ನಾಯಿ ಕಚ್ಚಿದ ಪ್ರಕರಣದಲ್ಲಿ ದರ್ಶನ್ಗೆ ರಿಲೀಫ್; ಚಾರ್ಜ್ಶೀಟ್ನಲ್ಲಿ ಇರಲ್ಲ ನಟನ ಹೆಸರು
ದರ್ಶನ್ ಅವರು ಸಾಕಿದ್ದ ಶ್ವಾನಗಳು ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿತ್ತು. ಆದರೆ, ಈ ವೇಳೆ ದರ್ಶನ್ ಮನೆಯಲ್ಲಿ ಇರಲಿಲ್ಲ. ಈ ಸಂಬಂಧ ಅಮಿತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದರು.
ಅಮಿತಾ ಜಿಂದಾಲ್ ಎಂಬ ಮಹಿಳೆಗೆ ನಟ ದರ್ಶನ್ (Darshan) ಮನೆಯ ನಾಯಿ ಕಚ್ಚಿದ ಪ್ರಕರಣ ಸಾಕಷ್ಟು ಚರ್ಚೆ ಆಗಿತ್ತು. ಉದ್ದೇಶ ಪೂರ್ವಕವಾಗಿ ನಾಯಿಯನ್ನು ಛೂ ಬಿಡಲಾಗಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಪಾತ್ರ ಇಲ್ಲದೇ ಇರುವುದು ತನಿಖೆಯಲ್ಲಿ ಸಾಬೀತಾಗಿದೆ. ಹೀಗಾಗಿ, ದೋಷಾರೋಪ ಪಟ್ಟಿಯಲ್ಲಿ ನಟನ ಹೆಸರು ಸೇರಿಸದೇ ಇರಲು ಪೊಲೀಸರು ನಿರ್ಧರಿಸಿದ್ದಾರೆ.
ಏನಿದು ಪ್ರಕರಣ?
ದರ್ಶನ್ ಅವರು ಸಾಕಿದ್ದ ಶ್ವಾನಗಳು ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿತ್ತು. ಆದರೆ, ಈ ವೇಳೆ ದರ್ಶನ್ ಮನೆಯಲ್ಲಿ ಇರಲಿಲ್ಲ. ಈ ಸಂಬಂಧ ಅಮಿತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ‘ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಲಾಗಿದೆ’ ಎಂದು ಮಹಿಳೆ ದೂರಿದ್ದರು. ದರ್ಶನ್ ಕೂಡ ವಿಚಾರಣೆಗೆ ಹಾಜರಿ ಹಾಕಿದ್ದರು. ‘ಪ್ರಕರಣ ನಡೆಯೋ ಸಂದರ್ಭದಲ್ಲಿ ನಾನು ಇರಲಿಲ್ಲ. ಇನ್ನು ಹೀಗೆ ಆಗದಂತೆ ನೋಡಿಕೊಳ್ಳುವೆ’ ಎಂದು ಅವರು ಹೇಳಿದ್ದರು.
ದರ್ಶನ್ ಪಾತ್ರ ಇಲ್ಲ..
ಪೊಲೀಸರು ಕೂಲಂಕುಷವಾಗಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಈಗ ದೋಷಾರೋಪ ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ನಟನ ಪಾತ್ರದ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಹೀಗಾಗಿ ನಟ ದರ್ಶನ್ ಹೆಸರು ಕೈ ಬಿಟ್ಟು ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ನಾಯಿ ದಾಳಿ ಪ್ರಕರಣ: ‘ಮತ್ತೆ ಹೀಗೆ ಆಗದಂತೆ ಎಚ್ಚರ ವಹಿಸುತ್ತೇನೆ’; ಪೊಲೀಸ್ ಠಾಣೆಗೆ ಬಂದು ದರ್ಶನ್ ಹೇಳಿಕೆ
ದರ್ಶನ್ ಹಾಗು ಕೇರ್ ಟೇಕರ್ ವಿರುದ್ಧ ಅಮಿತಾ ದೂರು ನೀಡಿದ್ದರು. ನಾಯಿ ಛೂ ಬಿಟ್ಟು ಕಚ್ಚಿಸಿದ್ದಾರೆಂದು ದೂರಿನಲ್ಲಿ ಹೇಳಿದ್ದರು. A-2 ಆರೋಪಿಯಾಗಿ ದರ್ಶನ್ ಹೆಸರನ್ನು ವೈದ್ಯೆ ಉಲ್ಲೇಖಿಸಿದ್ದರು. ಆದರೆ, ಘಟನೆ ನಡೆದಾಗ ನಟ ದರ್ಶನ್ ಸ್ಥಳದಲ್ಲೇ ಇರಲಿಲ್ಲ. ನಟ ದರ್ಶನ್ಗೆ ಘಟನೆಯ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ದರ್ಶನ್ ಹೆಸರು ಕೈ ಬಿಟ್ಟು ಚಾರ್ಚ್ ಶೀಟ್ ಸಲ್ಲಿಸಲು ರಾಜರಾಜೇಶ್ವರಿ ನಗರ ಪೊಲೀಸರು ಮುಂದಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