AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿ ದಾಳಿ ಪ್ರಕರಣ: ‘ಮತ್ತೆ ಹೀಗೆ ಆಗದಂತೆ ಎಚ್ಚರ ವಹಿಸುತ್ತೇನೆ’; ಪೊಲೀಸ್​ ಠಾಣೆಗೆ ಬಂದು ದರ್ಶನ್​ ಹೇಳಿಕೆ

ನಾಯಿ ದಾಳಿ ಪ್ರಕರಣ: ‘ಮತ್ತೆ ಹೀಗೆ ಆಗದಂತೆ ಎಚ್ಚರ ವಹಿಸುತ್ತೇನೆ’; ಪೊಲೀಸ್​ ಠಾಣೆಗೆ ಬಂದು ದರ್ಶನ್​ ಹೇಳಿಕೆ

ಮದನ್​ ಕುಮಾರ್​
|

Updated on: Nov 15, 2023 | 3:27 PM

Share

‘ಶೂಟಿಂಗ್​ ಇದ್ದ ಕಾರಣ ನಾನು ಗುಜರಾತ್​ಗೆ ಹೋಗಿದ್ದೆ. ನಾಯಿಯನ್ನು ನೋಡಿಕೊಳ್ಳುವಂತೆ ಕೆಲಸದ ಹುಡುಗರಿಗೆ ಹೇಳಿದ್ದೆ. ನಮ್ಮ ಹುಡುಗರಿಂದ ತಪ್ಪಾಗಿದೆ. ಮಹಿಳೆಗೆ ಚಿಕಿತ್ಸೆ ಕೊಡಿಸುವಂತೆಯೂ ನಮ್ಮ ಹುಡುಗರಿಗೆ ಹೇಳಿದ್ದೇನೆ. ಮತ್ತೆ ಹೀಗೆ ಆಗದಂತೆ ಎಚ್ಚರವಹಿಸುತ್ತೇನೆ’ ಎಂದು ಪೊಲೀಸರ ಎದುರು ದರ್ಶನ್​ ಹೇಳಿಕೆ ನೀಡಿದ್ದಾರೆ.

ಅಮಿತಾ ಜಿಂದಾಲ್​ ಎಂಬ ಮಹಿಳೆಗೆ ದರ್ಶನ್​ ಮನೆಯ ನಾಯಿ ಕಚ್ಚಿದ (Dog Attack) ಪ್ರಕರಣದಲ್ಲಿ ಆರ್​ಆರ್​ ನಗರ ಪೊಲೀಸರು (RR Nagar Police) ತನಿಖೆ ಚುರುಕುಗೊಳಿಸಿದ್ದಾರೆ. ಇಂದು (ನವೆಂಬರ್​ 15) ನಟ ದರ್ಶನ್​ ಅವರು ಪೊಲೀಸ್​ ಠಾಣೆಗೆ ಬಂದು ತಮ್ಮ ಹೇಳಿಕೆ ನೀಡಿದ್ದಾರೆ. ಕೇವಲ 15 ನಿಮಿಷ ಮಾತ್ರ ಅವರು ಠಾಣೆಯಲ್ಲಿ ಇದ್ದರು. ಈ ವೇಳೆ ಅವರು ನೀಡಿದ ಹೇಳಿಕೆ ಇಲ್ಲಿದೆ. ‘ಶೂಟಿಂಗ್​ ಇದ್ದ ಕಾರಣದಿಂದ ನಾನು ಗುಜರಾತ್​ಗೆ ಹೋಗಿದ್ದೆ. ನಾಯಿಯನ್ನು ನೋಡಿಕೊಳ್ಳುವಂತೆ ಕೆಲಸದ ಹುಡುಗರಿಗೆ ಹೇಳಿದ್ದೆ. ನಮ್ಮ ಹುಡುಗರಿಂದ ತಪ್ಪಾಗಿದೆ. ಮಹಿಳೆಗೆ ಚಿಕಿತ್ಸೆ ಕೊಡಿಸುವಂತೆಯೂ ನಮ್ಮ ಹುಡುಗರಿಗೆ ಹೇಳಿದ್ದೇನೆ. ಮತ್ತೆ ಹೀಗೆ ಆಗದಂತೆ ಎಚ್ಚರ ವಹಿಸುತ್ತೇನೆ. ನಾವು ಹೆಚ್ಚಾಗಿ ಈ ಮನೆಯಲ್ಲಿ ವಾಸ ಮಾಡುತ್ತಿಲ್ಲ. ಮನೆಯಲ್ಲಿನ ಸಿಸಿ ಕ್ಯಾಮೆರಾಗಳ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಈ ಘಟನೆ ಬಳಿಕ ಹೊಸ ಸಿಸಿಟಿವಿ ಹಾಕಿಸಿದ್ದೇನೆ’ ಎಂದು ದರ್ಶನ್​ (Darshan) ಹೇಳಿದ್ದಾರೆ. ಹಾಗಿದ್ದರೂ ಕೂಡ ಸಿಸಿಟಿವಿ ದೃಶ್ಯ ನೀಡುವಂತೆ ಪೊಲೀಸರು ದರ್ಶನ್​ಗೆ ಸೂಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More