ಸ್ಟಾರ್ ನಟ ಬೇಡವೆಂದಿದ್ದ ‘ಅನಿಮಲ್’ ಸಿನಿಮಾ, ರಣ್​ಬೀರ್​ಗೆ ದೊರಕಿದ್ದು ಹೇಗೆ?

Animal: ರಣ್​ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಸಿನಿಮಾ ಪಕ್ಕಾ ಹಿಟ್ ಆಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಆದರೆ ಈ ಸಿನಿಮಾವನ್ನು ಸ್ಟಾರ್ ನಟರೊಬ್ಬರು ರಿಜೆಕ್ಟ್ ಮಾಡಿದ್ದರು. ಹಾಗಾಗಿ ರಣ್​ಬೀರ್ ಕಪೂರ್ 'ಅನಿಮಲ್' ಸಿನಿಮಾದಲ್ಲಿ ನಟಿಸುವಂತಾಯ್ತು.

ಸ್ಟಾರ್ ನಟ ಬೇಡವೆಂದಿದ್ದ 'ಅನಿಮಲ್' ಸಿನಿಮಾ, ರಣ್​ಬೀರ್​ಗೆ ದೊರಕಿದ್ದು ಹೇಗೆ?
ಅನಿಮಲ್
Follow us
ಮಂಜುನಾಥ ಸಿ.
|

Updated on: Sep 28, 2023 | 9:50 PM

ರಣ್​ಬೀರ್ ಕಪೂರ್ (Ranbir Kapoor) ಹುಟ್ಟುಹಬ್ಬದ ವಿಶೇಷವಾಗಿ ಅವರ ನಟನೆಯ ‘ಅನಿಮಲ್’ ಸಿನಿಮಾದ ಟೀಸರ್ ಇಂದು (ಸೆಪ್ಟೆಂಬರ್ 28) ಬಿಡುಗಡೆ ಮಾಡಲಾಗಿದೆ. ರಣ್​ಬೀರ್ ಕಪೂರ್ ಹಿಂದೆಂದೂ ಕಾಣದ ಸಖತ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ಭಿನ್ನವಾದ ಹಾಗೂ ಅಷ್ಟೆ ಮಾಸ್ ಎಲಿಮೆಂಟ್​ಗಳು ಇರುವ ಕತೆ ಇದಾಗಿರಲಿದೆ ಎಂಬುದು ಪ್ರೋಮೋದಿಂದ ತಿಳಿದು ಬರುತ್ತಿದೆ. ಪ್ರೋಮೋ ನೋಡಿದ ಹಲವರು ಸೂಪರ್ ಹಿಟ್ ಸಿನಿಮಾ ಆಗುವ ಎಲ್ಲ ಲಕ್ಷಣ ಸಿನಿಮಾಕ್ಕೆ ಇದೆಯೆಂದು ಭವಿಷ್ಯ ನುಡಿದಿದ್ದಾರೆ. ಆದರೆ ‘ಅನಿಮಲ್’ ಸಿನಿಮಾಕ್ಕೆ ನಾಯಕ ಆಗಬೇಕಿದ್ದಿದ್ದು ಬೇರೊಬ್ಬ ಸೂಪರ್ ಸ್ಟಾರ್.

‘ಅರ್ಜುನ್ ರೆಡ್ಡಿ’ ಸಿನಿಮಾ ನಿರ್ದೇಶನ ಮಾಡಿ ಜನಪ್ರಿಯತೆ ಗಳಿಸಿರುವ ಸಂದೀಪ್ ರೆಡ್ಡಿ ವಂಗಾ ‘ಅನಿಮಲ್’ ಸಿನಿಮಾ ನಿರ್ದೇಶನ ಮಾಡಿದ್ದು, ರಣ್​ಬೀರ್ ಕಪೂರ್​ಗೆ ‘ಅನಿಮಲ್’ ಸಿನಿಮಾದ ಕತೆ ಹೇಳುವ ಮೊದಲು ಇದೇ ಕತೆಯನ್ನು ತೆಲುಗಿನ ಸ್ಟಾರ್ ನಟ ರಣ್​ಬೀರ್ ಕಪೂರ್​ಗೆ ಹೇಳಿದ್ದರಂತೆ. ಆದರೆ ಕತೆ ಕೇಳಿದ ಮಹೇಶ್​ ಬಾಬು ತಾವು ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದರಂತೆ. ಕೊನೆಗೆ ಸಂದೀಪ್ ರೆಡ್ಡಿ ವಂಗಾ ರಣ್​ಬೀರ್​ಗೆ ಕತೆ ಹೇಳಿದ ಕೂಡಲೇ ರಣ್​ಬೀರ್ ಒಪ್ಪಿಗೆ ಸೂಚಿಸಿದ್ದಾರೆ.

