ಲಲಿತ್ ಮೋದಿ ಬಿಟ್ಟು ಮತ್ತೆ ಹಳೇ ಹುಡುಗನ ಜತೆ ಸುಷ್ಮಿತಾ ಸೇನ್ ಡೇಟಿಂಗ್; 15 ವರ್ಷ ವಯಸ್ಸಿನ ಅಂತರ
ಇತ್ತೀಚೆಗೆ ಸೆಲೆಬ್ರಿಟಿಗಳ ದೀಪಾವಳಿ ಪಾರ್ಟಿ ನಡೆದಿದೆ. ಇದರಲ್ಲಿ ಅನೇಕ ನಟ-ನಟಿಯರು, ತಂತ್ರಜ್ಞರು ಭಾಗಿ ಆಗಿದ್ದಾರೆ. ಸುಷ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಅವರು ಕೈ-ಕೈ ಹಿಡಿದುಕೊಂಡು ಬಂದಿದ್ದಾರೆ. ಪಾಪರಾಜಿಗಳ ಕ್ಯಾಮೆರಾಗೆ ಅವರು ಖುಷಿಯಿಂದಲೇ ಪೋಸ್ ನೀಡಿದ್ದಾರೆ. ಆ ಮೂಲಕ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ.
ಬಾಲಿವುಡ್ ನಟಿ ಸುಷ್ಮಿತಾ ಸೇನ್ (Sushmita Sen) ಅವರು ಸಿನಿಮಾಗಳಿಗಿಂತಲೂ ಹೆಚ್ಚಾಗಿ ವೈಯಕ್ತಿಕ ಕಾರಣದಿಂದಲೇ ಸುದ್ದಿ ಆಗುತ್ತಾರೆ. ಹಲವರ ಜೊತೆ ಅವರು ಡೇಟಿಂಗ್ ನಡೆಸಿದ್ದಾರೆ. ಕಳೆದ ವರ್ಷ ಅವರು ಉದ್ಯಮಿ ಲಲಿತ್ ಮೋದಿ (Lalit Modi) ಜೊತೆ ರಿಲೇಷನ್ಶಿಪ್ನಲ್ಲಿ ಇದ್ದರು. ಕೆಲವು ತಿಂಗಳ ನಂತರ ಅವರ ಸಂಬಂಧ ಮುರಿದುಬಿತ್ತು. ಆ ಬಳಿಕ ಸ್ವಲ್ಪ ದಿನಗಳವರೆಗೆ ಸಿಂಗಲ್ ಆಗಿದ್ದ ಸುಷ್ಮಿತಾ ಸೇನ್ ಅವರು ಈಗ ಮತ್ತೆ ಪ್ರೀತಿ-ಪ್ರೇಮ ಶುರು ಮಾಡಿಕೊಂಡಿದ್ದಾರೆ. ಅಚ್ಚರಿ ಏನೆಂದರೆ ಈ ಬಾರಿ ಅವರ ಬಾಳಿನಲ್ಲಿ ಬಂದಿರುವುದು ಯಾವುದೋ ಹೊಸ ಹುಡುಗ ಅಲ್ಲ. ಬದಲಿಗೆ, ಹಳೇ ಬಾಯ್ಫ್ರೆಂಡ್ ರೋಹ್ಮನ್ ಶಾಲ್ (Rohman Shawl) ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿ ಅವರು ಒಟ್ಟಿಗೆ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.
