ರಿಲೇಶನ್​​ಶಿಪ್ ವಿಚಾರದಲ್ಲಿ ಸುದ್ದಿ ಆಗುತ್ತಿರುವ ಸುಷ್ಮಿತಾ ಸೇನ್ ಎಷ್ಟು ಜನರ ಜೊತೆ ಸುತ್ತಾಡಿದ್ದಾರೆ ಗೊತ್ತಾ?

ರೋಹ್ಮನ್ ಶಾಲ್ ಹಾಗೂ ಸುಷ್ಮಿತಾ ಸೇನ್ ಡೇಟಿಂಗ್ ಮಾಡುತ್ತಿದ್ದಾರೆ. ಸುಷ್ಮಿತಾ ಸೇನ್​ ಅವರಿಗೆ ಈಗ 48 ವರ್ಷ. ಅವರ ಲವರ್ ರೋಹ್ಮನ್​ ಶಾಲ್​ಗೆ 32 ವರ್ಷ ವಯಸ್ಸು. ಸುಷ್ಮಿತಾಗಿಂತಲೂ ರೋಹ್ಮನ್​ ಅವರು 16 ಸಣ್ಣವರು. 2018ರಲ್ಲಿ ಮೊದಲ ಬಾರಿಗೆ ಸುಷ್ಮಿತಾ ಅವರು ರೋಹ್ಮನ್​ ಜೊತೆ ಇರೋ ಫೋಟೋ ಹಂಚಿಕೊಂಡಿದ್ದರು

ರಿಲೇಶನ್​​ಶಿಪ್ ವಿಚಾರದಲ್ಲಿ ಸುದ್ದಿ ಆಗುತ್ತಿರುವ ಸುಷ್ಮಿತಾ ಸೇನ್ ಎಷ್ಟು ಜನರ ಜೊತೆ ಸುತ್ತಾಡಿದ್ದಾರೆ ಗೊತ್ತಾ?
ರೋಹ್ಮನ್​ ಶಾಲ್​, ಸುಷ್ಮಿತಾ ಸೇನ್​, ಲಲಿತ್​ ಮೋದಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Nov 20, 2023 | 10:45 AM

ನಟಿ ಸುಷ್ಮಿತಾ ಸೇನ್ (Sushmita Sen) ಅವರು ಲಲಿತ್ ಮೋದಿ ಜೊತೆಗಿನ ಡೇಟಿಂಗ್ ವಿಚಾರದಿಂದ ಸುದ್ದಿ ಆಗಿದ್ದರು. ಈಗ ಅವರು ಮತ್ತೆ ತಮ್ಮ ಹಳೆಯ ಬಾಯ್​ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಸುತ್ತಾಟ ಮಾಡೋಕೆ ಶುರು ಮಾಡಿದ್ದಾರೆ. ಲಲಿತ್ ಮೋದಿ (Lalit Modi) ಜೊತೆಗಿನ ರಿಲೇಶನ್​ಶಿಪ್ ಕೊನೆ ಆಗಿರುವ ಬಗ್ಗೆ ಅವರು ಈಗಾಗಲೇ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಸುಷ್ಮಿತಾ ಸೇನ್ ಅವರು ರಿಲೇಶನ್​ಶಿಪ್ (Relationship) ವಿಚಾರದಲ್ಲಿ ಸಾಕಷ್ಟು ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಹಲವರ ಜೊತೆ ಡೇಟಿಂಗ್ ಮಾಡಿದ್ದರು. ಸುಷ್ಮಿತಾ ಸೇನ್ ಬಾಳಲ್ಲಿ ಹಲವರು ಬಂದು ಹೋಗಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ರೋಹ್ಮನ್ ಶಾಲ್

