ಕೇವಲ 250 ರೂ ಎಸ್​ಐಪಿ; ಮ್ಯುಚುವಲ್ ಫಂಡ್ ಹೂಡಿಕೆಯಲ್ಲಿ ಗೇಮ್ ಚೇಂಜರ್: ಸೆಬಿ ಅಧ್ಯಕ್ಷೆ ಆಲೋಚನೆ

Mutual Fund SIP: ಮ್ಯುಚುವಲ್ ಫಂಡ್​ನ ಎಸ್​ಐಪಿಯಲ್ಲಿ ಕನಿಷ್ಠ ಮಾಸಿಕ ಹೂಡಿಕೆಯನ್ನು 250 ರೂಗೆ ಇಳಿಸಲು ಯೋಜಿಸಲಾಗಿದೆ. ಸಾಕಷ್ಟು ಹೂಡಿಕೆಗಳು ಎಸ್​ಐಪಿಯತ್ತ ಬರುತ್ತಿದ್ದು, ಈಗ ಈ ಯೋಜನೆಯಿಂದ ಇನ್ನಷ್ಟು ಪುಷ್ಟಿ ಸಿಗುವ ಸಾಧ್ಯತೆ ಇದೆ. ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಶಾಂಪೂ ಶಾಚೆ ಬಿಡುಗಡೆ ಮಾಡಿದಂತೆ 250 ರೂ ಎಸ್​ಐಪಿ ಮ್ಯುಚುವಲ್ ಫಂಡ್ ಹೂಡಿಕೆಗೆ ಗೇಮ್ ಚೇಂಜರ್ ಆಗಬಹುದು.

ಕೇವಲ 250 ರೂ ಎಸ್​ಐಪಿ; ಮ್ಯುಚುವಲ್ ಫಂಡ್ ಹೂಡಿಕೆಯಲ್ಲಿ ಗೇಮ್ ಚೇಂಜರ್: ಸೆಬಿ ಅಧ್ಯಕ್ಷೆ ಆಲೋಚನೆ
ಮ್ಯುಚುವಲ್ ಫಂಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 10, 2023 | 5:47 PM

ಮುಂಬೈ, ಡಿಸೆಂಬರ್ 10: ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ (Mutual Fund SIP) ಆಗಿರುವ ಹೂಡಿಕೆ ನವೆಂಬರ್​ನಲ್ಲಿ ದಾಖಲೆ ಮಟ್ಟದಲ್ಲಿ ಇದ್ದ ಸುದ್ದಿ ಮೊನ್ನೆ ಬಂದಿತ್ತು. ಮ್ಯುಚುವಲ್ ಫಂಡ್​ನಲ್ಲಿ ಎಸ್​ಐಪಿ ಯೋಜನೆ ಪಡೆಯುವುದಾದರೆ ಕನಿಷ್ಠ ಹೂಡಿಕೆ ತಿಂಗಳಿಗೆ 500 ರೂ ಇದೆ. ಇದನ್ನು 250 ರೂಗೆ ಇಳಿಸಲು ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ (Madhabi puri Buch) ಯೋಜಿಸಿದ್ದಾರೆ. ಅವರ ಪ್ರಕಾರ ಮ್ಯೂಚುವಲ್ ಫಂಡ್ ಹೂಡಿಕೆಗೆ ಇದು ಗೇಮ್ ಚೇಂಜರ್ ಆಗಬಹುದು.

‘ಮ್ಯುಚುವಲ್ ಫಂಡ್ ಉದ್ಯಮದೊಂದಿಗೆ ನಾವು ಸಮಾಲೋಚಿಸುತ್ತಿದ್ದೇವೆ. ತಿಂಗಳಿಗೆ 250 ರೂ ಎಸ್​ಐಪಿ ಸಾಧ್ಯವಾಗಿಸಲು ಏನು ಮಾಡಬೇಕು ಎಂಬುದನ್ನು ಪರಾಮರ್ಶಿಸುತ್ತಿದ್ದೇವೆ,’ ಎಂದು ಹೇಳಿದ ಮಾಧಬಿ ಪುರಿ, ಹಿಂದೂಸ್ತಾನ್ ಲಿವರ್​ನ ಶಾಂಪೂ ಪ್ಯಾಕೆಟ್​ಗಳ ಉದಾಹರಣೆ ಕೊಟ್ಟಿದ್ದಾರೆ.