ಸುಷ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಅವರ ಸಂಬಂಧದ ಬಗ್ಗೆ ಅನೇಕರಿಗೆ ಅಚ್ಚರಿ ಆಗಿದ್ದುಂಟು. ಯಾಕೆಂದರೆ ಅವರಿಬ್ಬರ ನಡುವೆ ವಯಸ್ಸಿನ ಅಂತರ ದೊಡ್ಡದಿದೆ. ಸುಷ್ಮಿತಾ ಸೇನ್ ಅವರಿಗೆ ಈಗ 47 ವರ್ಷ ವಯಸ್ಸು. ಅವರ ಪ್ರಿಯಕರ ರೋಹ್ಮನ್ ಶಾಲ್ ಅವರಿಗೆ ಈಗಿನ್ನೂ 32ರ ಪ್ರಾಯ. ಸುಷ್ಮಿತಾಗಿಂತಲೂ ರೋಹ್ಮನ್ ಅವರು 15 ವರ್ಷ ಕಿರಿಯರು. ಈ ಜೋಡಿಯ ನಡುವೆ ಪ್ರೀತಿ ಚಿಗುರಿದಾಗ ಎಲ್ಲರಿಗೂ ಶಾಕ್ ಆಗಿದ್ದು ನಿಜ. ಇಬ್ಬರ ಸಂಬಂಧದಲ್ಲಿ ಹಲವು ಏರಿಳಿತಗಳು ಉಂಟಾಗುತ್ತಲೇ ಇವೆ.
ಇದನ್ನೂ ಓದಿ: Sushmita Sen: ಮಂಗಳಮುಖಿ ವೇಷದಲ್ಲಿ ಸುಷ್ಮಿತಾ ಸೇನ್; 23 ವರ್ಷದ ಮಗಳ ಪ್ರತಿಕ್ರಿಯೆ ಏನು?
2018ರಲ್ಲಿ ಮೊದಲ ಬಾರಿಗೆ ರೋಹ್ಮನ್ ಶಾಲ್ ಮತ್ತು ಸುಷ್ಮಿತಾ ಸೇನ್ ಅವರು ಭೇಟಿ ಆಗಿದ್ದರು. ಆ ಬಳಿಕ ಅವರು ಡೇಟಿಂಗ್ ಮಾಡಲು ಆರಂಭಿಸಿದ್ದರು. ಮೂರು ವರ್ಷಗಳ ಕಾಲ ಅವರ ನಡುವೆ ಎಲ್ಲವೂ ಚೆನ್ನಾಗಿತ್ತು. ಆದರೆ 2021ರಲ್ಲಿ ಅದೇನಾಯಿತೋ ಗೊತ್ತಿಲ್ಲ, ಆ ವರ್ಷ ಡಿಸೆಂಬರ್ನಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಆ ಬಳಿಕ ಸುಷ್ಮಿತಾ ಸೇನ್ ಅವರ ಬದುಕಿನಲ್ಲಿ ಲಲಿತ್ ಮೋದಿ ಎಂಟ್ರಿ ಆಗಿದ್ದರು. ಆದರೆ ಆ ಸಂಬಂಧ ಕೂಡ ಹೆಚ್ಚು ದಿನ ಮುಂದುವರಿಯಲಿಲ್ಲ.
View this post on Instagram
ಇತ್ತೀಚೆಗೆ ಸೆಲೆಬ್ರಿಟಿಗಳ ದೀಪಾವಳಿ ಪಾರ್ಟಿ ನಡೆದಿದೆ. ಈ ಔತಣ ಕೂಟದಲ್ಲಿ ಅನೇಕ ನಟ-ನಟಿಯರು, ತಂತ್ರಜ್ಞರು ಭಾಗಿ ಆಗಿದ್ದಾರೆ. ಸುಷ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಅವರು ಕೈ-ಕೈ ಹಿಡಿದುಕೊಂಡು ಬಂದಿದ್ದಾರೆ. ಪಾಪರಾಜಿಗಳ ಕ್ಯಾಮೆರಾಗೆ ಅವರು ಖುಷಿಯಿಂದಲೇ ಪೋಸ್ ನೀಡಿದ್ದಾರೆ. ಆ ಮೂಲಕ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ‘ಲಲಿತ್ ಮೋದಿ ಎಲ್ಲಿ? ಅವರ ಕಥೆ ಏನಾಯ್ತು’ ಎಂದು ನೆಟ್ಟಿಗರು ಕಮೆಂಟ್ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಸುಷ್ಮಿತಾ ಸೇನ್ ಯಾವಾಗ ಉತ್ತರ ಕೊಡುತ್ತಾರೆ ಅಂತ ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.