ರೋಹ್ಮನ್ ಶಾಲ್ ಹಾಗೂ ಸುಷ್ಮಿತಾ ಸೇನ್ ಡೇಟಿಂಗ್ ಮಾಡುತ್ತಿದ್ದಾರೆ. ಸುಷ್ಮಿತಾ ಸೇನ್​ ಅವರಿಗೆ ಈಗ 48 ವರ್ಷ. ಅವರ ಲವರ್ ರೋಹ್ಮನ್​ ಶಾಲ್​ಗೆ 32 ವರ್ಷ ವಯಸ್ಸು. ಸುಷ್ಮಿತಾಗಿಂತಲೂ ರೋಹ್ಮನ್​ ಅವರು 16 ಸಣ್ಣವರು. 2018ರಲ್ಲಿ ಮೊದಲ ಬಾರಿಗೆ ಸುಷ್ಮಿತಾ ಅವರು ರೋಹ್ಮನ್​ ಜೊತೆ ಇರೋ ಫೋಟೋ ಹಂಚಿಕೊಂಡಿದ್ದರು. ಇವರಿಬ್ಬರ ನಡುವೆ ಲವ್ ಆಗಿರೋ ವಿಚಾರ ಬಳಿಕ ಖಚಿತವಾಯಿತು. 2021ರ ಅಂತ್ಯದ ವೇಳೆಗೆ ಇವರದ್ದು ಬ್ರೇಕಪ್ ಆಯಿತು. ಬ್ರೇಕಪ್ ಆದ ವಿಚಾರವನ್ನು ಸುಷ್ಮಿತಾ ಸೇನ್ ಕೂಡ ಖಚಿತಪಡಿಸಿದ್ದರು. ಈಗ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಒಟ್ಟಾಗಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ತಮಗಿಂತ 15 ವರ್ಷ ಕಿರಿಯ ವ್ಯಕ್ತಿಯ ಜೊತೆ ನಟಿ ಸುಷ್ಮಿತಾ ಸೇನ್​ ಡೇಟಿಂಗ್​

ಲಲಿತ್ ಮೋದಿ

ಲಲಿತ್ ಮೋದಿ ಜೊತೆ ಸಮಯ ಕಳೆಯುತ್ತಿರುವ ಫೋಟೋನ ಸುಷ್ಮಿತಾ ಸೇನ್ ಹಂಚಿಕೊಂಡಿದ್ದರು. ಇದು ಸಾಕಷ್ಟು ಕುತೂಹಲ ಮೂಡಿಸಿತ್ತು. ಹಣಕ್ಕಾಗಿಯೇ ಅವರು ಲಲಿತ್ ಜೊತೆ ಸುತ್ತಾಡಿದ್ದರು ಎನ್ನುವ ಆರೋಪ ಕೇಳಿ ಬಂತು. ಆದರೆ, ಇವರ ಸುತ್ತಾಟ ಹೆಚ್ಚು ದಿನ ನಡೆಯಲೇ ಇಲ್ಲ.

ವಿಕ್ರಮ್ ಭಟ್

ವಿಕ್ರಮ್ ಭಟ್ ಹಾಗೂ ಸುಷ್ಮಿತಾ ಸೇನ್ 1996ರ ಸಂದರ್ಭದಲ್ಲಿ ಸುತ್ತಾಟ ನಡೆಸಿದ್ದರು. ‘ದಸ್ತಕ್​’ ಚಿತ್ರದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾ 1996ರಲ್ಲಿ ರಿಲೀಸ್ ಆಯಿತು. ವಿಕ್ರಮ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದರು. ಇಬ್ಬರ ಮಧ್ಯೆ ಆಗಲೇ ಪ್ರೀತಿ ಮೂಡಿತ್ತು. ಇವರು ಬಾಲಿವುಡ್​ನ ಕ್ಯೂಟ್ ಕಪಲ್ ಎನಿಸಿಕೊಂಡಿದ್ದರು.

