AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್ ನಿರ್ದೇಶಕರಿಗೂ ಶಾರುಖ್ ಖಾನ್ ಜೊತೆ ಕೆಲಸ ಮಾಡುವಾಸೆ, ಎಸ್​ಆರ್​ಕೆ ಲೆಜೆಂಡ್ ಎಂದ ನಿರ್ದೇಶಕಿ

Ms Marvels: 'ದಿ ಮಾರ್ವೆಲ್ಸ್' ಹಾಲಿವುಡ್ ಸೂಪರ್ ವುಮನ್ ಸಿನಿಮಾ ನಿರ್ದೇಶಕಿ ನಿಯೋ ಡಕೋಸ್ಟಾ ಶಾರುಖ್ ಖಾನ್ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ.

ಹಾಲಿವುಡ್ ನಿರ್ದೇಶಕರಿಗೂ ಶಾರುಖ್ ಖಾನ್ ಜೊತೆ ಕೆಲಸ ಮಾಡುವಾಸೆ, ಎಸ್​ಆರ್​ಕೆ ಲೆಜೆಂಡ್ ಎಂದ ನಿರ್ದೇಶಕಿ
ಶಾರುಖ್ ಖಾನ್
Follow us
ಮಂಜುನಾಥ ಸಿ.
|

Updated on: Nov 07, 2023 | 4:02 PM

ಶಾರುಖ್ ಖಾನ್ (Shah Rukh Khan) ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್. ಅವರ ಸಿನಿಮಾ ಬಿಡುಗಡೆಗೆ ಕೋಟ್ಯಂತರ ಅಭಿಮಾನಿಗಳು ಕಾತರರಾಗಿ ಕಾಯುತ್ತಿರುತ್ತಾರೆ. ಶಾರುಖ್ ಖಾನ್ ಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವಿದೆ. ಸಾಮಾನ್ಯ ಸಿನಿಮಾ ಪ್ರೇಕ್ಷಕರು ಮಾತ್ರವೇ ಅಲ್ಲದೆ ಹಾಲಿವುಡ್​ನ ದೊಡ್ಡ-ದೊಡ್ಡ ನಿರ್ದೇಶಕರು ಸಹ ಶಾರುಖ್ ಖಾನ್​ರ ಅಭಿಮಾನಿಗಳಾಗಿದ್ದಾರೆ. ಇದೀಗ ಮಾರ್ವೆಲ್ ಗೆ ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕಿ ಒಬ್ಬರು ಸಹ ಶಾರುಖ್ ಖಾನ್ ಅನ್ನು ಮನಸಾರೆ ಹೊಗಳಿರುವುದು ಮಾತ್ರವೇ ಅಲ್ಲದೆ ಅವರೊಟ್ಟಿಗೆ ಸಿನಿಮಾ ಮಾಡಲು ಕಾಯುತ್ತಿರುವುದಾಗಿ ಹೇಳಿದ್ದಾರೆ.

‘ದಿ ಮಾರ್ವೆಲ್ಸ್’ ಸೂಪರ್ ಹೀರೋ ಸಿನಿಮಾ ಸೇರಿದಂತೆ ಇನ್ನೂ ಕೆಲವು ಜನಪ್ರಿಯ ಆಕ್ಷನ್ ಸಿನಿಮಾ, ಟಿವಿ ಶೋಗಳನ್ನು ನಿರ್ದೇಶನ ಮಾಡಿರುವ ಹಾಲಿವುಡ್​ನ ಜನಪ್ರಿಯ ನಿರ್ದೇಶಕಿಯರಲ್ಲಿ ಒಬ್ಬರಾದ ನಿಯಾ ಡಕೋಸ್ಟಾ ಅವರು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ತಮಗೆ ಶಾರುಖ್ ಖಾನ್ ಜೊತೆ ಕೆಲಸ ಮಾಡುವ ಅತೀವ ಆಸೆಯಿದೆ ಎಂಬುದನ್ನು ಸಹ ನಿಯಾ ಡಕೋಸ್ಟಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ದಾಖಲೆ ಬರೆದ ಡಂಕಿ ಸನಿಮಾ ಟೀಸರ್: ಮತ್ತೊಂದು ಬ್ಲಾಕ್​ ಬಸ್ಟರ್​ಗೆ ಶಾರುಖ್ ಖಾನ್ ರೆಡಿ

