Sign In

By signing in or creating an account, you agree with Associated Broadcasting Company's Terms & Conditions and Privacy Policy.

Hirings: ಅಕ್ಟೋಬರ್-ನವೆಂಬರ್ ತಿಂಗಳ ಜಾಬ್ ಡಾಟಾ; ಸಾಫ್ಟ್​ವೇರ್ ಅಲ್ಲದ ಕ್ಷೇತ್ರಗಳಲ್ಲಿ ಹೆಚ್ಚಿನ ನೇಮಕಾತಿ: ನೌಕ್ರಿ ಡಾಟ್ ಕಾಮ್ ವರದಿ

Naukri Jobspeak Index: ಅಕ್ಟೋಬರ್ ಮತ್ತು ನವೆಂಬರ್ ಈ ಎರಡು ತಿಂಗಳಲ್ಲಿ ಒಟ್ಟಾರೆ ನೇಮಕಾತಿ ಪ್ರಮಾಣ ಕಡಿಮೆ ಆಗಿದೆ. ಐಟಿ ವಲಯಕ್ಕೆ ಹೋಲಿಸಿದರೆ ಬೇರೆ ಉದ್ಯಮಗಳಲ್ಲಿ ನೇಮಕಾತಿ ಚೆನ್ನಾಗಿ ಆಗಿದೆ ಎಂದು ನೌಕ್ರಿ ಡಾಟ್ ಕಾಮ್​ನ ವರದಿಯೊಂದು ಹೇಳಿದೆ. ಆಯಿಲ್ ಅಂಡ್ ಗ್ಯಾಸ್, ಫಾರ್ಮಾ ಮತ್ತು ಇನ್ಷೂರೆನ್ಸ್ ಕ್ಷೇತ್ರಗಳಲ್ಲಿ ಶೇ. 9ರವರೆಗೂ ನೇಮಕಾಗಿ ಆಗಿದೆ.

Hirings: ಅಕ್ಟೋಬರ್-ನವೆಂಬರ್ ತಿಂಗಳ ಜಾಬ್ ಡಾಟಾ; ಸಾಫ್ಟ್​ವೇರ್ ಅಲ್ಲದ ಕ್ಷೇತ್ರಗಳಲ್ಲಿ ಹೆಚ್ಚಿನ ನೇಮಕಾತಿ: ನೌಕ್ರಿ ಡಾಟ್ ಕಾಮ್ ವರದಿ
ನೇಮಕಾತಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 10, 2023 | 4:18 PM

ಬೆಂಗಳೂರು, ಡಿಸೆಂಬರ್ 10: ಭಾರತದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಐಟಿ ಕ್ಷೇತ್ರದಲ್ಲಿ ಹೊಸ ನೇಮಕಾತಿಗಳಲ್ಲಿ ಗಣನೀಯ ಏರಿಕೆ ಆಗಿಲ್ಲ. ಆದರೆ, ಐಟಿ ಅಲ್ಲದ ಪ್ರಮುಖ ಕ್ಷೇತ್ರಗಳಲ್ಲಿ (non-IT sectors) ಸಾಕಷ್ಟು ನೇಮಕಾತಿ ಆಗಿರುವುದು ತಿಳಿದುಬಂದಿದೆ. ನೌಕ್ರಿ ಡಾಟ್ ಕಾಮ್​ನ ಜಾಬ್​ಸ್ಪೀಕ್ ಇಂಡೆಕ್ಸ್ (JobSpeak Index) ಪ್ರಕಾರ ಆಯಿಲ್ ಮತ್ತು ಗ್ಯಾಸ್, ಫಾರ್ಮಾ, ಇನ್ಷೂರೆನ್ಸ್ ವಲಯಗಳಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹೈರಿಂಗ್ ಉತ್ತಮವಾಗಿ ನಡೆದಿದೆ.

ತೈಲ ಮತ್ತು ಅನಿಲ ಕ್ಷೇತ್ರ

ಆಯಿಲ್ ಅಂಡ್ ಗ್ಯಾಸ್ ವಲಯದಲ್ಲಿ ವಿವಿಧ ಸಂಸ್ಥೆಗಳು ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 9ರಷ್ಟು ನೇಮಕಾತಿ ಹೆಚ್ಚಳವಾಗಿದೆ. ಮೆಷೀನ್ ಆಪರೇಟರ್, ಇನ್ಸ್​ಟ್ರುಮೆಂಟೇಶನ್ ಎಂಜಿನಿಯರ್ ಮತ್ತು ಮೈಂಟೆನೆನ್ಸ್ ಹೆಡ್ ಉದ್ಯೋಗಗಳಿಗೆ ಹೆಚ್ಚಿನ ನೇಮಕಾತಿ ಆಗಿದೆ.

