Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಂಕಿ’ ಎದುರು ‘ಸಲಾರ್’ ಬಿಡುಗಡೆ ಏಕೆ, ಶಾರುಖ್ ಮೇಲೆ ಹೊಂಬಾಳೆಗೆ ಏಕೀ ಸಿಟ್ಟು? ವಿಜಯ್ ಕಿರಗಂದೂರು ಹೇಳಿದ್ದು ಹೀಗೆ

Salaar vs Dunki: ಪ್ರಭಾಸ್ ನಟನೆಯ ‘ಸಲಾರ್’ ಮತ್ತು ಶಾರುಖ್ ಖಾನ್ ನಟನೆಯ ‘ಡಂಕಿ’ ಜೊತೆಗೆ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿದ್ದಾರೆ.

‘ಡಂಕಿ’ ಎದುರು ‘ಸಲಾರ್’ ಬಿಡುಗಡೆ ಏಕೆ, ಶಾರುಖ್ ಮೇಲೆ ಹೊಂಬಾಳೆಗೆ ಏಕೀ ಸಿಟ್ಟು? ವಿಜಯ್ ಕಿರಗಂದೂರು ಹೇಳಿದ್ದು ಹೀಗೆ
ವಿಜಯ್ ಕಿರಗಂದೂರು
Follow us
ಮಂಜುನಾಥ ಸಿ.
|

Updated on:Dec 12, 2023 | 2:42 PM

ಹೊಂಬಾಳೆ ಫಿಲ್ಮ್ಸ್ (Hombale fims) ನಿರ್ಮಾಣದ ಬಹು ನಿರೀಕ್ಷಿತ ಸಿನಿಮಾ ‘ಸಲಾರ್’ (Salaar) ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ವಿಶೇಷವೆಂದರೆ ‘ಸಲಾರ್’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಎರಡೂ ಸಹ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಾಗಿದ್ದು ಎರಡರ ನಡುವೆ ದೊಡ್ಡ ಬಾಕ್ಸ್ ಆಫೀಸ್ ಫೈಟ್ ನಿರೀಕ್ಷಿಸಲಾಗಿದೆ. ಈ ನಡುವೆ ಹೊಂಬಾಳೆ ಏಕೆ ಶಾರುಖ್ ಖಾನ್ ಹಿಂದೆ ಬಿದ್ದಿದೆ ಎಂಬ ಅನುಮಾನವೂ ಎದ್ದಿದೆ. ‘ಕೆಜಿಎಫ್’ ಸಿನಿಮಾ ಸಹ ಶಾರುಖ್ ಖಾನ್​ರ ‘ಝೀರೋ’ ಸಿನಿಮಾ ಬಿಡುಗಡೆ ಆದಾಗಲೇ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು, ‘ಝೀರೋ’ ಸಿನಿಮಾ ಮಖಾಡೆ ಮಲಗಿತ್ತು.

‘ಕೆಜಿಎಫ್’ ಸಿನಿಮಾ 2018ರ ಡಿಸೆಂಬರ್ 21 ಕ್ಕೆ ಬಿಡುಗಡೆ ಆಗಿತ್ತು. ಶಾರುಖ್ ಖಾನ್ ನಟನೆಯ ‘ಝೀರೋ’ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಿ ಸೋತಿತ್ತು. ಈಗ ‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ಬಿಡುಗಡೆ ಆಗುತ್ತಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಡಿಸೆಂಬರ್ 21ಕ್ಕೆ ತೆರೆಗೆ ಬರುತ್ತಿದೆ. ಈ ಬಾರಿ ಯಾರು ಗೆಲ್ಲಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿದೆ. ಆದರೆ ಹೊಂಬಾಳೆ ಏಕೆ ಶಾರುಖ್ ಖಾನ್ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿಯೇ ತಮ್ಮ ಬಹು ನಿರೀಕ್ಷಿತ ಸಿನಿಮಾವನ್ನು ಶಾರುಖ್​ಗೆ ಎದುರಾಗಿ ಬಿಡುಗಡೆ ಮಾಡುತ್ತದೆ? ಈ ಬಗ್ಗೆ ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿದ್ದಾರೆ.

