ಜಾಕ್ ಎಂಬಾತ ವರ್ಷದಲ್ಲಿ ಅತ್ಯಧಿಕ ಸಿನಿಮಾ ನೋಡಿ ಗಿನ್ನಿಸ್ ದಾಖಲೆ ನಿರ್ಮಿಸಿದ: ಸ್ಪರ್ಧೆಯ ನಿಯಮಗಳು ಏನಿದ್ದವು? ಅಷ್ಟಕ್ಕೂ ಆತ ಈ ಹುಚ್ಚು ಸಾಹಸ ಮಾಡಿದ್ದೇಕೆ?
Zachariah Swope: 2022 ರ ಮೇ ತಿಂಗಳಲ್ಲಿ ದಾಖಲೆ ನಿರ್ಮಿಸುವ ಉದ್ದೇಶದಿಂದಲೇ ಜಾಕ್ ಸಿನಿಮಾಗಳನ್ನು ವೀಕ್ಷಿಸಲು ಪ್ರಾರಂಭಿಸಿದ. ಮಿಲಿಯನ್ಸ್ ರೈಸ್ ಆಫ್ ಗ್ರು.. Minions rise of gru cinema ಜಾಕ್ ನೋಡಿದ ಮೊದಲು ಸಿನಿಮಾ. ಇಂಡಿಯಾನಾ ಜೋನ್ಸ್ ಅಂಡ್ ಡಯಲ್ ಆಫ್ ಡೆಸ್ಟಿನಿ indiana jones and the dial of destiny movie ಯೊಂದಿಗೆ ಚಲನಚಿತ್ರಗಳ ಸತತ ವೀಕ್ಷಣೆ ಅಭಿಯಾನವನ್ನು ಪೂರ್ಣಗೊಳಿಸಿದ. ಇದರಿಂದಾಗಿ ಜಗತ್ತಿನಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ವೀಕ್ಷಿಸಿದ ವ್ಯಕ್ತಿ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಜಾಕ್ ಅರ್ಹರಾಗಿ ಪಾತ್ರರಾಗಿದ್ದಾರೆ.
ಸ್ವಲ್ಪವೇ ಬಿಡುವು ಸಿಕ್ಕಿದರೂ ಸಾಕು ಮನಸಿಗೆ ಮನರಂಜನೆ ನೀಡಲು ಬಯಸುತ್ತೇವೆ. ಸಿನಿ ಪ್ರಿಯರು ಒಂದಷ್ಟು ಸಿನಿಮಾ ನೋಡುತ್ತೇವೆ ಅಂತಾರೆ. ಒಂದಷ್ಟು ಅಂದರೆ ಎಷ್ಟು? ವಾರಕ್ಕೆ ಒಂದೋ ಎರಡೋ ಇರಬಹುದು. ಸಾಮಾನ್ಯ ಜನರಿಗೆ ಸಾಧ್ಯವಾಗುವುದೂ ಅಷ್ಟೇ ಅನ್ನಿ! ಆದರೆ ಇಲ್ಲೊಬ್ಬ ಆಸಾಮಿ ಇದ್ದಾನೆ. ಈತ ಬಿಡಿ, ದಾಖಲೆ ಮಾಡುವುದಕ್ಕಾಗಿಯೇ ಆ ಸಾಧನೆ ಮಾಡಿದ್ದಾನೆ. ಜೊತೆಗೆ, ಆತನಿಗೆ ಸಿನಿಮಾ ಹುಚ್ಚೂ ಇದೆ ಅನ್ನಿ. ಅಷ್ಟಕ್ಕೇ ಆತ ದಿನಕ್ಕೆ ಕನಿಷ್ಠ ಮೂರು ಸಿನಿಮಾಗಳನ್ನು ನೋಡಿ ಒಂದು ವರ್ಷದಲ್ಲಿ 777 ಸಿನಿಮಾಗಳನ್ನು ಸಿನಿಮಾ ಮಂದಿರಗಳಲ್ಲಿಯೇ ವೀಕ್ಷಿಸಿದ್ದಾನೆ. Guinness World Record ಸಂಸ್ಥೆಯವರು ಇದು ಗಿನ್ನಿಸ್ ದಾಖಲೆಗೆ ಅರ್ಹವಾದುದು ಎಂದಿದ್ದಾರೆ.
