Tiger 3: ‘ಟೈಗರ್​ 3’ ಬಿಡುಗಡೆಯಾಗಿ ಕಳೆಯಿತು ಒಂದು ವಾರ; ಸಲ್ಮಾನ್​ ಖಾನ್​ ಚಿತ್ರ ಈವರೆಗೆ ಗಳಿಸಿದ್ದು ಎಷ್ಟು​?

Tiger 3 Box Office Collection: ವಿಶ್ವಕಪ್​ ಪಂದ್ಯಗಳು ನಡೆಯುತ್ತಿರುವ ಸಮಯದಲ್ಲೇ ‘ಟೈಗರ್​ 3’ ಚಿತ್ರ ಬಿಡುಗಡೆ ಆಗಿರುವುದು ಕಲೆಕ್ಷನ್​ ತಗ್ಗಲು ಕಾರಣ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಲ್ಮಾನ್​ ಖಾನ್​ ನಟನೆಯ ಈ ಸಿನಿಮಾಗೆ ಮನೀಶ್​ ಶರ್ಮಾ ನಿರ್ದೇಶನ ಮಾಡಿದ್ದಾರೆ. ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿದೆ. ಚಿತ್ರದ ಕಲೆಕ್ಷನ್​ ರಿಪೋರ್ಟ್ ಇಲ್ಲಿದೆ..​

Tiger 3: ‘ಟೈಗರ್​ 3’ ಬಿಡುಗಡೆಯಾಗಿ ಕಳೆಯಿತು ಒಂದು ವಾರ; ಸಲ್ಮಾನ್​ ಖಾನ್​ ಚಿತ್ರ ಈವರೆಗೆ ಗಳಿಸಿದ್ದು ಎಷ್ಟು​?
ಸಲ್ಮಾನ್​ ಖಾನ್​
Follow us
|

Updated on: Nov 19, 2023 | 12:28 PM

ದೀಪಾವಳಿ ಹಬ್ಬದಲ್ಲಿ ಭರ್ಜರಿ ಕಮಾಯಿ ಮಾಡುವ ನಿರೀಕ್ಷೆ ಇಟ್ಟುಕೊಂಡು ‘ಟೈಗರ್​ 3’ ಸಿನಿಮಾ ಬಿಡುಗಡೆ ಆಗಿತ್ತು. ಸಲ್ಮಾನ್​ ಖಾನ್​ (Salman Khan), ಕತ್ರಿನಾ ಕೈಫ್​, ಇಮ್ರಾನ್​ ಹಷ್ಮಿ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಸಿನಿಮಾದಲ್ಲಿ ಹೃತಿಕ್​ ರೋಷನ್​ ಮತ್ತು ಶಾರುಖ್​ ಖಾನ್​ ಅವರು ಅತಿಥಿ ಪಾತ್ರ ಮಾಡಿದ್ದಾರೆ. ತುಂಬ ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ. ಇಷ್ಟೆಲ್ಲ ಇದ್ದರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ (Box Office Collection) ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ‘ಟೈಗರ್​ 3’ ಸಿನಿಮಾ (Tiger 3) ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ‘ಜವಾನ್​’, ‘ಪಠಾಣ್​’, ‘ಗದರ್​ 2’ ಮುಂತಾದ ಸಿನಿಮಾಗಳಿಗೆ ಹೋಲಿಸಿದರೆ ಬಾಕ್ಸ್​ ಆಫೀಸ್​ ಕಲೆಕ್ಷನ್​ನಲ್ಲಿ ‘ಟೈಗರ್​ 3’ ಸಿನಿಮಾ ಹಿಂದುಳಿದಿದೆ.

ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ ಭಾರತದ ಬಾಕ್ಸ್​ ಆಫೀಸ್​ನಲ್ಲಿ ಒಂದು ವಾರಕ್ಕೆ 391.33 ಕೋಟಿ ರೂಪಾಯಿ ಗಳಿಸಿತ್ತು. ‘ಪಠಾಣ್​’ ಸಿನಿಮಾ ಒಂದು ವಾರಕ್ಕೆ 365.15 ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಗದರ್​ 2’ ಚಿತ್ರವು ಒಂದು ವಾರದಲ್ಲಿ 284.63 ಕಲೆಕ್ಷನ್​ ಮಾಡಿತ್ತು. ಆದರೆ ‘ಟೈಗರ್​ 3’ ಸಿನಿಮಾ ಒಂದು ವಾರಕ್ಕೆ 217.90 ಕೋಟಿ ರೂಪಾಯಿ ಗಳಿಸಿದೆ. ಹಾಗಾಗಿ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಆಗಿಲ್ಲ ಎಂದು ಸಲ್ಮಾನ್​ ಖಾನ್​ ಅವರ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಸಿನಿಮಾ ಹೇಗಿದೆ? ಇಲ್ಲಿದೆ ಟ್ವಿಟರ್ ವಿಮರ್ಶೆ