ಬಾಲಿವುಡ್​ನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ವಿಜಯ್ ಕಿರಗಂದೂರು, ‘‘ಶಾರುಖ್ ಖಾನ್ ಎದುರು ಸಿನಿಮಾ ಬಿಡುಗಡೆ ಮಾಡಬೇಕು ಎಂಬ ಯಾವ ಉದ್ದೇಶವೂ ನಮಗೆ ಇಲ್ಲ. ಅಸಲಿಗೆ ‘ಸಲಾರ್’ ಸಿನಿಮಾ ಇನ್ನೂ ಬೇಗ ಬಿಡುಗಡೆ ಆಗಬೇಕಿತ್ತು. ವಿಎಫ್​ಎಕ್ಸ್ ಹಾಗೂ ಇನ್ನೂ ಕೆಲವು ಕೆಲಸಗಳು ತಡವಾದ್ದರಿಂದ ಡಿಸೆಂಬರ್ 22ಕ್ಕೆ ಬಿಡುಗಡೆ ಆಗುತ್ತಿವೆ. ನಾವು ಕಳೆದ ಹಲವು ವರ್ಷಗಳಿಂದಲೂ ನಮ್ಮ ನಂಬಿಕೆಗಳಿಗೆ ತಕ್ಕಂತೆ ಸಿನಿಮಾ ಬಿಡುಗಡೆ ಮಾಡಿಕೊಂಡು ಬಂದಿದ್ದೇವೆ. ಈ ಬಾರಿಯೂ ಸಹ ಅದೇ ನಂಬಿಕೆ ಆಧಾರದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ:‘ಸಲಾರ್​’ ವರ್ಸಸ್​ ‘ಡಂಕಿ’ ಟ್ರೇಲರ್ ಪೈಪೋಟಿ; ಹಿಂದಿಯಲ್ಲಿ ಶಾರುಖ್​ ಖಾನ್​ ಮೇಲುಗೈ

ಹೊಂಬಾಳೆಯ ವಿಜಯ್ ಕಿರಗಂದೂರು, ಜ್ಯೋತಿಷ್ಯವನ್ನು ಬಹುವಾಗಿ ನಂಬುತ್ತಾರೆ. ಸಿನಿಮಾದ ಬಿಡುಗಡೆ, ಟ್ರೈಲರ್ ಬಿಡುಗಡೆ ಇತ್ಯಾದಿಗಳನ್ನು ಜ್ಯೋತಿಷಿಗಳನ್ನು ಕೇಳಿ ಅವರು ನೀಡಿದ ದಿನಾಂಕ ಸಮಯಕ್ಕೆ ಬಿಡುಗಡೆ ಮಾಡುತ್ತಾರೆ. ಹಾಗಾಗಿ ಈಗಲೂ ಸಹ ಡಿಸೆಂಬರ್ 22ಕ್ಕೆ ಜ್ಯೋತಿಷಿಗಳು ನೀಡಿದ ದಿನಾಂಕದ ಆಧಾರದಲ್ಲಿಯೇ ಬಿಡುಗಡೆ ಮಾಡುತ್ತಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ವಿಜಯ್, ‘‘ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಲೋಚನೆಯೂ ಇತ್ತು. ಆದರೆ ಆ ಸಮಯದಲ್ಲಿ ತೆಲುಗು ಹಾಗೂ ತಮಿಳಿನ ಹಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಲಿವೆ. ಹಾಗಾಗಿ ನಮ್ಮ ಸಿನಿಮಾವನ್ನು ಸ್ವಲ್ಪ ಮುಂದಕ್ಕೆ ಹಾಕಿಕೊಂಡೆವು. ಅಲ್ಲದೆ ಕ್ರಿಸ್​ಮಸ್ ಸಮಯದಲ್ಲಿ ಹತ್ತು ದಿನ ರಜೆ ಇರುತ್ತದೆ ಈ ವೇಳೆ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ ಎಂಬ ನಂಬಿಕೆಯಿಂದ ನಾವು ಈ ಸಮಯದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’’ ಎಂದಿದ್ದಾರೆ.

‘ಸಲಾರ್’ ಮತ್ತು ‘ಡಂಕಿ’ಯ ಬಾಕ್ಸ್ ಆಫೀಸ್ ಲೆಕ್ಕಾಚಾರದ ಬಗ್ಗೆ ಮಾತನಾಡಿರುವ ವಿಜಯ್ ಕಿರಗಂದೂರು, ‘‘ಸಲಾರ್ ಮತ್ತು ಡಂಕಿಗೆ ಸಮಾನ ಪ್ರಮಾಣದ ಸ್ಕ್ರೀನ್​ಗಳು ಸಿಗುವ ಸಾಧ್ಯತೆ ಇದೆ. ಇಷ್ಟು ಸ್ಕ್ರೀನ್​ಗಳು ಸಿಕ್ಕರೂ ಸಹ ದೊಡ್ಡ ಮಟ್ಟದ ಸಾಧನೆ ಮಾಡಬಹುದು. ಎರಡೂ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣುವ ವಿಶ್ವಾಸವಿದೆ’’ ಎಂದಿದ್ದಾರೆ ವಿಜಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Tue, 12 December 23

ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