ಸಿನಿಮಾಗಳೆಂದರೆ ಬಹುತೇಕ ಎಲ್ಲರಿಗೂ ಫೇವರಿಟ್ ಅಂತಾ ಹೇಳಬಹುದು… ಸ್ವಲ್ಪ ಸಮಯ ಸಿಕ್ಕರೆ ಸಾಕು ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಆದರೆ ಅಮೆರಿಕದ ಈ ವ್ಯಕ್ತಿಗೆ ಮಾತ್ರ ಸಿನಿಮಾಗಳೆಂದರೆ ಅಪರಿಮಿತ ಪ್ರೀತಿ… ಅದೇ ಗುಂಗಿನಲ್ಲಿ ಗಿನ್ನಿಸ್ ದಾಖಲೆಯನ್ನೇ ಸೃಷ್ಟಿಸಿದ್ದಾನೆ. ನಿರಂತರವಾಗಿ 777 ಚಲನಚಿತ್ರಗಳನ್ನು ವೀಕ್ಷಿಸಿ, ರೆಕಾರ್ಡ್ ಮಾಡಿದ್ದಾನೆ.
ಅಮೆರಿಕದ 32 ವರ್ಷದ ಜ್ಯಾಕ್ ಅವರಿಗೆ (Zachariah Swope, a cinephile from Pennsylvania, USA) ಚಲನಚಿತ್ರಗಳೆಂದರೆ ಬಹಳಷ್ಟು ಇಷ್ಟ. ಹಾಗಾಗಿ ಸಿನಿಮಾಗೆ ಸಂಬಂಧಿಸಿದಂತೆ ವಿಶ್ವ ದಾಖಲೆ ನಿರ್ಮಿಸಲು ಜ್ಯಾಕ್ ಅದೊಂದು ಫೈನ್ ಡೇ ಜಾಕ್ ಹಾಕಿದ. ಅದಕ್ಕಾಗಿ ಆತ ಒಂದೆಡೆ ಕೆಲಸವನ್ನೂ ಮಾಡುತ್ತಾ, ಮತ್ತೊಂದು ವೇಳೆಯಲ್ಲಿ ಥಿಯೇಟರ್ ನಲ್ಲಿ ಚಿತ್ರಗಳನ್ನು ನೋಡತೊಡಗಿದ! ಜಾಕ್ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕೆಲಸಕ್ಕೆ ಹೋಗುತ್ತಿದ್ದ. ಜೊತೆಗೆ, ಸಂಖ್ಯೆ ಹೆಚ್ಚಿಸಿಕೊಳ್ಳಲು ವಾರಾಂತ್ಯದಲ್ಲಿ ದಿನಕ್ಕೆ ಮೂರು ಚಲನಚಿತ್ರಗಳನ್ನು ನೋಡತೊಡಗಿದ ಪುಣ್ಯಾತ್ಮ. ಇನ್ನು, ಕೆಲಸದ ರಜಾ ದಿನಗಳಲ್ಲಿ ಡಬಲ್ ಸಂಖ್ಯೆಯಲ್ಲಿ ಸಿನಿಮಾ ನೋಡತೊಡಗಿದರು.
ನಮ್ಮ ಥರ ಮಧ್ಯೆ ಪಾಪ್ ಕಾರ್ನ್, ಕುರುಕುಲು ತಿನ್ನುವ ಹಾಗಿರಲಿಲ್ಲ!
2022 ರ ಮೇ ತಿಂಗಳಲ್ಲಿ ದಾಖಲೆ ನಿರ್ಮಿಸುವ ಉದ್ದೇಶದಿಂದಲೇ ಜಾಕ್ ಸಿನಿಮಾಗಳನ್ನು ವೀಕ್ಷಿಸಲು ಪ್ರಾರಂಭಿಸಿದ. ಮಿಲಿಯನ್ಸ್ ರೈಸ್ ಆಫ್ ಗ್ರು.. Minions rise of gru cinema ಜಾಕ್ ನೋಡಿದ ಮೊದಲು ಸಿನಿಮಾ. ಇಂಡಿಯಾನಾ ಜೋನ್ಸ್ ಅಂಡ್ ಡಯಲ್ ಆಫ್ ಡೆಸ್ಟಿನಿ indiana jones and the dial of destiny movie ಯೊಂದಿಗೆ ಚಲನಚಿತ್ರಗಳ ಸತತ ವೀಕ್ಷಣೆ ಅಭಿಯಾನವನ್ನು ಪೂರ್ಣಗೊಳಿಸಿದ.
