೆ. ಅವರ ಕೈಯಲ್ಲಿ ಢಮರುಗ ಇದೆ. ಇದರಿಂದ ಚಿತ್ರದ ಮೇಲಿನ ಕೌತುಕ ಹೆಚ್ಚಾಗಿದೆ.

‘ಓಹ್​ ಮೈ ಗಾಡ್​ 2’ ಸಿನಿಮಾಗೆ ಅಮಿತ್​ ರೈ ನಿರ್ದೇಶನ ಮಾಡಿದ್ದಾರೆ. ‘ಓಹ್​ ಮೈ ಗಾಡ್​’ ಸಿನಿಮಾ 2012ರಲ್ಲಿ ರಿಲೀಸ್​ ಆಗಿ ಸೂಪರ್​ ಹಿಟ್​ ಆಗಿತ್ತು. ಪರೇಶ್​ ರಾವಲ್​ ಮತ್ತು ಅಕ್ಷಯ್​ ಕುಮಾರ್​ ಅವರ ಕಾಂಬಿನೇಷನ್​ ನೋಡಿ ಫ್ಯಾನ್ಸ್​ ಖುಷಿಪಟ್ಟಿದ್ದರು. ಈಗ ಅದರ ಸೀಕ್ವೆಲ್​ ಆಗಿ ‘ಓಹ್​ ಮೈ ಗಾಡ್​ 2’ ಮೂಡಿಬರುತ್ತಿದೆ. ಈ ಬಾರಿ ಯಾವ ಕಥೆಯನ್ನು ಪ್ರೇಕ್ಷಕರ ಮುಂದೆ ಇಡಲಾಗುತ್ತಿದೆ ಎಂಬ ಕುತೂಹಲ ಮನೆ ಮಾಡಿದೆ.

ಅಕ್ಷಯ್​ ಕುಮಾರ್ ಅವರು ಪೈಪೋಟಿಗೆ ಹೆದರುವವರಲ್ಲ. ಆಗಸ್ಟ್​ 11ರಂದು ‘ಓಹ್​ ಮೈ ಗಾಡ್​ 2’ಬಿಡುಗಡೆ ಆಗುತ್ತಿರುವುದರಿಂದ ಅಂದು ಅವರು ಬೇರೆ ಸ್ಟಾರ್​ ಹೀರೋಗಳ ಸಿನಿಮಾಗಳ ಎದುರು ಪೈಪೋಟಿ ನೀಡಬೇಕಿದೆ. ಖ್ಯಾತ ನಟರಾದ ಸನ್ನಿ ಡಿಯೋಲ್​ ಅಭಿನಯದ ‘ಗದರ್​ 2’ ಹಾಗೂ ರಣಬೀರ್​ ಕಪೂರ್​ ಅಭಿನಯದ ‘ಅನಿಮಲ್​’ ಸಿನಿಮಾಗಳು ಕೂಡ ಆಗಸ್ಟ್​ 11ರಂದು ರಿಲೀಸ್​ ಆಗುತ್ತಿವೆ. ಪ್ರೇಕ್ಷಕರು ಯಾವ ಚಿತ್ರಕ್ಕೆ ಹೆಚ್ಚಿನ ಒಲವು ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Akshay Kumar: ಜಾಮಾ ಮಸೀದಿ ಬಳಿ ಕಾಣಿಸಿಕೊಂಡ ಅಕ್ಷಯ್​ ಕುಮಾರ್​; ಸುತ್ತುವರಿದ ಅಭಿಮಾನಿಗಳು

ಇದು ಒಟಿಟಿ ಜಮಾನಾ. ಹಾಗಾಗಿ ಅನೇಕ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ‘ಓಹ್​ ಮೈ ಗಾಡ್​ 2’ ಸಿನಿಮಾವನ್ನು ಒಟಿಟಿಯಲ್ಲಿ ತೆರೆ ಕಾಣಿಸಬೇಕೋ ಅಥವಾ ಚಿತ್ರಮಂದಿರಲ್ಲಿ ಬಿಡುಗಡೆ ಮಾಡಬೇಕೋ ಎಂಬ ಬಗ್ಗೆ ಚಿತ್ರತಂಡದಲ್ಲೇ ಚರ್ಚೆ ನಡೆದಿತ್ತು. ಅಂತಿಮವಾಗಿ ಒಟಿಟಿಗಿಂತಲೂ ಥಿಯೇಟರ್​ನಲ್ಲಿ ಬಿಡುಗಡೆ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ‘ಆಗಸ್ಟ್​ 11ರಂದು ಚಿತ್ರಮಂದಿರಕ್ಕೆ ನಾವು ಬರುತ್ತೇವೆ. ನೀವೂ ಬರಲಿದ್ದೀರಿ’ ಎಂದು ಅಕ್ಷಯ್​ ಕುಮಾರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಸಿನಿಮಾದ ಮೂಲಕವಾದರೂ ಅವರು ಸಕ್ಸಸ್​ ಪಡೆಯುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More