ಸಚಿವರ ಸಭೆಯಲ್ಲಿ ಕ್ರಿಕೆಟ್ ಕ್ರೇಜ್​​: ಕದ್ದು ಮುಚ್ಚಿ ಮೊಬೈಲ್​ನಲ್ಲಿ ಸ್ಕೋರ್ ವೀಕ್ಷಿಸಿದ ಅಧಿಕಾರಿ

ಸಚಿವರ ಸಭೆಯಲ್ಲಿ ಕ್ರಿಕೆಟ್ ಕ್ರೇಜ್​​: ಕದ್ದು ಮುಚ್ಚಿ ಮೊಬೈಲ್​ನಲ್ಲಿ ಸ್ಕೋರ್ ವೀಕ್ಷಿಸಿದ ಅಧಿಕಾರಿ

ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Nov 15, 2023 | 4:03 PM

Raichur: ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಬೋಸರಾಜ್​ ಬರ ಪರಿಶೀಲನಾ ಸಭೆ ಮಾಡಿದ್ದಾರೆ. ಈ ವೇಳೆ ಸಭೆಯಲ್ಲಿ ಇಂಜಿನಿಯರ್ ನವೀನ್​ ಎನ್ನುವವರಿಂದ ಪದೇ ಪದೇ ಕದ್ದು ಮುಚ್ಚಿ ಮೊಬೈಲ್ ಓಪನ್ ಮಾಡಿ ಸ್ಕೋರ್ ವೀಕ್ಷಣೆ ಮಾಡಿದ್ದಾರೆ. 

ರಾಯಚೂರು, ನವೆಂಬರ್​​​ 15: ಇಂದು ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ (India vs new zealand) ಸೆಮಿ ಫೈನಲ್ ಪಂದ್ಯ ನಡೆಯುತ್ತಿದೆ. ಈ ಸೆಮಿ ಫೈನಲ್​ನ ಪಂದ್ಯ ಎಷ್ಟರ ಮಟ್ಟಿಗೆ ಕುತೂಹಲ ಕೆರಳಿಸಿದೆ ಎಂದರೆ ಸಚಿವರ ಕೃಷಿ ಮೀಟಿಂಗ್​​ನಲ್ಲಿ ಅಧಿಕಾರಿಯೊಬ್ಬರು ಮೊಬೈಲ್​ನಲ್ಲಿ ಕ್ರಿಕೆಟ್ ಮ್ಯಾಚ್ ಸ್ಕೋರ್ ವೀಕ್ಷಣೆ ಮಾಡಿದ್ದಾರೆ.  ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಬೋಸರಾಜ್​ ಬರ ಪರಿಶೀಲನಾ ಸಭೆ ಮಾಡಿದ್ದಾರೆ. ಈ ವೇಳೆ ಸಭೆಯಲ್ಲಿ ಇಂಜಿನಿಯರ್ ನವೀನ್​ ಎನ್ನುವವರಿಂದ ಪದೇ ಪದೇ ಕದ್ದು ಮುಚ್ಚಿ ಮೊಬೈಲ್ ಓಪನ್ ಮಾಡಿ ಸ್ಕೋರ್ ವೀಕ್ಷಣೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.