‘ಅರ್ಜುನ್ ರೆಡ್ಡಿ’ ಸಿನಿಮಾದ ಬಳಿಕ ಅದೇ ಸಿನಿಮಾದ ಹಿಂದಿ ರೀಮೇಕ್ ಆದ ‘ಕಬೀರ್ ಸಿಂಗ್’ ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದರು. ಆಗ ಅವರಿಗೆ ದೊರೆತ ಕೆಲವು ಬಾಲಿವುಡ್ ತಂತ್ರಜ್ಞರಿಂದ ರಣ್​ಬೀರ್ ಕಪೂರ್ ಅವರನ್ನು ಸಂಪರ್ಕ ಮಾಡಿ ಕತೆ ಹೇಳಿದ್ದರಂತೆ ಸಂದೀಪ್. ಪ್ಲೇಬಾಯ್, ಲವರ್ ಬಾಯ್ ಪಾತ್ರಗಳಿಂದ ಬೇಸತ್ತಿದ್ದ ರಣ್​ಬೀರ್ ಕಪೂರ್ ಮಾಸ್ ಜೊತೆಗೆ ನಟನೆಗೂ ಸ್ಕೋಪ್ ಇರುವ ‘ಅನಿಮಲ್’ ಸಿನಿಮಾದ ಪಾತ್ರ ಬಹುವಾಗಿ ಮೆಚ್ಚುಗೆಯಾಗಿ ತಟ್ಟನೆ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ:ಸಾಮಾನ್ಯ ವ್ಯಕ್ತಿ ಅನಿಮಲ್ ಆಗುವ ಕಥೆ; ರಣಬೀರ್ ಬರ್ತ್​ಡೇಗೆ ಟೀಸರ್ ಗಿಫ್ಟ್

‘ಅನಿಮಲ್’ ಸಿನಿಮಾದಲ್ಲಿ ಬೇರೆ-ಬೇರೆ ಷೇಡ್​ಗಳಲ್ಲಿ ರಣ್​ಬೀರ್ ಕಾಣಿಸಿಕೊಂಡಿದ್ದಾರೆ. ಅಪ್ಪನಿಂದ ಬೈಸಿಕೊಳ್ಳುವ-ಹೊಡೆಸಿಕೊಳ್ಳುವ ಮಗ, ಪ್ರೀತಿಸುವ ಹುಡುಗ, ಗ್ಯಾಂಗ್​ಸ್ಟರ್, ರಕ್ತಪೀಪಾಸು ಹೀಗೆ ಹಲವು ರಣ್​ಬೀರ್​ಗೆ ಹಲವು ಶೇಡ್​ಗಳು ‘ಅನಿಮಲ್’ ಸಿನಿಮಾದಲ್ಲಿವೆ. ಸಿನಿಮಾದಲ್ಲಿ ರಣ್​ಬೀರ್ ತಂದೆಯ ಪಾತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದಾರೆ. ಅವರ ಪಾತ್ರವೂ ಸಹ ಸಖತ್ ಡಿಫರೆಂಟ್ ಹಾಗೂ ಮಾಸ್ಸಿ ಆಗಿದೆ.

‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾದಲ್ಲಿ ಅವರ ಪಾತ್ರದ ಹೆಸರು ‘ಗೀತಾಂಜಲಿ’. ಬಾಲಿವುಡ್ ನಟ ಬಾಬಿ ಡಿಯೋಲ್ ಸಹ ‘ಅನಿಮಲ್’ ಸಿನಿಮಾದಲ್ಲಿದ್ದು, ವಿಲನ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ‘ಅನಿಮಲ್’ ಸಿನಿಮಾ ಡಿಸೆಂಬರ್ 1 ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್