‘ಜವಾನ್’ ಸಿನಿಮಾದಲ್ಲಿ ಶಾರುಖ್ ಇಲ್ಲದೇ ಇದ್ದಿದ್ದರೆ ಸಿಗುತ್ತಿರಲಿಲ್ಲ ಯಶಸ್ಸು?
ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇತ್ತೀಚೆಗೆ ಹೆಚ್ಚಿದೆ. ಒಂದು ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ, ಸಿನಿಮಾನೇ ನಿರ್ಧರಿಸಬೇಕು ಎಂಬುದು ಗೌತಮ್ ಅವರ ಅಭಿಪ್ರಾಯ.
‘ಜವಾನ್’ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರ ಚಿತ್ರಮಂದಿರದಲ್ಲಿ ರಿಲೀಸ್ ಆಗಿ, ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಆದಾಗ್ಯೂ ಚಿತ್ರದ ಬಗೆಗಿನ ಟಾಕ್ ನಿಂತಿಲ್ಲ. ಅನೇಕರು ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ (Shah Rukh Khan) ನಟಿಸದೇ ಇದ್ದಿದ್ದರೆ ಸಿನಿಮಾ ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಾಣುತ್ತಿರಲಿಲ್ಲ ಎಂಬುದು ಅನೇಕರ ಅಭಿಪ್ರಾಯ. ನಟ, ನಿರ್ದೇಶಕ ಗೌತಮ್ ಮೆನನ್ ಕೂಡ ಇದೇ ಅಭಿಪ್ರಾಯ ಹೊರಹಾಕಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರೋ ಅವರು ‘ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ ನಟನೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ವೃತ್ತಿ ಜೀವನವನ್ನೇ ಬದಲಾಯಿಸಿದ ‘ಯೇ ಮಾಯ ಚೇಸಾವೆ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಗೌತಮ್ ಮೆನನ್ಗೆ ಇದೆ. ಅವರು ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ ಕೂಡ. ಈಗ ಅವರು ತಮ್ಮ ನಿರ್ದೇಶನದ ‘ಧ್ರುವ ನಕ್ಷತ್ರಮ್’ ಸಿನಿಮಾ ರಿಲೀಸ್ಗಾಗಿ ಕಾದಿದ್ದಾರೆ. ಈ ಸಿನಿಮಾ ಹಲವು ಕಾರಣದಿಂದ ವಿಳಂಬ ಆಗಿದೆ. ಈ ಚಿತ್ರದ ಪ್ರಚಾರದಲ್ಲಿ ಅವರು ಬ್ಯುಸಿ ಆಗಿದ್ದಾರೆ.
ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇತ್ತೀಚೆಗೆ ಹೆಚ್ಚಿದೆ. ಒಂದು ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡಬೇಕೋ ಅಥವಾ ಬೇಡವೋ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ, ಸಿನಿಮಾನೇ ನಿರ್ಧರಿಸಬೇಕು ಎಂಬುದು ಗೌತಮ್ ಅವರ ಅಭಿಪ್ರಾಯ. ‘ಜೈಲರ್ ಹಾಗೂ ಜವಾನ್ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ಅರ್ಹವಾಗಿತ್ತೇ’ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ.
ಇದನ್ನೂ ಓದಿ: SSE Side B Review: ‘ಸೈಡ್ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್ ಬಿ’ ಲಯ ಬದಲಾಗಿಲ್ಲ
‘ದೇಶದ ಬೇರೆ ಬೇರೆ ಭಾಷೆಗಳಿಂದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ ಎಂದರೆ ಸಿನಿಮಾ ಪ್ಯಾನ್ ಇಂಡಿಯಾ ಆಗಲು ಅರ್ಹ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಇರಲಿಲ್ಲ ಎಂದಿದ್ದರೆ ಅದು ಪ್ಯಾನ್ ಇಂಡಿಯಾ ಆಗುತ್ತಿತ್ತೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ’ ಎಂದಿದ್ದಾರೆ ಗೌತಮ್. ಈ ಮೂಲಕ ಶಾರುಖ್ ಖಾನ್ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