Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಏಕೆ ಟಾಮ್​ ಕ್ರೂಸ್ ರೀತಿ ಬೈಕ್ ಸ್ಟಂಟ್ಸ್ ಪ್ರಯತ್ನಿಸಬಾರದು?’; ಶಾರುಖ್ ಖಾನ್ ಕೊಟ್ರು ಉತ್ತರ

ಶಾರುಖ್ ಖಾನ್ ಅವರಿಗೆ ಹಲವು ಪ್ರಶ್ನೆಗಳು ಎದುರಾಗಿವೆ. ಶಾರುಖ್ ಖಾನ್​ಗೆ ಫನ್ನಿ ಪ್ರಶ್ನೆ ಎದುರಾದಾಗ ಅವರು ಫನ್ನಿಯಾಗೇ ಉತ್ತರ ನೀಡುತ್ತಾರೆ.

‘ಏಕೆ ಟಾಮ್​ ಕ್ರೂಸ್ ರೀತಿ ಬೈಕ್ ಸ್ಟಂಟ್ಸ್ ಪ್ರಯತ್ನಿಸಬಾರದು?’; ಶಾರುಖ್ ಖಾನ್ ಕೊಟ್ರು ಉತ್ತರ
ಶಾರುಖ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 23, 2023 | 2:36 PM

ಹಾಲಿವುಡ್ ನಟ ಟಾಮ್ ಕ್ರೂಸ್ (Tom Cruise) ಅವರು ಮಾಡುವ ಸ್ಟಂಟ್ಸ್ ಮೈ ನವಿರೇಳಿಸುವಂತಿರುತ್ತದೆ. ಅವರು ಬೈಕ್ ​ಸಮೇತ ಪ್ರಪಾತಕ್ಕೆ ಜಿಗಿಯುವಂಥ ಸ್ಟಂಟ್ಸ್ ಮಾಡುತ್ತಾರೆ. ಇವುಗಳನ್ನು ಮಾಡೋಕೆ ಅವರಿಗೆ ಯಾವುದೇ ಭಯ ಇಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ನಟನೆಗೆ ಇಷ್ಟು ದೊಡ್ಡ ರಿಸ್ಕ್​ ತೆಗೆದುಕೊಳ್ಳುವುದು ಎಂದರೆ ಅದು ಸಣ್ಣ ಮಾತಲ್ಲ. ಭಾರತದಲ್ಲಿ ಯಾರೊಬ್ಬರೂ ಇಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳಲ್ಲ. ಶಾರುಖ್ ಖಾನ್ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ಫನ್ನಿ ಆಗಿ ಉತ್ತರ ಕೊಟ್ಟಿದ್ದಾರೆ.

ಶಾರುಖ್ ಖಾನ್ ಅವರ ನಟನೆಯ ‘ಡಂಕಿ’ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿದೆ. ಇಂದು (ನವೆಂಬರ್ 22) ರಾಜ್​ಕುಮಾರ್ ಹಿರಾನಿ ಬರ್ತ್​​ಡೇ. ಆ ಪ್ರಯುಕ್ತ ಸಾಂಗ್ ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಅವರು ಟ್ವಿಟರ್​ನಲ್ಲಿ ‘AskSRK’ ಸೆಷನ್ ನಡೆಸಿದ್ದಾರೆ. ಈ ವೇಳೆ ಅವರಿಗೆ ಹಲವು ಪ್ರಶ್ನೆಗಳು ಎದುರಾಗಿವೆ. ಶಾರುಖ್ ಖಾನ್​ಗೆ ಫನ್ನಿ ಪ್ರಶ್ನೆ ಎದುರಾದಾಗ ಅವರು ಫನ್ನಿಯಾಗೇ ಉತ್ತರ ನೀಡುತ್ತಾರೆ.

‘ಮಿಷನ್ ಇಂಪಾಸಿಬಲ್ 7 ಚಿತ್ರದಲ್ಲಿ ಟಾಮ್ ಕ್ರೂಸ್ ಮಾಡಿದ ರೀತಿಯಲ್ಲಿ ಸಾಹಸ ಮಾಡುವ ಬಗ್ಗೆ ಯಾವಾಗಾದರೂ ಆಲೋಚನೆ ಮಾಡಿದ್ದೀರಾ’ ಎಂದು ಶಾರುಖ್ ಖಾನ್​ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಶಾರುಖ್ ಖಾನ್ ಕೊಟ್ಟ ಉತ್ತರ ಅನೇಕರಿಗೆ ಅಚ್ಚರಿ ತಂದಿದೆ. ‘ನನ್ನ ಬಳಿ ಬೈಕ್​ ಇಲ್ಲ’ ಎಂದಿದ್ದಾರೆ ಶಾರುಖ್ ಖಾನ್. ಈ ಉತ್ತರ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ‘ನೆವರ್ ಮೆಸ್ ವಿತ್ ಕಿಂಗ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ನಿಮ್ಮ ಬಳಿ ಐಷಾರಾಮಿ ಕಾರು ಇದೆಯಲ್ಲ. ಅದರಲ್ಲೇ ಪ್ರಯತ್ನಿಸಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸೂಪರ್ ಹಿಟ್ ಸಿನಿಮಾದಿಂದ ಹಿಂದೆ ಸರಿಯಲು ಮುಂದಾಗಿದ್ದ ಶಾರುಖ್ ಖಾನ್; ಆದರೂ ಬಿಡಲಿಲ್ಲ ನಿರ್ದೇಶಕರು

ಶಾರುಖ್ ಖಾನ್ ಅವರು ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾ ಮೂಲಕ ಗೆದ್ದು ಬೀಗಿದ್ದಾರೆ. ಎರಡೂ ಸಿನಿಮಾಗಳಲ್ಲಿ ಸಖತ್ ಆ್ಯಕ್ಷನ್ ಇತ್ತು. ಎರಡೂ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿವೆ. ನಾಲ್ಕು ವರ್ಷ ಬ್ರೇಕ್ ಪಡೆದಿದ್ದ ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿ ಗೆದ್ದಿದ್ದಾರೆ. ಈಗ ‘ಡಂಕಿ’ ಸಿನಿಮಾ ಮೂಲಕ ಕ್ಲಾಸ್ ಆಗಿ ಜನರ ಎದುರು ಬರಲು ಅವರು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ತಾಪ್ಸೀ ಪನ್ನು, ವಿಕ್ಕಿ ಕೌಶಲ್ ಮೊದಲಾದವರು ನಟಿಸಿದ್ದಾರೆ. ಡಿಸೆಂಬರ್ 22ರಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:40 pm, Wed, 22 November 23

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..