ಸೂಪರ್ ಹಿಟ್ ಸಿನಿಮಾದಿಂದ ಹಿಂದೆ ಸರಿಯಲು ಮುಂದಾಗಿದ್ದ ಶಾರುಖ್ ಖಾನ್; ಆದರೂ ಬಿಡಲಿಲ್ಲ ನಿರ್ದೇಶಕರು

‘ಶಾರುಖ್ ಖಾನ್ ಅವರು ಸಿನಿಮಾ ಶೂಟಿಂಗ್​ಗೆ ನಾಲ್ಕು ದಿನ ಇರುವಾಗ ಅನಾರೋಗ್ಯಕ್ಕೆ ಒಳಗಾದರು. ತಮ್ಮನ್ನು ಸಿನಿಮಾದಿಂದ ಹೊರಗೆ ಇಡಲು ಕೋರಿದ್ದರು. ನಾವು ಇದಕ್ಕೆ ನೋ ಎಂದೆವು. ಶಾರುಖ್ ಖಾನ್ ಅವರೇ ಬೇಕು ಎನ್ನುವ ಕಾರಣಕ್ಕೆ ಸಿನಿಮಾದ ಕೆಲಸ ಆರು ತಿಂಗಳು ವಿಳಂಬ ಆಯಿತು’ ಎಂದಿದ್ದಾರೆ ನಿರ್ದೇಶಕ ನಿಖಿಲ್ ಅಡ್ವಾಣಿ.

ಸೂಪರ್ ಹಿಟ್ ಸಿನಿಮಾದಿಂದ ಹಿಂದೆ ಸರಿಯಲು ಮುಂದಾಗಿದ್ದ ಶಾರುಖ್ ಖಾನ್; ಆದರೂ ಬಿಡಲಿಲ್ಲ ನಿರ್ದೇಶಕರು
ಶಾರುಖ್​ ಖಾನ್​, ‘ಕಲ್​ ಹೋ ನಾ ಹೋ’ ಪೋಸ್ಟರ್​
Follow us
| Edited By: ಮದನ್​ ಕುಮಾರ್​

Updated on: Nov 19, 2023 | 7:29 PM

ಶಾರುಖ್ ಖಾನ್ (Shah Rukh Khan), ಪ್ರೀತಿ ಜಿಂಟಾ ಹಾಗೂ ಸೈಫ್ ಅಲಿ ಖಾನ್ ನಟನೆಯ ‘ಕಲ್​ ಹೋ ನ ಹೋ’ ಚಿತ್ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಈ ಚಿತ್ರವನ್ನು ಪ್ರೇಕ್ಷಕರು ಸಾಕಷ್ಟು ಇಷ್ಟಪಟ್ಟಿದ್ದರು. ಲವ್ ಟ್ರಯಾಂಗಲ್ ರೀತಿಯಲ್ಲಿ ಸಿನಿಮಾ ಮೂಡಿಬಂದಿತ್ತು. ಈ ಸಿನಿಮಾ ರಿಲೀಸ್ ಆಗಿ 20 ವರ್ಷ ಪೂರ್ಣಗೊಳ್ಳುತ್ತಾ ಬಂದಿದೆ. ನಿಖಿಲ್ ಅಡ್ವಾಣಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಂದರ್ಭದಲ್ಲಿ ಈ ಚಿತ್ರವನ್ನು ಎಲ್ಲರೂ ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ‘ಕಲ್​ ಹೋ ನ ಹೋ’ (Kal ho Naa Ho) ಚಿತ್ರದ ಕುರಿತು ಹಲವು ಅಪರೂಪದ ವಿಚಾರಗಳು ಹೊರಬರುತ್ತಿವೆ.

‘ಕಲ್ ಹೋ ನ ಹೋ’ ಸಿನಿಮಾ ನವೆಂಬರ್ 2003ರ ನವೆಂಬರ್ 28ರಂದು ರಿಲೀಸ್ ಆಯಿತು. ನಿಖಿಲ್ ಅಡ್ವಾಣಿ ನಿರ್ದೇಶನದ ಮೊದಲ ಸಿನಿಮಾ ಇದು. ಯಶ್ ಜೋಹರ್ ನಿರ್ಮಾಣದ ಈ ಸಿನಿಮಾಗೆ ಕರಣ್​ ಜೋಹರ್ ಕಥೆ ಬರೆದಿದ್ದರು. ಈಗ ನಿಖಿಲ್ ಅವರು ಒಂದು ವಿಚಾರ ಹೇಳಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಆರಂಭ ಆಗುವುದಕ್ಕೆ ಕೆಲವೇ ದಿನಗಳ ಮೊದಲು ಶಾರುಖ್ ಖಾನ್ ಅವರು ಸಿನಿಮಾದಿಂದ ಹೊರ ಬರಲು ನಿರ್ಧರಿಸಿದ್ದರಂತೆ.

ಇದನ್ನೂ ಓದಿ:  ‘ಜವಾನ್’ ಸಿನಿಮಾದಲ್ಲಿ ಶಾರುಖ್ ಇಲ್ಲದೇ ಇದ್ದಿದ್ದರೆ ಸಿಗುತ್ತಿರಲಿಲ್ಲ ಯಶಸ್ಸು?

