Darshan: ಮಹಿಳೆ ಮೇಲೆ ನಾಯಿ ದಾಳಿ ಪ್ರಕರಣ​; ಪೊಲೀಸ್​ ಠಾಣೆಗೆ ಬಂದು ವಿಚಾರಣೆಗೆ ಹಾಜರಾದ ದರ್ಶನ್​

ಅಮಿತಾ ಜಿಂದಾಲ್​ ಎಂಬ ಮಹಿಳೆಗೆ ನಟ ದರ್ಶನ್​ ಮನೆಯ ನಾಯಿ ಕಚ್ಚಿದ ಬಳಿಕ ಐಪಿಸಿ ಸೆಕ್ಷನ್​ 289ರ ಅಡಿಯಲ್ಲಿ ಕೇಸ್​ ದಾಖಲಾಗಿತ್ತು. ಎ2 ಆಗಿರುವ ದರ್ಶನ್​ ಅವರು ಇಂದು (ನವೆಂಬರ್​ 15) ರಾಜರಾಜೇಶ್ವರಿ ನಗರದ ಪೊಲೀಸ್​ ಠಾಣೆಗೆ ಬಂದು ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ.

Darshan: ಮಹಿಳೆ ಮೇಲೆ ನಾಯಿ ದಾಳಿ ಪ್ರಕರಣ​; ಪೊಲೀಸ್​ ಠಾಣೆಗೆ ಬಂದು ವಿಚಾರಣೆಗೆ ಹಾಜರಾದ ದರ್ಶನ್​
ಪೊಲೀಸ್​ ಠಾಣೆಗೆ ಬಂದ ದರ್ಶನ್​
Follow us
Jagadisha B
| Updated By: ಮದನ್​ ಕುಮಾರ್​

Updated on:Nov 15, 2023 | 1:47 PM

ಖ್ಯಾತ ನಟ ದರ್ಶನ್​ ಅವರು ಆರ್​ಆರ್​ ನಗರ ಪೊಲೀಸ್ ಠಾಣೆಗೆ (RR Nagar Police Station) ಬಂದಿದ್ದಾರೆ. ಕೆಲವೇ ದಿನಗಳ ಹಿಂದೆ ಮಹಿಳೆ ಮೇಲೆ ನಾಯಿ ದಾಳಿ (Dog Attack Case) ಮಾಡಿದ ಪ್ರಕರಣದಲ್ಲಿ ದರ್ಶನ್​ ವಿರುದ್ಧವೂ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದರ್ಶನ್​ಗೆ ಪೊಲೀಸರು ನೋಟಿಸ್​ ನೀಡಿದ್ದರು. ಪ್ರಕರಣದಲ್ಲಿ ಎ2 ಆಗಿರುವ ಅವರು ಇಂದು (ನವೆಂಬರ್​ 15) ಪೊಲೀಸ್​ ಠಾಣೆಗೆ ಬಂದು ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ. ಅಮಿತಾ ಜಿಂದಾಲ್​ ಎಂಬುವವರಿಗೆ ದರ್ಶನ್​ (Darshan) ಮನೆಯ ನಾಯಿ ಕಚ್ಚಿದ ಬಳಿಕ ಐಪಿಸಿ ಸೆಕ್ಷನ್​ 289ರ ಅಡಿಯಲ್ಲಿ ಕೇಸ್​ ದಾಖಲಾಗಿತ್ತು. ಆ ಪ್ರಕರಣದ ವಿಚಾರಣೆ ಚುರುಕುಗೊಂಡಿದೆ.

ತನಿಖಾಧಿಕಾರಿ ಇನ್ಸ್​​ಪೆಕ್ಟರ್ ಶಿವಕುಮಾರ್ ಅವರ ಮುಂದೆ ದರ್ಶನ್​ ವಿಚಾರಣೆಗೆ ಹಾಜರಾಗಿದ್ದಾರೆ. ಕೇವಲ 15 ನಿಮಿಷ ಮಾತ್ರ ಅವರು ಪೊಲೀಸ್​ ಠಾಣೆಯಲ್ಲಿ ಇದ್ದರು. ಅಷ್ಟರಲ್ಲೇ ಹೇಳಿಕೆ ನೀಡಿ ಅವರು ವಾಪಸ್​ ತೆರಳಿದ್ದಾರೆ. ಮಹಿಳೆ ದೂರು ನೀಡಿದ ಬಳಿಕ ಪೊಲೀಸರು ಇತ್ತೀಚೆಗೆ ಸ್ಥಳಕ್ಕೆ ಬಂದು ಮಹಜರು ಮಾಡಿದ್ದರು. ಈ ಮೊದಲೇ ದರ್ಶನ್​ ಅವರಿಗೆ ನೋಟಿಸ್​ ನೀಡಲಾಗಿತ್ತು. ಕಡೆಗೂ ಅವರು ಇಂದು ವಿಚಾರಣೆಗೆ ಬಂದಿದ್ದಾರೆ.

ಇದನ್ನೂ ಓದಿ: ಮಹಿಳೆ ಮೇಲೆ ದರ್ಶನ್​ ಮನೆಯ ನಾಯಿ ದಾಳಿ ಮಾಡಿದ್ದು ಹೇಗೆ? ಸ್ಥಳ ಮಹಜರು ವಿಡಿಯೋ ಇಲ್ಲಿದೆ..

ಆರ್​ಆರ್​ ನಗರ ಪೊಲೀಸ್​ ಠಾಣೆಗೆ ಬಂದ ದರ್ಶನ್​ ಅವರನ್ನು ನೋಡಲು ಅಪಾರ ಸಂಖ್ಯೆ ಅಭಿಮಾನಿಗಳು ಜಮಾಯಿಸಿದ್ದರು. ಸ್ವತಃ ದರ್ಶನ್​ ಅವರೇ ಕಾರು ಚಲಾಯಿಸಿಕೊಂಡು ಬಂದಿದ್ದರು. ಅವರು ಕಾರು ಇಳಿಯುತ್ತಿದ್ದಂತಯೇ ಅಭಿಮಾನಿಗಳು ಜೈಕಾರ ಕೂಗಿದರು. ಪೊಲೀಸ್​ ಠಾಣೆಯಿಂದ ವಾಪಸ್​ ಹೊರಡುವಾಗ ದರ್ಶನ್​ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚೆಗೆ ಹುಲಿ ಉಗುರು ಹೊಂದಿದ ಆರೋಪದಲ್ಲೂ ದರ್ಶನ್​ ಅವರಿಗೆ ಸಂಕಷ್ಟ ಎದುರಾಗಿತ್ತು. ಹುಲಿ ಉಗುರಿನ ಲಾಕೆಟ್​ ಧರಿಸಿ ಕಾಣಿಸಿಕೊಂಡಿದ್ದ ಅವರ ಹಳೆಯ ಫೋಟೋ ವೈರಲ್​ ಆಗಿತ್ತು. ಆ ಬಳಿಕ ಅವರ ವಿರುದ್ಧ ಕೇಸ್​ ದಾಖಲಿಸಲಾಗಿತ್ತು. ಅರಣ್ಯಾಧಿಕಾರಿಗಳು ದರ್ಶನ್​ ನಿವಾಸಕ್ಕೆ ತೆರಳಿ ತಪಾಸಣೆ ನಡೆಸಿದ್ದರು. ಆ ಪ್ರಕರಣ ತಣ್ಣಗಾಯಿತು ಎನ್ನುವಾಗಲೇ ನಾಯಿ ದಾಳಿ ಘಟನೆ ನಡೆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:28 pm, Wed, 15 November 23