ಇದನ್ನೂ ಓದಿ: ಲಲಿತ್ ಮೋದಿ ಜೊತೆಗಿನ ಸಂಬಂಧ ಎಂಥದ್ದು? ಮೌನ ಮುರಿದ ಸುಷ್ಮಿತಾ ಸೇನ್

ರಣದೀಪ್ ಹೂಡ

ಬಾಲಿವುಡ್​ನಲ್ಲಿ ರಣದೀಪ್ ಹೂಡ ಗುರುತಿಸಿಕೊಂಡಿದ್ದಾರೆ. ಅವರು ಸುಷ್ಮಿತಾ ಸೇನ್ ಜೊತೆ 3 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಮಾಧ್ಯಮಗಳಿಗೆ ಇವರ ರಿಲೇಶನ್​ಶಿಪ್ ವಿಚಾರ ಹಾಟ್ ಟಾಪಿಕ್ ಆಗಿತ್ತು. ಆದರೆ, ಇವರ ಸಂಬಂಧ ಬ್ರೇಕಪ್​ನಲ್ಲಿ ಕೊನೆ ಆಯಿತು. ‘ಸುಷ್ಮಿತಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದು ನನ್ನ ಜೀವನದಲ್ಲಿ ನಡೆದ ಒಳ್ಳೆಯ ವಿಚಾರ’ ಎಂದು ರಣದೀಪ್ ಅವರು ಹೇಳಿಕೊಂಡಿದ್ದರು. ಅವರ ಹೇಳಿಕೆ ಸಾಕಷ್ಟು ಅಚ್ಚರಿ ಮೂಡಿಸಿತ್ತು.

ಬಂಟಿ ಸಚ್​ದೇವ್​

ಕೇವಲ ಚಿತ್ರರಂಗದವರು ಮಾತ್ರವಲ್ಲದೆ ಉದ್ಯಮಿಗಳ ಜೊತೆಯೂ ಸುಷ್ಮಿತಾ ಸೇನ್ ಸುತ್ತಾಟ ನಡೆಸಿದ್ದರು. ಟ್ಯಾಲೆಂಟ್ ಮ್ಯಾನೇಜ್​ಮೆಂಟ್ ಕಂಪನಿ ಹೊಂದಿರುವ ಬಂಟಿ ಸಚ್​ದೇವ್ ಜೊತೆ ಸುಷ್ಮಿತಾ ಸೇನ್ ರಿಲೇಶನ್​ಶಿಪ್​ನಲ್ಲಿದ್ದರು. ಇವರು ಹಲವು ಬಾರಿ ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಸುಷ್ಮಿತಾ ನಕ್ಕು ಸುಮ್ಮನಾಗಿದ್ದರು.

ಇದನ್ನೂ ಓದಿ: ಲಲಿತ್​ ಮೋದಿ ಬಿಟ್ಟು ಮತ್ತೆ ಹಳೇ ಹುಡುಗನ ಜತೆ ಸುಷ್ಮಿತಾ ಸೇನ್​ ಡೇಟಿಂಗ್​; 15 ವರ್ಷ ವಯಸ್ಸಿನ ಅಂತರ

ವಾಸಿಮ್ ಅಕ್ರಮ್

ಪಾಕಿಸ್ತಾನದ ಕ್ರಿಕೆಟರ್ ಜೊತೆಯೂ ಸುಷ್ಮಿತಾ ಸೇನ್​ಗೆ ರಿಲೇಶನ್​ಶಿಪ್ ಇತ್ತು. ಪಾಕ್​ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ವಾಸಿಮ್ ಅಕ್ರಮ್ ಹಾಗೂ ಸುಷ್ಮಿತಾ ಸೇನ್ ಸುತ್ತಾಟ ನಡೆಸಿದ್ದರು ಎನ್ನಲಾಗಿದೆ. ಲಾಂಗ್​ ಡಿಸ್ಟನ್ಸ್ ಇದ್ದಿದ್ದರಿಂದ ಇವರ ಸಂಬಂಧ ಐದು ತಿಂಗಳಲ್ಲಿ ಮುರಿದು ಬಿದ್ದಿತ್ತು.

