The Vaccine War Twitter Review: ‘ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದ ಸಿನಿಮಾ’: ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಟ್ವಿಟರ್ ವಿಮರ್ಶೆ ಇಲ್ಲಿದೆ..
Vivek Agnihotri: ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ 10ರಿಂದ 12 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿದೆ. ವಿಮರ್ಶಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ‘ಚಂದ್ರಮುಖಿ 2’, ‘ಫುಕ್ರೆ 3’ ಮುಂತಾದ ಸಿನಿಮಾಗಳ ಜೊತೆ ‘ದಿ ವ್ಯಾಕ್ಸಿನ್ ವಾರ್’ ಸ್ಪರ್ಧಿಸುತ್ತಿದೆ.
ಹಲವು ಕಾರಣಗಳಿಂದಾಗಿ ‘ದಿ ವ್ಯಾಕ್ಸಿನ್ ವಾರ್’ (The Vaccine War) ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಇಂದು (ಸೆಪ್ಟೆಂಬರ್ 28) ಈ ಚಿತ್ರ ಬಿಡುಗಡೆ ಆಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹೈಪ್ ಹೆಚ್ಚಲು ಅದು ಕೂಡ ಒಂದು ಕಾರಣ. ಪಲ್ಲವಿ ಜೋಶಿ, ರೈಮಾ ಸೇನ್, ಸಪ್ತಮಿ ಗೌಡ, ನಾನಾ ಪಾಟೇಕರ್, ಅನುಪಮ್ ಖೇರ್, ಗಿರಿಜಾ ಓಕ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ದಿನವೇ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟರ್ ಮೂಲಕ ತಮ್ಮ ವಿಮರ್ಶೆ (The Vaccine War Twitter Review) ತಿಳಿಸಿದ್ದಾರೆ. ‘ಕೊವಿಡ್ ವೈರಸ್ಗೆ ವ್ಯಾಕ್ಸಿನ್ ಕಂಡುಹಿಡಿದ ವಿಜ್ಞಾನಿಗಳಿಗೆ ಈ ಚಿತ್ರದ ಮೂಲಕ ಗೌರವ ಸಲ್ಲಿಸಲಾಗಿದೆ’ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ಟ್ವಿಟರ್ ವಿಮರ್ಶೆ ಇಲ್ಲಿದೆ..
‘ದಿ ವ್ಯಾಕ್ಸಿನ್ ವಾರ್ ಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡಿದೆ. ತಾಂತ್ರಿಕವಾಗಿ ಉತ್ತಮವಾಗಿರುವ ಈ ಸಿನಿಮಾದಿಂದ ಭಾರತದ ವಿಜ್ಞಾನಿಗಳಿಗೆ ಗೌರವ ಸಲ್ಲಿಸಲಾಗಿದೆ. ಎಲ್ಲ ಕಲಾವಿದರ ನಟನೆ ಉತ್ಕೃಷ್ಟವಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆ ತುಂಬ ಚೆನ್ನಾಗಿದೆ. ಮನರಂಜನೆ ನೀಡುವುದರ ಜೊತೆಗೆ ಎಂಗೇಜಿಂಗ್ ಆಗಿದೆ. ಈ ಸಿನಿಮಾ ಮಾಡಿದ್ದಕ್ಕೆ ವಿವೇಕ್ ಅಗ್ನಿಹೋತ್ರಿ ಅವರಿಗೆ ಧನ್ಯವಾದಗಳು’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
Watched #TheVaccineWar first day first show!
A great tribute for #Indianscientists Technically well made! Performances are top notch! Screenplay & Dialogues construct this subject very well and makes it entertaining and engaging!Thanks a lot @vivekagnihotri !
INDIA CAN DO IT! pic.twitter.com/zS6yWzfSey
— Aniruddha Katkar (@Annikatkar23) September 28, 2023
‘ಇದು ಸೂಪರ್ ಸಿನಿಮಾ. ವ್ಯಾಕ್ಸಿನ್ ತಯಾರಿಸಿದ ಬಲರಾಮ್ ಭಾರ್ಗವ್ ಸರ್ ಮತ್ತು ಮಹಿಳಾ ವಿಜ್ಞಾನಿಗಳಿಗೆ ಹ್ಯಾಟ್ಸಾಫ್. ಅವರ ಶ್ರಮ ಮತ್ತು ತ್ಯಾಗದ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಲೇಬೇಕು. ವಿವೇಕ್ ಅಗ್ನಿಹೋತ್ರಿ ಅವರ ಕೆಲಸ ಶ್ರೇಷ್ಠವಾಗಿದೆ’ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಪಲ್ಲವಿ ಜೋಶಿ, ನಾನಾ ಪಾಟೇಕರ್, ರೈಮಾ ಸೇನ್ ಅವರ ನಟನೆಗೆ ಜನರಿಂದ ಚಪ್ಪಾಳೆ ಸಿಗುತ್ತಿದೆ.
Superb movie! Hats off to Dr. Balram Bhargava sir and all scientists , specially women who made the vaccine. Their efforts and sacrifices should be known to the world. Great work @vivekagnihotri 🙌#thevaccinewar pic.twitter.com/3DWQNpSV3w
— Neetesh Verma (@infineeet) September 28, 2023
‘ವಿವೇಕ್ ಅಗ್ನಿಹೋತ್ರಿ ಮತ್ತು ಅವರ ತಂಡಕ್ಕೆ ಜಯವಾಗಲಿ. ತುಂಬ ಚೆನ್ನಾಗಿ ವಿವೇಕ್ ಅವರು ನಿರ್ದೇಶನ ಮಾಡಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ. ಒಳ್ಳೆಯ ಸಿನಿಮಾಗಳನ್ನು ಮಾಡುವುದನ್ನು ಮುಂದುವರಿಸಿ’ ಎಂದು ವಿವೇಕ್ ಅಗ್ನಿಹೋತ್ರಿ ಅವರಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ‘ವಿವೇಕ್ ಅಗ್ನಿಹೋತ್ರಿ ಅವರಿಗೆ ಹ್ಯಾಟ್ಸಾಫ್. ಈ ಸಿನಿಮಾ ನಿಜಕ್ಕೂ ಮಾಸ್ಟರ್ಪೀಸ್. ಕೊವಿಡ್ ವಾರಿಯರ್ಗಳಿಗೆ ಈ ಸಿನಿಮಾ ಗೌರವ ಸಲ್ಲಿಸಿದೆ. ಭಾರತದ ಒಳಗಡೆಯೇ ಇರುವ ಶತ್ರುಗಳನ್ನು ಇದು ಬಯಲಿಗೆ ಎಳೆಯುತ್ತದೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.
Kudos to Vivek Angnihotri And #TheVaccineWar team!!!, Vivek has done a fantabulous direction!!!,Vivek, we are with you,keep up the good work!!!@vivekagnihotri #TheVaccineWarMustWatch #thevaccinewarreview #VivekAgnihotri https://t.co/JkG26ohuwj
— Yash🇮🇳 (@DayumnCrusader) September 28, 2023
ಈ ಹಿಂದೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 252 ಕೋಟಿ ರೂಪಾಯಿ ಗಳಿಸಿತ್ತು. ಈಗ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. 10ರಿಂದ 12 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ವಿಮರ್ಶಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ‘ಚಂದ್ರಮುಖಿ 2’, ‘ಫುಕ್ರೆ 3’ ಮುಂತಾದ ಸಿನಿಮಾಗಳ ಜೊತೆ ‘ದಿ ವ್ಯಾಕ್ಸಿನ್ ವಾರ್’ ಸ್ಪರ್ಧಿಸುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.