‘ಫಿಲಂ ಬಜಾರ್’ 17ನೇ ಆವೃತ್ತಿ ಉದ್ಘಾಟಿಸಿದ ಅನುರಾಗ್ ಠಾಕೂರ್

Anurag Thakur: ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಗೋವಾದಲ್ಲಿ 17ನೇ ಫಿಲಂ ಬಜಾರ್ ಉದ್ಘಾಟನೆ ಮಾಡಿದರು.

‘ಫಿಲಂ ಬಜಾರ್’ 17ನೇ ಆವೃತ್ತಿ ಉದ್ಘಾಟಿಸಿದ ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
Follow us
|

Updated on:Nov 20, 2023 | 9:46 PM

ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ 17ನೇ ಆವೃತ್ತಿಯ ಫಿಲಂ ಬಜಾರ್ ಅನ್ನು ಉದ್ಘಾಟನೆ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ‘ಫಿಲ್ಮ್ ಬಜಾರ್ ಎಂಬುದು ಹೊಸ ಹೊಸ ಯೋಚನೆಗಳ ಮಾರುಕಟ್ಟೆ. ಪ್ರಪಂಚದ ಮೂಲೆ ಮೂಲೆಗಳಿಂದ ಚಲನಚಿತ್ರ ನಿರ್ಮಾಪಕರು, ನಿರ್ಮಾಪಕರು ಮತ್ತು ಕಥೆಗಾರರು ತಮ್ಮ ಐಡಿಯಾಗಳನ್ನು ವಿನಿಮಯ ಮಾಡಿಕೊಳ್ಳುವ ಮಾರುಕಟ್ಟೆ. ಇದು ಸೃಜನಶೀಲತೆ ಮತ್ತು ವಾಣಿಜ್ಯ, ಕಲ್ಪನೆಗಳು ಮತ್ತು ಸ್ಫೂರ್ತಿಗಳ ಸಂಗಮವಾಗಿದೆ, ಇದು ಈ ಪ್ರವರ್ಧಮಾನಕ್ಕೆ ಬರುತ್ತಿರುವ ಸಿನಿಮಾ ಕರ್ಮಿಗಳಿಗೆ ಸ್ವರ್ಗ ಎಂದು ಹೇಳಿದರು.

‘ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮ, ವಾರ್ಷಿಕ ಬೆಳವಣಿಗೆ ದರ 20%, ವಿಶ್ವದ ಐದನೇ-ಅತಿದೊಡ್ಡ ಮತ್ತು ಹೆಚ್ಚು ಜಾಗತೀಕರಣಗೊಂಡ ಉದ್ಯಮ ಎಂದು ಖ್ಯಾತಿ ಪಡೆದುಕೊಂಡಿದೆ. ಅದರ 17 ನೇ ವಾರ್ಷಿಕೋತ್ಸವದಲ್ಲಿ, ಫಿಲ್ಮ್ ಬಜಾರ್, ಅಂತರಾಷ್ಟ್ರೀಯ ಸಿನಿಮೋತ್ಸವದ ಮೂಲ ಆಧಾರವಾಗಿದೆ, ಎಲ್ಲ ಗಡಿಗಳನ್ನು ಮೀರಿ ಏಷ್ಯಾದ ಅತಿದೊಡ್ಡ ಚಲನಚಿತ್ರ ಮಾರುಕಟ್ಟೆಗಳಲ್ಲಿ ಒಂದಾಗಿ ಬೆಳೆದು ನಿಂತಿದೆ’ ಎಂದು ಹೇಳಿದರು ಅನುರಾಗ್ ಠಾಕೂರ್.

ಈ ವರ್ಷ ಫಿಲ್ಮ್ ಬಜಾರ್‌ಗೆ ಚಲನಚಿತ್ರಗಳ ಆಯ್ಕೆಯು ಚೆನ್ನಾಗಿ ನಡೆದಿದೆ. ಫೀಚರ್ ಫಿಲಂ, ಡಾಕ್ಯುಮೆಂಟರಿಗಳು, ಶಾರ್ಟ್‌ ಡಾಕ್ಯುಮೆಂಟರಿಗಳು, ಸಾಕ್ಷ್ಯಚಿತ್ರಗಳು, ಹಾರರ್ ಚಲನಚಿತ್ರಗಳು ಮತ್ತು ಡಯಾಸ್ಪೊರಾ, ರಾಷ್ಟ್ರೀಯವಾದ, ನಗರ ತಲ್ಲಣ, ಬಡತನ, ಹವಾಮಾನ ಬಿಕ್ಕಟ್ಟು, ರಾಷ್ಟ್ರೀಯತೆ, ಕ್ರೀಡೆ ಮತ್ತು ಫಿಟ್‌ನೆಸ್ ಇನ್ನಿತರೆ ಸಾರ್ವತ್ರಿಕ ವಿಷಯಗಳನ್ನು ಒಳಗೊಂಡ ಅನಿಮೇಟೆಡ್ ಚಲನಚಿತ್ರಗಳು ಹೀಗೆ ಹಲವು ವೈವಿಧ್ಯಮಯ ಸಿನಿಮಾಗಳು ಈ ಬಾರಿ ಸ್ಪರ್ಧೆಯಲ್ಲಿವೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.

ಸಹಕಾರ ಮಾರುಕಟ್ಟೆ ಕುರಿತಾಗಿ ಮಾತನಾಡಿದ ಸಚಿವರು, “ನಾವು 7 ದೇಶಗಳ ಹನ್ನೆರಡು ಸಾಕ್ಷ್ಯಚಿತ್ರಗಳನ್ನು ಸಹಾಕರ ವಿಧಾನದಲ್ಲಿ ನಿರ್ಮಿಸಿ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತೇವೆ, 17 ವಿವಿಧ ಭಾಷೆಗಳಲ್ಲಿ ಜೀವನವನ್ನು ಅನ್ವೇಷಿಸುತ್ತವೆ ಈ ಡಾಕ್ಯುಮೆಂಟರಿಗಳು. ಈ ಡಾಕ್ಯುಮೆಂಟರಿಗಳು ನಿರ್ದೇಶಕನ ಕಣ್ಣಿನ ಮೂಲಕ ವಾಸ್ತವದ ಹೃದಯಕ್ಕೆ ಒಂದು ಪ್ರಯಾಣವಾಗಿರಲಿದೆ’’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Mon, 20 November 23

ತಾಜಾ ಸುದ್ದಿ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