ಅಧಿಕಾರಿಗಳ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಆಕ್ರೋಶ; ಇಲ್ಲಿದೆ ವಿಡಿಯೋ
ಕೊಪ್ಪಳ(Koppala) ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು(ನ.15) ಬರ ಪರಿಹಾರ ಸಭೆಯನ್ನು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಧಿಕಾರಿಗಳ ಗೈರು ಹಾಜರಿಯಿಂದ ರೊಚ್ಚಿಗೆದ್ದ ಸಚಿವರು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೊಪ್ಪಳ, ನ.15: ಕೊಪ್ಪಳ(Koppala) ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು(ನ.15) ಬರ ಪರಿಹಾರ ಸಭೆಯನ್ನು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಧಿಕಾರಿಗಳ ಗೈರು ಹಾಜರಿಯಿಂದ ರೊಚ್ಚಿಗೆದ್ದ ಸಚಿವರು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೌದು, ಮೀಟಿಂಗ್ ಕರೆದಾಗಲೇ ಬಿಪಿ, ಶುಗರ್ ಹೆಚ್ಚಾಗುತ್ತಾ? ನಿನಗೊಬ್ಬನಿಗೆ ಬಿಪಿ, ಶುಗರ್ ಇದೆಯಾ? ಬರಗಾಲ ಸಂದರ್ಭದಲ್ಲಿ ನೆಪಹೇಳಿ ರಜೆ ಹಾಕುತ್ತೀಯಾ ಎಂದು ಗದರಿದ ಸಚಿವರು, ‘ನಿನಗೆ ಸಸ್ಪೆಂಡ್ ಮಾಡಿ ಕಳುಹಿಸುತ್ತೇನೆ, ಆವಾಗ ಬುದ್ದಿ ಬರುತ್ತದೆ. ಸರ್ಕಾರಿ ಕೆಲಸ ಮಾಡಲು ಬಂದಿದ್ದೀರಾ, ಇಲ್ಲವಾ ಎಂದು ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕಚೇರಿ ಇಇ ತ್ಯಾಗರಾಜ್ಗೆ ಕರೆ ಮಾಡಿ ಚಳಿಬಿಡಿಸಿದ್ದಾರೆ. ಇನ್ನು ಇದೇ ವೇಳೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಕೂಡ ‘ಎರಡು ವರ್ಷದಿಂದ ಮೂರು ಟೆಂಡರ್ಗಳನ್ನು ಪೈನಲ್ ಮಾಡುತ್ತಿಲ್ಲ, ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕಠೀಣ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Wed, 15 November 23