ಬಾಲಿವುಡ್ ಸ್ಟಾರ್ ಜೊತೆ ಕೆಲಸ ಮಾಡುವ ಅವಕಾಶ ದೊರೆತರೆ ಯಾರನ್ನು ಆಯ್ಕೆ ಮಾಡಿಕೊಳ್ಳುವಿರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿಯಾ ಡಕೋಸ್ಟಾ ”ಯೋಚನೆಯ ಅವಶ್ಯಕತೆಯೇ ಇಲ್ಲ, ಖಂಡಿತ ಶಾರುಖ್ ಖಾನ್. ಅವರೊಬ್ಬ ಲೆಜೆಂಡ್. ಅದು ನಿಜವೂ ಹೌದು” ಎಂದಿದ್ದಾರೆ. ಹಾಗಿದ್ದರೆ ನಿಮ್ಮ ‘ಮಿಸ್ ಮಾರ್ವೆಲ್’ ಸಿನಿಮಾಕ್ಕೆ ಶಾರುಖ್ ಖಾನ್ ಅವರನ್ನು ಆಯ್ಕೆ ಮಾಡಲಿಲ್ಲ ಏಕೆ, ಬದಲಿಗೆ ಫರ್ಹಾನ್ ಅಖ್ತರ್ ಅನ್ನು ಆಯ್ಕೆ ಮಾಡಿದ್ದೀರಲ್ಲ ಎಂಬ ಪ್ರಶ್ನೆಗೆ, ”ಶಾರುಖ್ ಖಾನ್ ಜೊತೆ ಕೆಲಸ ಮಾಡಬೇಕೆಂಬ ಆಸೆ ಆಗಲೂ ಇತ್ತು, ಆದರೆ ಪಾತ್ರದ ವಿಷಯದಲ್ಲಿ ಬದಲಾವಣೆ ಸರಿಯಲ್ಲ. ಯಾವ ಪಾತ್ರಕ್ಕೆ ಯಾರು ಸರಿ ಎಂಬುದು ಬಹಳ ಮುಖ್ಯ, ಈಗ ಫರ್ಹಾನ್ ಅಖ್ತರ್ ಮಾಡಿರುವ ಪಾತ್ರಕ್ಕೆ ಅವರು ಸೂಕ್ತವಾಗಿದ್ದರು ಹಾಗಾಗಿ ಅವರನ್ನೇ ಆಯ್ಕೆ ಮಾಡಿದೆವು. ಕಾಸ್ಟಿಂಗ್ ವಿಚಾರದಲ್ಲಿ ಹಾದಿ ತಪ್ಪುವುದು ನನಗೆ ಹಿಡಿಸುವುದಿಲ್ಲ” ಎಂದಿದ್ದಾರೆ.

ನಿಯಾ ಡಕೋಸ್ಟಾ ನಿರ್ದೇಶನ ಮಾಡಿರುವ ‘ಮಿಸ್ ಮಾರ್ವೆಲ್’ ಸೂಪರ್ ಹೀರೋ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಮಿಸ್ ಮಾರ್ವೆಲ್’ ಕೇವಲ ಮಹಿಳಾ ಸೂಪರ್ ವುಮೆನ್​ಗಳ ಸಿನಿಮಾ ಆಗಿದೆ. ಮಾರ್ವೆಲ್ ಹಾಗೂ ಇತರೆ ಕೆಲವು ಸೂಪರ್ ವುಮನ್​ಗಳು ಸೇರಿ ‘ಅವೇಂಜರ್ಸ್​’ನ ಥಾನೋಸ್ ರೀತಿಯ ವಿಲನ್ ಒಬ್ಬಾಕೆಯನ್ನು ಸೋಲಿಸಿ ಜಗತ್ತನ್ನು ರಕ್ಷಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ‘ಮಿಸ್ ಮಾರ್ವೆಲ್’ ಮಹಿಳೆಯರು ತೆರೆಯ ಮೇಲೆ ಹಾಗೂ ತೆರೆಯ ಹಿಂದೆಯೂ ಪ್ರಧಾನ ಪಾತ್ರವಹಿಸಿರುವ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