‘ಡಂಕಿ’ ಶೀರ್ಷಿಕೆಯ ಅರ್ಥ ಏನು? ಬಿಡುಗಡೆಗೂ ಮುನ್ನವೇ ರಿವೀಲ್​ ಮಾಡಿದ ಶಾರುಖ್​

ಶಾರುಖ್​ ಖಾನ್​ ನಟನೆಯ ‘ಡಂಕಿ’ ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರು ಪ್ರತಿ ಸಿನಿಮಾಗೂ ಡಿಫರೆಂಟ್​ ಆಗಿ ಶೀರ್ಷಿಕೆ ಇಡುತ್ತಾರೆ. ಅದು ಈ ಬಾರಿಯೂ ಮುಂದುವರಿದಿದೆ. ಹಾಗಾದರೆ ‘ಡಂಕಿ’ ಎಂದರೇನು ಎಂಬ ಕುತೂಹಲದ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ.

‘ಡಂಕಿ’ ಶೀರ್ಷಿಕೆಯ ಅರ್ಥ ಏನು? ಬಿಡುಗಡೆಗೂ ಮುನ್ನವೇ ರಿವೀಲ್​ ಮಾಡಿದ ಶಾರುಖ್​
‘ಡಂಕಿ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Dec 07, 2023 | 3:14 PM

ನಿರ್ದೇಶಕ ರಾಜ್​ಕುಮಾರ್ ಹಿರಾನಿ (Rajkumar Hirani) ಮತ್ತು ನಟ ಶಾರುಖ್​ ಖಾನ್​ ಅವರ ಕಾಂಬಿನೇಷನ್​ನಿಂದಾಗಿ ‘ಡಂಕಿ’ ಸಿನಿಮಾದ ಮೇಲೆ ನಿರೀಕ್ಷೆ ಮೂಡುವಂತಾಗಿದೆ. ಈ ಸಿನಿಮಾದ ಶೀರ್ಷಿಕೆಯೇ ಕ್ಯಾಚಿ ಆಗಿದೆ. ಈ ಟೈಟಲ್​ನ ಅರ್ಥ ಏನು ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಸಿನಿಮಾ ನೋಡಿದಾಗ ಅದಕ್ಕೆ ಉತ್ತರ ಸಿಗುತ್ತದೆ. ಆದರೆ ಅದನ್ನೂ ಮುನ್ನವೇ ಶಾರುಖ್​ ಖಾನ್​ ಅವರು ಡಂಕಿ’ (Dunki) ಎಂದರೆ ಏನು ಎಂಬುದನ್ನು ತಿಳಿಸಿದ್ದಾರೆ. ಟ್ವಿಟರ್​ನಲ್ಲಿ ಪ್ರಶ್ನೋತ್ತರ ನಡೆಸಿದ ಶಾರುಖ್​ ಖಾನ್ (Shah Rukh Khan) ಅವರು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಈ ವಿಚಾರ ಬಹಿರಂಗಪಡಿಸಿದ್ದಾರೆ.

‘ಅನುಮತಿ ಇಲ್ಲದೇ ದೇಶದ ಗಡಿ ದಾಟುವುದಕ್ಕೆ ಡಾಂಕಿ ಜರ್ನಿ ಎನ್ನುತ್ತಾರೆ. ಪಂಬಾಬಿ ಉಚ್ಛಾರದಲ್ಲಿ ಇದನ್ನು ಡಂಕಿ ಎನ್ನುತ್ತಾರೆ’ ಎಂದು ಶಾರುಖ್​ ಖಾನ್​ ಅವರು ತಿಳಿಸಿದ್ದಾರೆ. ಪಂಜಾಬಿನ ಕೆಲವು ಯುವಕರು ಇಂಗ್ಲೆಂಡ್​ಗೆ ಹೋಗಬೇಕು ಎಂದು ಕನಸು ಕಾಣುವ ಮತ್ತು ಭಾರತದ ಗಡಿ ದಾಟಲು ಪ್ರಯತ್ನಿಸುವ ಕಥೆ ‘ಡಂಕಿ’ ಸಿನಿಮಾದಲ್ಲಿ ಇದೆ. ಆ ಬಗ್ಗೆ ಟ್ರೇಲರ್​ನಲ್ಲೇ ಸುಳಿವು ಬಿಟ್ಟುಕೊಡಲಾಗಿದೆ. ಸದ್ಯ ಯೂಟ್ಯೂಬ್​ನಲ್ಲಿ ಈ ಟ್ರೇಲರ್​ ಧೂಳೆಬ್ಬಿಸಿದೆ.

ಇದನ್ನೂ ಓದಿ: ‘ಸಲಾರ್​’ ವರ್ಸಸ್​ ‘ಡಂಕಿ’ ಟ್ರೇಲರ್ ಪೈಪೋಟಿ; ಹಿಂದಿಯಲ್ಲಿ ಶಾರುಖ್​ ಖಾನ್​ ಮೇಲುಗೈ

ಡಿಸೆಂಬರ್​ 21ರಂದು ‘ಡಂಕಿ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರು ಎರಡು ಶೇಡ್​ನ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ತಾಪ್ಸಿ ಪನ್ನು ನಟಿಸಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್​ ಅಭಿನಯಿಸಿದ್ದಾರೆ. ಈ ಎಲ್ಲ ಕಲಾವಿದರ ಕಾರಣದಿಂದ ಸಿನಿಮಾದ ಚಾರ್ಮ್​ ಹೆಚ್ಚಾಗಿದೆ. ಟ್ರೇಲರ್​ ನೋಡಿದ ಅಭಿಮಾನಿಗಳು ಪಾಸಿಟಿವ್​ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ತುಂಬ ಕ್ಲಾಸ್​ ಆಗಿ ಈ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

ರಾಜ್​ಕುಮಾರ್​ ಹಿರಾನಿ ಅವರ ಕೆಲಸದ ಮೇಲೆ ಅಭಿಮಾನಿಗಳಿಗೆ ಭರವಸೆ ಇದೆ. ಈಗಾಗಲೇ ಅವರು ‘ಪಿಕೆ’, ‘ಸಂಜು’, ‘3 ಈಡಿಯಟ್ಸ್​’, ‘ಮುನ್ನಾಭಾಯ್​ ಎಂಬಿಬಿಎಸ್​’ ಸಿನಿಮಾಗಳ ಮೂಲಕ ತಮ್ಮ ಪ್ರತಿಭೆ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಈಗ ಅವರು ‘ಡಂಕಿ’ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಹೊಸ ಕಹಾನಿ ತೋರಿಸಲು ಸಜ್ಜಾಗಿದ್ದಾರೆ. ‘ಡಂಕಿ’ ತೆರೆಕಂಡ ಮರುದಿನವೇ, ಅಂದರೆ ಡಿ.22ರಂದು ‘ಸಲಾರ್​’ ಬಿಡುಗಡೆ ಆಗಲಿದೆ. ಹಾಗಾಗಿ ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ ಏರ್ಪಡಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?