ಲಲಿತ್ ಮೋದಿ ಜೊತೆಗಿನ ಸಂಬಂಧ ಎಂಥದ್ದು? ಮೌನ ಮುರಿದ ಸುಷ್ಮಿತಾ ಸೇನ್

ಉದ್ಯಮಿ ಲಲಿತ್​ ಮೋದಿ ಜೊತೆ ಕಳೆದ ವರ್ಷ ಸುಷ್ಮಿತಾ ಸೇನ್ ರಿಲೇಷನ್​ಶಿಪ್​ನಲ್ಲಿ ಇದ್ದರು. ಕೆಲವು ತಿಂಗಳ ನಂತರ ಅವರ ಸಂಬಂಧ ಕೊನೆ ಆಯಿತು. ಸ್ವಲ್ಪ ಸಮಯ ಸಿಂಗಲ್ ಆಗಿದ್ದ ಸುಷ್ಮಿತಾ ಸೇನ್​ ಅವರು ಮತ್ತೆ ಪ್ರೇಮ ಬಲೆಗೆ ಬಿದ್ದಿದ್ದಾರೆ.

ಲಲಿತ್ ಮೋದಿ ಜೊತೆಗಿನ ಸಂಬಂಧ ಎಂಥದ್ದು? ಮೌನ ಮುರಿದ ಸುಷ್ಮಿತಾ ಸೇನ್
ಸುಷ್ಮಿತಾ ಸೇನ್-ಲಲಿತ್ ಮೋದಿ
Follow us
|

Updated on: Nov 19, 2023 | 8:37 AM

ನಟಿ ಸುಷ್ಮಿತಾ ಸೇನ್ (Sushmita Sen) ಅವರು ರಿಲೇಶನ್​ಶಿಪ್ ವಿಚಾರದಲ್ಲಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಈ ವಿಚಾರದಲ್ಲಿ ಹಲವು ವರ್ಷಗಳಿಂದ ಎಲ್ಲರ ಟೀಕೆಗೆ ಒಳಗಾಗುತ್ತಲೇ ಇದ್ದಾರೆ. ವಯಸ್ಸಿನಲ್ಲಿ ಸಣ್ಣವರು ಅಥವಾ ದೊಡ್ಡವರ ಜೊತೆ ಡೇಟ್ ಮಾಡುತ್ತಾರೆ. ಆದರೆ, ಈ ಬಗ್ಗೆ ಅವರು ಓಪನ್ ಆಗಿ ಮಾತನಾಡುತ್ತಾರೆ. ಲಲಿತ್ ಮೋದಿ ಜೊತೆ ಸುಷ್ಮಿತಾ ಸೇನ್ ಸುತ್ತಾಟ ನಡೆಸಿದ್ದರು. ಅವರನ್ನು ಬಿಟ್ಟು ಮತ್ತೆ ರೋಹ್ಮನ್​ ಶಾಲ್ ಜೊತೆ ಸುಷ್ಮಿತಾ ಸೇನ್ ಸುತ್ತಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಸುಷ್ಮಿತಾ ಸೇನ್ ಮಾತನಾಡಿದ್ದಾರೆ.

ಉದ್ಯಮಿ ಲಲಿತ್​ ಮೋದಿ ಜೊತೆ ಕಳೆದ ವರ್ಷ ಸುಷ್ಮಿತಾ ಸೇನ್ ರಿಲೇಷನ್​ಶಿಪ್​ನಲ್ಲಿ ಇದ್ದರು. ಕೆಲವು ತಿಂಗಳ ನಂತರ ಅವರ ಸಂಬಂಧ ಕೊನೆ ಆಯಿತು. ಸ್ವಲ್ಪ ಸಮಯ ಸಿಂಗಲ್ ಆಗಿದ್ದ ಸುಷ್ಮಿತಾ ಸೇನ್​ ಅವರು ಮತ್ತೆ ಪ್ರೇಮ ಬಲೆಗೆ ಬಿದ್ದಿದ್ದಾರೆ. ಹಳೇ ಬಾಯ್​ಫ್ರೆಂಡ್​ ರೋಹ್ಮನ್​ ಶಾಲ್​ ಜೊತೆ ಸುಷ್ಮಿತಾ ಸೇನ್ ಡೇಟ್ ಮಾಡುತ್ತಿದ್ದಾರೆ. ಲಲಿತ್ ಮೋದಿ ಜೊತೆ ಡೇಟ್ ಮಾಡುವಾಗ ಅನೇಕರು ಸುಷ್ಮಿತಾ ಸೇನ್ ಅವರು ಟೀಕೆ ಮಾಡಿದ್ದರು. ಹಣಕ್ಕಾಗಿಯೇ ಅವರು ಲಲಿತ್ ಮೋದಿ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎಂದು ಅನೇಕರು ಟೀಕಿಸಿದ್ದರು. ಇದಕ್ಕೆ ಅವರು ಉತ್ತರ ನಿಡಿದ್ದಾರೆ.

ಲಲಿತ್ ಮೋದಿಯವರನ್ನು ಮದುವೆ ಆಗುವ ಆಲೋಚನೆ ಸುಷ್ಮಿತಾ ಸೇನ್​ಗೆ ಇರಲಿಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಇನ್​ಸ್ಟಾಗ್ರಾಮ್​ನಲ್ಲಿ ಆ ಪೋಸ್ಟ್​ ಹಾಕಲು ಒಂದು ಕಾರಣ ಇದೆ. ಕೆಲವೊಮ್ಮೆ ಜನರು ಮೌನವಾಗಿದ್ದಾಗ ಅವರ ಮೌನವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸುತ್ತೇನೆ. ನಾನು ನಗುತ್ತಿದ್ದೇನೆ ಎಂದು ಜನರಿಗೆ ತಿಳಿಸಲು ಒಂದು ಪೋಸ್ಟ್ ಹಾಕಿದೆ. ಅದು ಅಲ್ಲಿಗೆ ಮುಗಿದಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಲಲಿತ್​ ಮೋದಿ ಬಿಟ್ಟು ಮತ್ತೆ ಹಳೇ ಹುಡುಗನ ಜತೆ ಸುಷ್ಮಿತಾ ಸೇನ್​ ಡೇಟಿಂಗ್​; 15 ವರ್ಷ ವಯಸ್ಸಿನ ಅಂತರ

ಸುಷ್ಮಿತಾ ಈಗ ಲಲಿತ್ ಅವರನ್ನು ಬಿಟ್ಟು ರೋಹ್ಮನ್​ ಶಾಲ್ ಜೊತೆ ಡೇಟ್ ಮಾಡುತ್ತಿದ್ದಾರೆ. ಇವರ ಸಂಬಂಧದ ಬಗ್ಗೆ ಅನೇಕರಿಗೆ ಅಚ್ಚರಿ ಇದೆ. ಸುಷ್ಮಿತಾ ಸೇನ್​ಗೆ 47 ವರ್ಷ ವಯಸ್ಸು. ರೋಹ್ಮನ್​ ಶಾಲ್​ಗೆ 32ರ ಪ್ರಾಯ. ಸುಷ್ಮಿತಾಗಿಂತಲೂ ರೋಹ್ಮನ್​ 15 ವರ್ಷ ಕಿರಿಯರು.  ಇನ್ನು, ಸುಷ್ಮಿತಾಗಿಂತ ಲಲಿತ್ ಹಿರಿಯರಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