12 Fail Movie: ಆಸ್ಕರ್​ ಪ್ರಶಸ್ತಿ ರೇಸ್​ನಲ್ಲಿ ‘12th ಫೇಲ್​’ ಸಿನಿಮಾ; ಕನ್ನಡದಲ್ಲೂ ಬಿಡುಗಡೆ ಆದ ಈ ಚಿತ್ರದ ವಿಶೇಷತೆ ಏನು?

Oscar Awards: ಆಸ್ಕರ್​ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ‘12th ಫೇಲ್​’ ಸಿನಿಮಾಗೆ ವಿಧು ವಿನೋದ್​ ಚೋಪ್ರಾ ಅವರು ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಕೂಡ ಅವರದ್ದೇ. ಅಕ್ಟೋಬರ್​ 27ರಂದು ಈ ಚಿತ್ರ ಬಿಡುಗಡೆ ಆಯಿತು. ಹಿಂದಿಯಲ್ಲಿ ನಿರ್ಮಾಣ ಆದ ಈ ಸಿನಿಮಾವನ್ನು ಕನ್ನಡಕ್ಕೂ ಡಬ್​ ಮಾಡಿ ಬಿಡುಗಡೆ ಮಾಡಲಾಗಿತ್ತು.

12 Fail Movie: ಆಸ್ಕರ್​ ಪ್ರಶಸ್ತಿ ರೇಸ್​ನಲ್ಲಿ ‘12th ಫೇಲ್​’ ಸಿನಿಮಾ; ಕನ್ನಡದಲ್ಲೂ ಬಿಡುಗಡೆ ಆದ ಈ ಚಿತ್ರದ ವಿಶೇಷತೆ ಏನು?
ವಿಕ್ರಾಂತ್​ ಮಾಸ್ಸಿ
Follow us
|

Updated on: Nov 26, 2023 | 7:20 AM

ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ (Oscar Awards) ಪಡೆಯಲು ಭಾರತದ ‘12th ಫೇಲ್​’ ಸಿನಿಮಾ ಪ್ರಯತ್ನಿಸುತ್ತಿದೆ. ಹಿಂದಿ, ಕನ್ನಡ ಮುಂತಾದ ಭಾಷೆಗಳಲ್ಲಿ ಇತ್ತೀಚೆಗೆ ಬಿಡುಗಡೆ ಆದ ಈ ಸಿನಿಮಾವನ್ನು ಆಸ್ಕರ್​ ಸ್ಪರ್ಧೆಗೆ ಕಳಿಸಲಾಗಿದೆ ಎಂದು ಚಿತ್ರದ ನಾಯಕ ನಟ ವಿಕ್ರಾಂತ್​ ಮಾಸ್ಸಿ (Vikrant Massey) ಹೇಳಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ಅವರು ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಚಿತ್ರತಂಡವೇ ಸ್ವತಂತ್ರವಾಗಿ ನಾಮಿನೇಷನ್​ ಸಲ್ಲಿಸಿದೆ. 2024ರಲ್ಲಿ ‘12th ಫೇಲ್​’ (12 Fail) ಚಿತ್ರಕ್ಕೆ ಆಸ್ಕರ್​ ಪ್ರಶಸ್ತಿ ಸಿಗಲಿದೆಯೇ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಈ ಸಿನಿಮಾಗೆ ವಿಧು ವಿನೋದ್​ ಚೋಪ್ರಾ ಅವರು ನಿರ್ದೇಶನ ಮಾಡಿದ್ದಾರೆ.