ನವೆಂಬರ್​ 12ರಂದು ‘ಟೈಗರ್​ 3’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಈ ಚಿತ್ರ 44.50 ಕೋಟಿ ರೂಪಾಯಿ ಗಳಿಸಿತು. ಇದು ಸಲ್ಮಾನ್​ ಖಾನ್​ ಅವರ ವೃತ್ತಿ ಜೀವನದ ದೊಡ್ಡ ಓಪನಿಂಗ್​. ಹಾಗೆಯೇ ಎರಡನೇ ದಿನ 59.25 ಕೋಟಿ ರೂಪಾಯಿ ಆದಾಯ ಹರಿದುಬಂತು. ಮೂರನೇ ದಿನ 44.75 ಕೋಟಿ ಕಲೆಕ್ಷನ್​ ಆಯಿತು. 4ನೇ ದಿನದ ಕಲೆಕ್ಷನ್​ 21.25 ಕೋಟಿ ರೂಪಾಯಿ. 5ನೇ ದಿನ 18.50 ಕೋಟಿ ರೂಪಾಯಿ ಬಾಚಿಕೊಂಡಿತು. ಆರನೇ ದಿನ 13.25 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. 7ನೇ ದಿನದ 17 ಕೋಟಿ ರೂಪಾಯಿ ಆದಾಯ ಬಂದಿದೆ. ಮುಂದಿನ ದಿನಗಳಲ್ಲಿ ನಿಧಾನವಾಗಿ ಕಲೆಕ್ಷನ್​ ಕುಸಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಸಹೋದರಿಯಾಗಿ ನಟಿಸಬೇಕಿತ್ತು ಐಶ್ವರ್ಯಾ ರೈ; ಮುಲಾಜಿಲ್ಲದೇ ತಿರಸ್ಕರಿಸಿದ್ದ ಸಲ್ಲು

2023ರಲ್ಲಿ ಬಾಲಿವುಡ್​ನ ವ್ಯಾಪ್ತಿ ಹಿರಿದಾಗಿದೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಹಿಂದಿ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್​ ಮಾಡಿವೆ. ಅದೇ ಸಾಲಿಗೆ ‘ಟೈಗರ್​ 3’ ಸಿನಿಮಾ ಕೂಡ ಸೇರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ನಿಜವಾಗಿಲ್ಲ. ಒಂದು ವಾರಕ್ಕೆ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ‘ಟೈಗರ್ 3’ ಸಿನಿಮಾ ಗಳಿಸಿರುವುದು 322 ಕೋಟಿ ರೂಪಾಯಿ ಮಾತ್ರ. ಈ ಸಿನಿಮಾಗೆ ಮನೀಶ್​ ಶರ್ಮಾ ನಿರ್ದೇಶನ ಮಾಡಿದ್ದಾರೆ. ‘ಯಶ್​ ರಾಜ್​ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿದೆ. ವಿಶ್ವಕಪ್​ ಪಂದ್ಯಗಳು ನಡೆಯುತ್ತಿರುವ ಸಮಯದಲ್ಲೇ ‘ಟೈಗರ್​ 3’ ಬಿಡುಗಡೆ ಆಗಿರುವುದು ಕಲೆಕ್ಷನ್​ ತಗ್ಗಲು ಕಾರಣ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಸವಾಲುಗಳಿಗೆ ಉತ್ತರಿಸಬೇಕಿರುವ ಸಿಎಂ ಸದನದಲ್ಲಿರದಿದ್ದರೆ ಹೇಗೆ?ಯತ್ನಾಳ್
ಸವಾಲುಗಳಿಗೆ ಉತ್ತರಿಸಬೇಕಿರುವ ಸಿಎಂ ಸದನದಲ್ಲಿರದಿದ್ದರೆ ಹೇಗೆ?ಯತ್ನಾಳ್
ಮೊಹರಂ ವೇಳೆ ವಿಶಿಷ್ಟ ಆಚರಣೆ, ಸೀರೆ ತೊಟ್ಟ ಪುರುಷರು ನುಡಿತಾರೆ ಭವಿಷ್ಯ
ಮೊಹರಂ ವೇಳೆ ವಿಶಿಷ್ಟ ಆಚರಣೆ, ಸೀರೆ ತೊಟ್ಟ ಪುರುಷರು ನುಡಿತಾರೆ ಭವಿಷ್ಯ
ಪೋಕೋ C61 ಸ್ಮಾರ್ಟ್​ಫೋನ್ ಜತೆಗೆ 50GB ಏರ್​ಟೆಲ್ ಡೇಟಾ ಫ್ರೀ ಸಿಗುತ್ತೆ!
ಪೋಕೋ C61 ಸ್ಮಾರ್ಟ್​ಫೋನ್ ಜತೆಗೆ 50GB ಏರ್​ಟೆಲ್ ಡೇಟಾ ಫ್ರೀ ಸಿಗುತ್ತೆ!
ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್​ ಬಂದ್​​, ಸರ್ಕಾರ ಆದೇಶ
ರೈತನಿಗೆ ಅಪಮಾನ: 7 ದಿನ ಜಿಟಿ ಮಾಲ್​ ಬಂದ್​​, ಸರ್ಕಾರ ಆದೇಶ
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಅವಮಾನಗಳು ಮುಂದುವರಿದರೆ ರೈತರು ಬೆಂಗಳೂರಿಗೆ ಬರೋದನ್ನು ನಿಲ್ಲಿಸ್ತಾರೆ: ಶಾಸಕ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಕರ್ನಾಟಕ ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ, ಕಾಣದಂತಾದ ಹೆಬ್ಬಾರೆ ಸೇತುವೆ
ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ
ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್​​​ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ನಾಲ್ವರು ಸಚಿವರಿಂದ ಸುದ್ದಿಗೋಷ್ಠಿ
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ನಾಲ್ವರು ಸಚಿವರಿಂದ ಸುದ್ದಿಗೋಷ್ಠಿ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಸಾಲಿನ ಫಾಲ್ಸ್​ಗಳಿಗೆ ಜೀವ ಕಳೆ
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಸಾಲಿನ ಫಾಲ್ಸ್​ಗಳಿಗೆ ಜೀವ ಕಳೆ