ಇದರಿಂದಾಗಿ ಜಗತ್ತಿನಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ವೀಕ್ಷಿಸಿದ ವ್ಯಕ್ತಿ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಜಾಕ್ ಅರ್ಹರಾಗಿ ಪಾತ್ರರಾಗಿದ್ದಾರೆ. ಆದರೆ ಈ ದಾಖಲೆಯನ್ನು ರಚಿಸಲು ಜಾಕ್ ಕೂಡ ಕೆಲವೊಂದು ನಿಯಮಗಳನ್ನು ಪಾಲಿಸಿದ್ದಾರೆ. ಸಿನಿಮಾಗಳನ್ನು ನೋಡುವಾಗ ಮಧ್ಯೆ ಪಾಪ್ ಕಾರ್ನ್ ಅದೂ ಇದೂ ಅಂತಾ ನಾವೂ ನೀವು ನೀವು ತಿನ್ನುವ ಹಾಗೆ ಸ್ಪರ್ಧಿಗಳು ಏನನ್ನೂ ತಿನ್ನುವ ಹಾಗಿಲ್ಲ, ಕುಡಿಯುವ ಹಾಗಿಲ್ಲ.. ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ದೃಢೀಕರಣದ ನಂತರ, ಗಿನ್ನಿಸ್ ಸಂಸ್ಥೆಯವರು ದಾಖಲೆಗಳಲ್ಲಿ ಜ್ಯಾಕ್ ಹೆಸರನ್ನು ನೋಂದಾಯಿಸಿದ್ದಾರೆ.
ಅಷ್ಟಕ್ಕೂ ಜಾಕ್ ಈ ಹುಚ್ಚು ಸಾಹಸ ಮಾಡಿದ್ದೇಕೆ? ಎಲ್ಲಕ್ಕಿಂತ ಮುಖ್ಯವಾಗಿ, ಆಟಿಸಂ Autism ಬಗ್ಗೆ (ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗುತ್ತದೆ) ಜಾಗೃತಿ ಮೂಡಿಸಲು ಜ್ಯಾಕ್ ಈ ಸಾಹಸವನ್ನು ಮಾಡಿದರು. ಸ್ವತಃ ಆಟಿಸಂ ಕಾಯಿಲೆ ಪೀಡಿತರಾಗಿರುವ ಜ್ಯಾಕ್ ಈ ಹಿಂದೆ ಅದೇ ಬೇಸರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಆದರೆ ಅದು ಸರಿಯಲ್ಲ ಎಂದು ಅರಿತ ನಂತರ, ಜಾಕ್ ಆ ಭಾವನೆಯಿಂದ ಹೊರಬರಲು ಚಲನಚಿತ್ರಗಳನ್ನು ವೀಕ್ಷಿಸಲು ಪ್ರಾರಂಭಿಸಿದರು. ಆದ್ದರಿಂದ ಜಾಕ್ ಇಂದು ಮಹತ್ತರವಾದ ದಾಖಲೆ ಮಾಡಿದರು.
ಇಷ್ಟಕ್ಕೇ ಸುಮ್ಮನಾಗದ ಜಾಕ್, ಭವಿಷ್ಯದಲ್ಲಿ ಒಂದು ವರ್ಷದಲ್ಲಿ 800 ಚಲನಚಿತ್ರಗಳನ್ನು ನೋಡುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿಯು ಆಸೆ ಹೊಂದಿದ್ದಾರೆ. ಈ ದಾಖಲೆಯನ್ನು ಸಾಧಿಸಿದ್ದಕ್ಕಾಗಿ ಅಮೆರಿಕದ ಆತ್ಮಹತ್ಯೆ ತಡೆ ಸಂಸ್ಥೆ ಅವರಿಗೆ 7,77,777 ಡಾಲರ್ ಅಂದರೆ 7 ಲಕ್ಷ ರೂಪಾಯಿ ಬಹುಮಾನ ನೀಡಿದೆ. ಅಂದಹಾಗೆ ಈ ಹಿಂದೆ, ಇದೇ ದಾಖಲೆ ಫ್ರಾನ್ಸ್ ನ ವಿನ್ಸೆಂಟ್ ಕ್ರಾನ್ ಹೆಸರಿನಲ್ಲಿತ್ತು. 715 ಸಿನಿಮಾಗಳನ್ನು ನೋಡಿ ಈ ದಾಖಲೆ ಸೃಷ್ಟಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
Published On - 5:55 pm, Wed, 8 November 23