ಇದನ್ನೂ ಓದಿ: Gold Income: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ಗೆ ನಿಮ್ಮ ಒಡವೆ ಬಳಸುವ ಮುನ್ನ ಈ ಸಂಗತಿಗಳನ್ನು ತಿಳಿದಿರಿ

ಫಾರ್ಮಾ ಕ್ಷೇತ್ರದಲ್ಲಿ ಶೇ. 6ರಷ್ಟು ನೇಮಕಾತಿ ಹೆಚ್ಚಳ

ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಫಾರ್ಮಾ ವಲಯದಲ್ಲಿ ಶೇ. 6ರಷ್ಟು ಹೊಸ ಉದ್ಯೋಗಗಳಿಗೆ ನೇಮಕಾತಿ ಆಗಿದೆ. ಲ್ಯಾಬ್ ಟೆಕ್ನೀಶಿಯನ್, ಕ್ಲಿನಿಕಲ್ ಅಸಿಸ್ಟೆಂಟ್ ಮತ್ತು ಸ್ಟೋರ್ ಕೀಪರ್ ಕೆಲಸಗಳಿಗೆ ಹೆಚ್ಚಿನ ನೇಮಕಾತಿ ಆಗಿದೆ

ಇನ್ಷೂರೆನ್ಸ್ ಕ್ಷೇತ್ರದಲ್ಲಿ ಮ್ಯಾನೇಜರ್ ಹುದ್ದೆಗಳಿಗೆ ಹೆಚ್ಚಿನ ನೇಮಕಾತಿ

ನೇಮಕಾತಿಯಲ್ಲಿ ಮಿಂಚುತ್ತಿರುವ ಇನ್ನೊಂದು ವಲಯ ಇನ್ಷೂರೆನ್ಸ್​ನದ್ದು. ಕಳೆದ ಎರಡು ತಿಂಗಳಲ್ಲಿ ಶೇ. 5ರಷ್ಟು ನೇಮಕಾತಿ ಹೆಚ್ಚಳವಾಗಿದೆ. ಬ್ರ್ಯಾಂಚ್ ಸೇಲ್ಸ್ ಎಕ್ಸಿಕ್ಯೂಟಿವ್, ಏರಿಯಾ ಸೇಲ್ಸ್ ಮ್ಯಾನೇಜರ್, ಬ್ರ್ಯಾಂಚ್ ಸೇಲ್ಸ್ ಮ್ಯಾನೇಜರ್ ಪೋಸ್ಟ್​ಗಳಿಗೆ ಹೆಚ್ಚಿನ ನೇಮಕಾತಿ ಆಗಿದೆ.

ಇದನ್ನೂ ಓದಿ: ಐಟಿ ದಾಳಿ ನಡೆಯುವ ಮುನ್ನ ಇಲಾಖೆ ತಯಾರಿ ಹೇಗಿರುತ್ತೆ? ಸುಳ್ಳು ಕೇಸ್ ದಾಖಲಿಸುವುದಿಲ್ಲವಾ ಇಲಾಖೆ?

ಐಟಿ ಸೆಕ್ಟರ್​ನಲ್ಲಿ ನೇಮಕಾತಿ ಪ್ರಮಾಣ ಕಡಿಮೆ

ಸಾಫ್ಟ್​ವೇರ್, ಹಾರ್ಡ್​ವೇರ್ ಒಳಗೊಂಡ ಐಟಿ ಉದ್ಯಮದಲ್ಲಿ ಅಕ್ಟೋಬರ್, ನವೆಂಬರ್​ನಲ್ಲಿ ನೇಮಕಾತಿ ಶೇ. 22ರಷ್ಟು ಕಡಿಮೆ ಆಗಿದೆ.

ಇನ್ನು, ನಗರಗಳ ವಿಷಯಕ್ಕೆ ಬಂದರೆ ನೇಮಕಾತಿ ಕಡಿಮೆ ಆಗಿರುವ ನಗರಗಳಲ್ಲಿ ಬೆಂಗಳೂರು ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