ಇದನ್ನೂ ಓದಿ: Hiring: ಅಕ್ಟೋಬರ್-ನವೆಂಬರ್ ತಿಂಗಳ ಜಾಬ್ ಡಾಟಾ; ಸಾಫ್ಟ್​ವೇರ್ ಅಲ್ಲದ ಕ್ಷೇತ್ರಗಳಲ್ಲಿ ಹೆಚ್ಚಿನ ನೇಮಕಾತಿ: ನೌಕ್ರಿ ಡಾಟ್ ಕಾಮ್ ವರದಿ

‘ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ಕನಿಷ್ಠ ಹೂಡಿಕೆಯನ್ನು 250 ರೂಗೆ ಇಳಿಸುವುದು ಎಂದರೆ ಹಿಂದೂಸ್ತಾನ್ ಲಿವರ್ ಸಂಸ್ಥೆ ಈ ಹಿಂದೆ ಶಾಂಪೂ ಸಾಚೆ ಬಿಡುಗಡೆ ಮಾಡಿದಂತೆ. ನೀವು ಮಾರುಕಟ್ಟೆಯಲ್ಲಿ ಸ್ಫೋಟ ನಡೆಸಿಬಿಡುತ್ತೀರಿ. ಈ ರೀತಿ ಮಾಡುವುದರಿಂದ ಹಣಕಾಸು ಒಳಗೊಳ್ಳುವಿಕೆಯ ಗುರಿ ತಲುಪಲು ಸಾಧ್ಯವಾಗುವುದಷ್ಟೇ ಅಲ್ಲದೇ ಭಾರತೀಯ ಬಂಡವಾಳ ಮಾರುಕಟ್ಟೆಗೂ ಸಹಾಯವಾಗುತ್ತದೆ’ ಎಂದು ಸೆಬಿ ಮುಖ್ಯಸ್ಥೆ ತಿಳಿಸಿದ್ದಾರೆ.

ಏನಿದು ಮ್ಯೂಚುವಲ್ ಫಂಡ್ ಎಸ್​ಐಪಿ?

ಎಸ್​ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್. ಮ್ಯುಚುವಲ್ ಫಂಡ್​ನಲ್ಲಿ ಲಂಪ್ಸಮ್ ಆಗಿ ಹಣ ಹಾಕಲು ಸಾಧ್ಯವಾಗದವರು ಎಸ್​ಐಪಿ ಮೂಲಕ ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು. ಬ್ಯಾಂಕ್​ನಲ್ಲಿ ಆರ್​ಡಿ ಯೋಜನೆ ಇದ್ದರೆ ಮ್ಯುಚುವಲ್ ಫಂಡ್​ನಲ್ಲಿಎಸ್​ಐಪಿ ಇದೆ.

ಇದನ್ನೂ ಓದಿ: Gold Income: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ಗೆ ನಿಮ್ಮ ಒಡವೆ ಬಳಸುವ ಮುನ್ನ ಈ ಸಂಗತಿಗಳನ್ನು ತಿಳಿದಿರಿ

ರೆಗ್ಯುಲರ್ ಮ್ಯುಚುವಲ್ ಫಂಡ್​ನ ಎಸ್​ಐಪಿಯಲ್ಲಿ ಕನಿಷ್ಠ ಹೂಡಿಕೆ ತಿಂಗಳಿಗೆ 500 ರೂ ಇದೆ. ಇದನ್ನು ಅರ್ಧದಷ್ಟು ಕಡಿಮೆ ಮಾಡಿದರೆ ಸಣ್ಣ ಆದಾಯದ ಜನರನ್ನೂ ಎಸ್​ಐಪಿಗೆ ಒಳಗೊಳ್ಳಬಹುದು ಎಂಬುದು ಸೆಬಿ ಮುಖ್ಯಸ್ಥೆ ಚಿಂತನೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