ದಕ್ಷಿಣ ಭಾರತದಲ್ಲೂ ಕಮಾಲ್ ಮಾಡಲಿದೆ ‘ಅನಿಮಲ್’ ಅಡ್ವಾನ್ಸ್ ಬುಕಿಂಗ್ ಮೂಡಿಸಿದೆ ಭರವಸೆ
Animal: ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಉತ್ತಮ ಕಲೆಕ್ಷನ್ ಮಾಡಿರುವುದು ತುಸು ಕಡಿಮೆಯೇ. ಆದರೆ ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ದಕ್ಷಿಣದಲ್ಲೂ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಹುಟ್ಟಿಸಿದೆ.
ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಭಾಗದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿವೆ. ದಕ್ಷಿಣದ ಕೆಲವು ಸಿನಿಮಾಗಳಂತೂ ದಕ್ಷಿಣ ಭಾರತಕ್ಕಿಂತಲೂ ಹೆಚ್ಚಿನ ಹಣವನ್ನುನ ಹಿಂದಿ ಸಿನಿಮಾಗಳ ಪ್ರಾಬಲ್ಯವಿರುವ ಪ್ರದೇಶದಲ್ಲೇ ಗಳಿಸಿವೆ. ಆದರೆ ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸುತ್ತಿಲ್ಲ. ಶಾರುಖ್ ಖಾನ್ರ (Shah Rukh Khan) ‘ಪಠಾಣ್’, ‘ಜವಾನ್’ ಸಾಧಾರಣ ಮಟ್ಟಿಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಗೆಲುವು ಕಂಡಿತಾದರೂ ಬೇರೆ ಸಿನಿಮಾಗಳು ಅಷ್ಟಾಗಿ ಗಳಿಕೆ ಮಾಡಲು ಸಾಧ್ಯವಾಗಿಲ್ಲ. ಆದರೆ ಇದೀಗ ಬಿಡುಗಡೆ ಆಗಲಿರುವ ರಣ್ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ ದಕ್ಷಿಣದಲ್ಲಿಯೂ ಸೂಪರ್ ಹಿಟ್ ಆಗುವ ಮುನ್ಸೂಚನೆ ನೀಡಿದೆ.
ತೆಲುಗು ರಾಜ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಅಡ್ವಾನ್ಸ್ ಬುಕಿಂಗ್ ‘ಅನಿಮಲ್’ ಸಿನಿಮಾಕ್ಕೆ ಸಿಗುತ್ತಿದೆ. ಹೈದರಾಬಾದ್ ಒಂದರಲ್ಲೇ ನವೆಂಬರ್ 24ಕ್ಕೆ ‘ಅನಿಮಲ್’ ಸಿನಿಮಾದ 46% ಬುಕಿಂಗ್ ಆಗಿ ಹೋಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವಾರವಿದ್ದು ಆ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ‘ಅನಿಮಲ್’ ಸಿನಿಮಾದ ನಿರ್ದೇಶಕ ತೆಲುಗಿನವರೇ ಆಗಿರುವ ಸಂದೀಪ್ ರೆಡ್ಡಿ ವಂಗಾ, ಅವರ ‘ಅರ್ಜುನ್ ರೆಡ್ಡಿ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಅದೇ ಕಾರಣಕ್ಕೆ ಈ ಸಿನಿಮಾದ ಮೇಲೂ ತೆಲುಗು ಪ್ರೇಕ್ಷಕರು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ‘ಅನಿಮಲ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇನ್ನೂ ಓಪನ್ ಆಗಿಲ್ಲ. ಚೆನ್ನೈನಲ್ಲಿಯೂ ಸಹ ಚಿತ್ರಮಂದಿರಗಳ ಪಟ್ಟಿ ಇನ್ನೂ ಘೋಷಣೆ ಆಗಿಲ್ಲ.
ಇದನ್ನೂ ಓದಿ:ಘರ್ಜನೆ ಇಲ್ಲದೇ ಗೆಲ್ಲುತ್ತಾ ‘ಅನಿಮಲ್’ ಸಿನಿಮಾ? ಹೀಗೆ ಆದ್ರೆ ಕಷ್ಟ ಇದೆ
ಇನ್ನು ಮುಂಬೈ ಸೇರಿದಂತೆ ಹಿಂದಿ ಭಾಷಿಕ ಪ್ರದೇಶದಲ್ಲಿ ‘ಅನಿಮಲ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿದೆ. ‘ಟೈಗರ್ 3’ ಗಿಂತಲೂ ಹೆಚ್ಚಿನ ಮೊತ್ತವನ್ನು ಮೊದಲ ದಿನವೇ ‘ಅನಿಮಲ್’ ಸಿನಿಮಾ ಗಳಿಸುವ ಸಾಧ್ಯತೆ ಇದೆ ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಅನಿಮಲ್’ ಸಿನಿಮಾ ಭಾರತದಾದ್ಯಂತ ಮೊದಲ ದಿನವೇ ಸುಮಾರು 50 ರಿಂದ 60 ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾದ ಟ್ರೈಲರ್ ಈಗಾಗಲೇ ಸಖತ್ ವೈರಲ್ ಆಗಿದೆ. ಟ್ರೈಲರ್ ಬಿಡುಗಡೆ ಆಗಿದ್ದೆ ಸಿನಿಮಾದ ಬಗ್ಗೆ ಇದ್ದ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಪಕ್ಕಾ ಬ್ಲಾಕ್ ಬಸ್ಟರ್ ಸಿನಿಮಾ ಆಗುವ ನಿರೀಕ್ಷೆಯನ್ನು ಟ್ರೈಲರ್ ಹುಟ್ಟು ಹಾಕಿದೆ. ಗ್ಯಾಂಗ್ಸ್ಟರ್ ಕುಟುಂಬದ ಅಪ್ಪ-ಮಗನ ನಡುವಿನ ಸಂಬಂಧದ ಕತೆಯನ್ನು ‘ಅನಿಮಲ್’ ಸಿನಿಮಾ ಒಳಗೊಂಡಿದೆ. ಅಪ್ಪ-ಮಗನ ಸಂಬಂಧದ ಜೊತೆಗೆ ಕುಟುಂಬ, ಕುಟುಂಬದಲ್ಲಿನ ರಾಜಕಾರಣ, ದ್ವೇಷ ಇನ್ನೂ ಕೆಲವು ಅಂಶಗಳನ್ನು ಸಿನಿಮಾದ ಕತೆ ಒಳಗೊಂಡಿದೆ. ‘ಅನಿಮಲ್’ ಸಿನಿಮಾದಲ್ಲಿ ರಣ್ಬೀರ್ ಎದುರು ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಬಾಬಿ ಡಿಯೋಲ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವು ಡಿಸೆಂಬರ್ 1 ರಂದು ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