ರಿತಿಕ್ ಭಾಸಿನ್

ಮುಂಬೈನಲ್ಲಿ ರಿತಿಕ್ ಭಾಸಿನ್ ರೆಸ್ಟೋರೆಂಟ್ ಹೊಂದಿದ್ದರು. ಅವರ ಜೊತೆ ಡೇಟಿಂಗ್ ಮಾಡಿದ್ದರು ಸುಷ್ಮಿತಾ ಸೇನ್. ಇವರ ಸಂಬಂಧ ಆರಂಭವಾದ ವೇಗದಲ್ಲೇ ಕೊನೆಗೊಂಡಿತ್ತು. ಸುಷ್ಮಿತಾ ಸೇನ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಮುದಸ್ಸಾರ್ ಆಜಿಜ್

ಸುಷ್ಮಿತಾ ಸೇನ್ ಹಾಗೂ ಡೈರೆಕ್ಟರ್ ಮುದಸ್ಸಾರ್ ಆಜಿಜ್ ಮಧ್ಯೆ ಪ್ರೀತಿ ಹುಟ್ಟಿತ್ತು. ಇವರ ಲವ್ ಕೊನೆ ಆಯಿತು. ಇದಕ್ಕೆ ಕಾರಣ ಸಿಕ್ಕಿಲ್ಲ. ಸುಷ್ಮಿತಾ ಸೇನ್ ಜೊತೆ ಲವ್ ಇರುವ ಕಾರಣಕ್ಕೆ ಮುದಸ್ಸಾರ್ ತಂದೆ-ತಾಯಿ ಸಾಕಷ್ಟು ಡಿಸ್ಟರ್ಬ್ ಆಗಿದ್ದರು. ಸಂದರ್ಶನದಲ್ಲಿ ಈ ಬಗ್ಗೆ ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: Sushmita Sen: ಮಂಗಳಮುಖಿ ವೇಷದಲ್ಲಿ ಸುಷ್ಮಿತಾ ಸೇನ್​; 23 ವರ್ಷದ ಮಗಳ ಪ್ರತಿಕ್ರಿಯೆ ಏನು?

ಇಮ್ತಿಯಾಜ್ ಖತ್ರಿ

ಸುಷ್ಮಿತಾ ಸೇನ್ ಅವರು 36ನೇ ವಯಸ್ಸಿನಲ್ಲಿ ಉದ್ಯಮಿ ಇಮ್ತಿಯಾಜ್ ಖತ್ರಿ ಜೊತೆ ಡೇಟ್ ಮಾಡಿದ್ದರು. ಅಚ್ಚರಿ ಎಂದರೆ, ಆಗ ಅವರಿಗೆ 22 ವರ್ಷ ವಯಸ್ಸು. ಗೋವಾ ಬೀಚ್​ನಲ್ಲಿ ಇವರು ಸುತ್ತಾಡಿದ್ದರು. ಸುಷ್ಮಿತಾ ಅವರು ಈ ಬಗ್ಗೆ ಹೆಚ್ಚು ಮಾತನಾಡಿಲ್ಲ.

ಸಬೀರ್ ಭಾಟಿಯಾ

ಸುಷ್ಮಿತಾ ಸೇನ್ ಅವರು ಸಬೀರ್ ಭಾಟಿಯಾ ಜೊತೆ ರಿಲೇಶನ್​ಶಿಪ್​ನಲ್ಲಿದ್ದರು. ಸುಷ್ಮಿತಾಗೆ ಡೈಮಂಡ್ ಅನ್ನು ಸಬೀರ್ ಗಿಫ್ಟ್ ಮಾಡಿದ್ದರು. ಸಬೀರ್ ಅವರು ಹಾಟ್​ಮೇಲ್​ನ ಸಂಸ್ಥಾಪಕ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.