‘ಶಾರುಖ್ ಖಾನ್ ಅವರು ಸಿನಿಮಾ ಶೂಟಿಂಗ್​ಗೆ ನಾಲ್ಕು ದಿನ ಇರುವಾಗ ಅನಾರೋಗ್ಯಕ್ಕೆ ಒಳಗಾದರು. ನನ್ನನ್ನು ಸಿನಿಮಾದಿಂದ ಹೊರಗೆ ಇಡಿ ಎಂದು ಕೋರಿದ್ದರು. ನಾವು ಇದಕ್ಕೆ ನೋ ಎಂದೆವು. ಶಾರುಖ್ ಖಾನ್ ಅವರೇ ಬೇಕು ಎನ್ನುವ ಕಾರಣಕ್ಕೆ ಸಿನಿಮಾದ ಕೆಲಸ ಆರು ತಿಂಗಳು ವಿಳಂಬ ಆಯಿತು’ ಎಂದಿದ್ದಾರೆ ನಿಖಿಲ್. ‘ನನ್ನ ಮೇಲೆ ಸಾಕಷ್ಟು ಒತ್ತಡ ಇತ್ತು. ‘ಕುಚ್​ ಕುಚ್​ ಹೋತಾ ಹೈ’ ಹಾಗೂ ‘ಕಭಿ ಖುಷಿ ಕಭಿ ಗಮ್’ ಸಿನಿಮಾ ಹಿಟ್ ಆಗಿತ್ತು. ಧರ್ಮ ಪ್ರೊಡಕ್ಷನ್​ ಅಡಿಯಲ್ಲಿ ಸಿನಿಮಾ ಬಂದು ಹಿಟ್ ಆಗಿಲ್ಲ ಎಂದರೆ ಅದು ನನ್ನ ಮೇಲೆ ಬರುತ್ತಿತ್ತು. ಹೀಗಾಗಿ, ನನಗೆ ಒತ್ತಡ ಇತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ದಾಖಲೆ ಬರೆದ ಡಂಕಿ ಸಿನಿಮಾ ಟೀಸರ್: ಮತ್ತೊಂದು ಬ್ಲಾಕ್​ ಬಸ್ಟರ್​ಗೆ ಶಾರುಖ್ ಖಾನ್ ರೆಡಿ

‘ಕಲ್ ಹೋ ನ ಹೋ’ ಸಿನಿಮಾದ ಕಥೆ ನ್ಯೂಯಾರ್ಕ್​ನಲ್ಲಿ ಸಾಗುತ್ತದೆ. ಈ ಚಿತ್ರದ ಶೂಟಿಂಗ್​ ಮಾಡುವಾಗ ಸಾಕಷ್ಟು ಚಾಲೆಂಜ್​ಗಳು ಎದುರಾಗಿತ್ತಂತೆ. ‘ಭಾರತದವರು ನ್ಯೂಯಾರ್ಕ್​ನಲ್ಲಿ ಸಿನಿಮಾ ಶೂಟ್ ಮಾಡಿರಲಿಲ್ಲ. ಲಂಡನ್, ಸ್ವಿಜರ್​ಲೆಂಡ್, ಯೂರೋಪ್​ಗಳಲ್ಲಿ ಸಿನಿಮಾ ಶೂಟ್ ಮಾಡಲಾಗಿತ್ತು. ನ್ಯೂಯಾರ್ಕ್​ನಲ್ಲಿ ಶೂಟ್​ ಮಾಡೋದು ಸಖತ್ ದುಬಾರಿ ಆಗಿತ್ತು. ಮೊದಲ ನಿರ್ದೇಶನಕ್ಕೆ ದೊಡ್ಡ ಮಟ್ಟದಲ್ಲಿ ಹಣ ಹೂಡಲಾಗಿತ್ತು. ಆದರೆ, ಯಶ್ ಜೋಹರ್ ಚಾಲೆಂಜ್​ನ ತೆಗೆದುಕೊಂಡರು’ ಎಂದಿದ್ದಾರೆ ನಿಖಿಲ್.

ಇದನ್ನೂ ಓದಿ:  ಹಾಲಿವುಡ್ ನಿರ್ದೇಶಕರಿಗೂ ಶಾರುಖ್ ಖಾನ್ ಜೊತೆ ಕೆಲಸ ಮಾಡುವಾಸೆ, ಎಸ್​ಆರ್​ಕೆ ಲೆಜೆಂಡ್ ಎಂದ ನಿರ್ದೇಶಕಿ

ವಿಮರ್ಶಕರಿಂದ ‘ಕಲ್​ ಹೋ ನ ಹೋ’ ಸಿನಿಮಾ ಮೆಚ್ಚುಗೆ ಪಡೆಯಿತು. ಕಮರ್ಷಿಯಲಿ ಹಿಟ್ ಆಯಿತು. ಆ ವರ್ಷದ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿತು. ಆಗಿನ ಕಾಲದಲ್ಲೇ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈ ಸಿನಿಮಾದಿಂದ ಅನೇಕರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಈ ಚಿತ್ರದಲ್ಲಿ ನೈನಾ ಪಾತ್ರವನ್ನು ಕರೀನಾ ಕಪೂರ್ ನಟಿಸಬೇಕಿತ್ತು. ಆದರೆ, ಅವರು ಸಿನಿಮಾನ ರಿಜೆಕ್ಟ್ ಮಾಡಿದರು. ಈ ಕಾರಣಕ್ಕೆ ಪ್ರೀತಿ ಜಿಂಟಾಗೆ ಸಿನಿಮಾ ಆಫರ್ ಹೋಯಿತು. ಅವರಿಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?
ರಾಜೀನಾಮೆ ನೀಡುತ್ತೇನೆಂದ ಬಿಅರ್ ಪಾಟೀಲ್ ಪತ್ರ ಸಿದ್ದರಾಮಯ್ಯಗೆ ಸಿಕ್ಕಿಲ್ಲ?