‘ಸಾಹಿತ್ಯ ಆಜ್​ತಕ್​ 2023’ ಕಾರ್ಯಕ್ರಮದಲ್ಲಿ ವಿಕ್ರಾಂತ್​ ಮಾಸ್ಸಿ ಅವರು ಮಾತನಾಡುತ್ತಿದ್ದರು. ಈ ವೇಳೆ ಅವರು ಆಸ್ಕರ್​ ಪ್ರಶಸ್ತಿ ಬಗ್ಗೆ ಮಾಹಿತಿ ಹಂಚಿಕೊಂಡರು. ಭಾರತೀಯರು ಕೂಡ ಆಸ್ಕರ್​ ಪ್ರಶಸ್ತಿ ಗೆಲ್ಲಬಹುದು ಎಂಬುದಕ್ಕೆ ‘ಆರ್​ಆರ್​ಆರ್​’ ಸಿನಿಮಾವೇ ಸಾಕ್ಷಿ. 2023ರಲ್ಲಿ ಈ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್​ ಅವಾರ್ಡ್​ ಪಡೆದುಕೊಂಡಿತು. ಆ ಚಿತ್ರ ಕೂಡ ಸ್ವತಂತ್ರವಾಗಿ ನಾಮಿನೇಟ್​ ಆಗಿತ್ತು. ಈಗ ಇದೇ ಪ್ರಯತ್ನದಲ್ಲಿ ‘12th ಫೇಲ್​’ ಸಿನಿಮಾ ಕೂಡ ಇದೆ. ಭಾರತದಿಂದ ಅಧಿಕೃತವಾಗಿ ಮಲಯಾಳಂನ ‘2018’ ಚಿತ್ರ ಆಸ್ಕರ್​ ಸ್ಪರ್ಧೆಗೆ ಈಗಾಗಲೇ ಆಯ್ಕೆ ಆಗಿದೆ.

ಇದನ್ನೂ ಓದಿ: ‘ಆಸ್ಕರ್​’ ಮೂಲಕ ‘ದಿ ವ್ಯಾಕ್ಸಿನ್ ವಾರ್​’ ಚಿತ್ರಕ್ಕೆ ವಿಶೇಷ ಗೌರವ; ವಿವೇಕ್​ ಅಗ್ನಿಹೋತ್ರಿ ಗುಡ್​ ನ್ಯೂಸ್​

ಅನುರಾಗ್‍ ಪಾಠಕ್‍ ಅವರು ಬರೆದ ಕಾದಂಬರಿಯನ್ನು ಆಧರಿಸಿ ‘12th ಫೇಲ್​’ ಸಿನಿಮಾ ತಯಾರಾಗಿದೆ. ಹಲವು ಅಡೆತಡೆಗಳನ್ನು ಮೀರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅ‍ಧಿಕಾರಿ ಮನೋಜ್‍ ಕುಮಾರ್ ಶರ್ಮಾ ಅವರ ಜೀವನವನ್ನು ಆಧರಿಸಿ ಈ ಚಿತ್ರ ಮೂಡಿಬಂದಿದೆ. ಮನೋಜ್‍ ಕುಮಾರ್ ಶರ್ಮಾ ಅವರ ಪಾತ್ರಕ್ಕೆ ವಿಕ್ರಾಂತ್​ ಮಾಸ್ಸಿ ಬಣ್ಣ ಹಚ್ಚಿದ್ದಾರೆ. ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮೇಧಾ ಶಂಕರ್ ಅವರು ‘12th ಫೇಲ್​’ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ‌.

ಇದನ್ನೂ ಓದಿ: ‘ಜವಾನ್​’ ಚಿತ್ರ ಆಸ್ಕರ್​ಗೆ ಹೋಗಬೇಕು ಎಂದ ನಿರ್ದೇಶಕ ಅಟ್ಲಿ; ಟ್ರೋಲ್​ ಮಾಡಿದ ನೆಟ್ಟಿಗರು

ಅಕ್ಟೋಬರ್​ 27ರಂದು ‘12th ಫೇಲ್​’ ಚಿತ್ರ ಬಿಡುಗಡೆ ಆಯಿತು. ಹಿಂದಿಯಲ್ಲಿ ನಿರ್ಮಾಣ ಆದ ಈ ಸಿನಿಮಾವನ್ನು ಕನ್ನಡಕ್ಕೂ ಡಬ್​ ಮಾಡಿ ಬಿಡುಗಡೆ ಮಾಡಲಾಯಿತು. ನಿರ್ದೇಶಕ ರೋಹಿತ್​ ಪದಕಿ ಅವರ ಸಾರಥ್ಯದಲ್ಲಿ ಕನ್ನಡದ ಡಬ್ಬಿಂಗ್ ಕೆಲಸ ನಡೆಯಿತು. ‘ಕೆಆರ್​ಜಿ ಸ್ಟುಡಿಯೋಸ್​’ ಮೂಲಕ ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಯಿತು. ವಿಧು ವಿನೋದ್​ ಚೋಪ್ರಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