AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Income: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ಗೆ ನಿಮ್ಮ ಒಡವೆ ಬಳಸುವ ಮುನ್ನ ಈ ಸಂಗತಿಗಳನ್ನು ತಿಳಿದಿರಿ

Gold Monetisation Scheme Details: ನಿಮ್ಮಲ್ಲಿರುವ ಚಿನ್ನವನ್ನು ಬಳಸಿ ಸುಲಭವಾಗಿ ಸಾಲ ಪಡೆಯಬಹುದು. ಹಾಗೆಯೇ, ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ಬಳಸಬಹುದು. ನೀವು ಬ್ಯಾಂಕ್​ನಲ್ಲಿ ಈ ಸ್ಕೀಮ್ ಮೂಲಕ ಚಿನ್ನವನ್ನು ಡೆಪಾಸಿಟ್ ಇಟ್ಟರೆ ಅದಕ್ಕೆ ನಿಮಗೆ ವಾರ್ಷಿಕ ಶೇ. 2.5ರವರೆಗೂ ಬಡ್ಡಿ ಸಿಗುತ್ತದೆ. ನೀವು ಠೇವಣಿ ಇಡುವ ಚಿನ್ನವನ್ನು ಕರಗಿಸಿ ಅದನ್ನು ಮಾರುಕಟ್ಟೆ ಬಳಕೆಗೆ ಕೊಡಲಾಗುತ್ತದೆ. ಕೊನೆಯಲ್ಲಿ ಶುದ್ಧ ಚಿನ್ನವನ್ನು ನಿಮಗೆ ಕೊಡಲಾಗುತ್ತದೆ.

Gold Income: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ಗೆ ನಿಮ್ಮ ಒಡವೆ ಬಳಸುವ ಮುನ್ನ ಈ ಸಂಗತಿಗಳನ್ನು ತಿಳಿದಿರಿ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 10, 2023 | 12:20 PM

Share

ಚಿನ್ನ ಇವತ್ತು ಆಪತ್ಕಾಲದ ಆಸ್ತಿ ಎನಿಸಿದೆ. ಈ ಭೂಮಿಯಲ್ಲಿ ಚಿನ್ನ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಲಭ್ಯ ಇರುವುದರಿಂದ ಈ ಲೋಹಕ್ಕೆ ಬೇಡಿಕೆ ಯಾವತ್ತೂ ಏರುಗತಿಯಲ್ಲಿ ಇರುತ್ತದೆ. ಭಾರತ, ಚೀನಾದಂಥ ದೇಶದಲ್ಲಿ ಚಿನ್ನ ಜನರ ಅಲಂಕಾರಕ್ಕೆ ಮತ್ತು ಸಂಪ್ರದಾಯಕ್ಕೆ ಅಗತ್ಯವೂ ಇರುವುದರಿಂದ ಇದು ಇನ್ನೂ ಹೆಚ್ಚು ಅಮೂಲ್ಯ ಎನಿಸಿದೆ. ಇವತ್ತು ಚಿನ್ನಕ್ಕೆ ಸಂಬಂಧಿಸಿದ ಸಾಕಷ್ಟು ಸ್ಕೀಮ್​ಗಳಿವೆ. ಸಾವರೀನ್ ಗೋಲ್ಡ್ ಬಾಂಡ್, ಗೋಲ್ಡ್ ಲೋನ್ ಇತ್ಯಾದಿ ಇವೆ. ಇದರಲ್ಲಿ ಸರ್ಕಾರದಿಂದ ನಡೆಸಲಾಗುವ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ (Gold Monetisation Scheme) ಕೂಡ ಒಂದು. ನಿರುಪಯುಕ್ತವಾಗಿ ಉಳಿಯುವ ನಿಮ್ಮ ಚಿನ್ನದಿಂದ ಹೆಚ್ಚುವರಿ ಆದಾಯ ತರುವ ಸ್ಕೀಮ್ ಇದು.

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಅನ್ನು 2015ರಲ್ಲಿ ಜಾರಿಗೆ ತರಲಾಯಿತು. ಚಿನ್ನದ ಆಮದನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆ ತರಲಾಗಿದೆ. ದೇಶೀಯವಾಗಿ ಲಭ್ಯ ಇರುವ ಚಿನ್ನವನ್ನ ಮಾರುಕಟ್ಟೆಗೆ ಮತ್ತೆ ಹರಿಸುವ ಸ್ಕೀಮ್ ಇದು.

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ವಿಶೇಷತೆಗಳಿವು

  • ನೀವು ಬಳಸದೇ ಇರುವ ಯಾವುದೇ ಚಿನ್ನವನ್ನು ಈ ಜಿಎಂಎಸ್, ಅಥವಾ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ಡೆಪಾಸಿಟ್ ಆಗಿ ಇಡಬಹುದು.
  • ನಿಮ್ಮ ಚಿನ್ನಕ್ಕೆ ಅಂದಿನ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ಶೇ. 2.25ರಿಂದ ಶೇ. 2.5ರವರೆಗೆ ವಾರ್ಷಿಕ ಬಡ್ಡಿ ನಿಮಗೆ ಕೊಡಲಾಗುತ್ತದೆ. ಚಿನ್ನದ ಬೆಲೆ ಏರಿದಂತೆ ನಿಮಗೆ ಸಿಗುವ ಬಡ್ಡಿಯೂ ಹೆಚ್ಚುತ್ತದೆ.
  • ಬ್ಯಾಂಕ್​ನಲ್ಲಿ ನೀವು ಈ ಸ್ಕೀಮ್ ಅಡಿಯಲ್ಲಿ ಠೇವಣಿ ಇಡಬಹುದು. ಚಿನ್ನದ ಶುದ್ಧತೆಯನ್ನು ಪರೀಕ್ಷಿಸಿ ನಿಮಗೆ ಗೋಲ್ಡ್ ಫಿಟ್ನೆಸ್ ಸರ್ಟಿಫಿಕೇಟ್ ಕೊಡಲಾಗುತ್ತದೆ. ಶುದ್ಧ ಚಿನ್ನಕ್ಕೆ ಮಾತ್ರ ಬೆಲೆ ಹಾಕಲಾಗುತ್ತದೆ.
  • ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ನಿಮಗೆ ಸಿಗುವ ಬಡ್ಡಿ ಆದಾಯ ಮತ್ತು ಚಿನ್ನದ ಬೆಲೆ ಹೆಚ್ಚಳ ಲಾಭಕ್ಕೆ ಯಾವ ತೆರಿಗೆ ಇರುವುದಿಲ್ಲ.

ಇದನ್ನೂ ಓದಿ: SBI Amrit Kalash FD: ಎಸ್​ಬಿಐನ ಅಮೃತ್ ಕಳಶ್ ಠೇವಣಿ ಸ್ಕೀಮ್​ಗೆ ಕೆಲವೇ ದಿನ ಬಾಕಿ; ಗರಿಷ್ಠ ಬಡ್ಡಿ ಕೊಡುತ್ತದೆ ಈ ಎಫ್​ಡಿ

ಠೇವಣಿ ಇಟ್ಟ ಚಿನ್ನ ಏನಾಗುತ್ತದೆ?

ನೀವು ಈ ಸ್ಕೀಮ್ ಅಡಿಯಲ್ಲಿ ಕೊಡುವ ಚಿನ್ನವನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಒಡವೆ ಆಗಿದ್ದರೆ ಅದನ್ನು ಕರಗಿಸಿ ಶುದ್ಧ ಚಿನ್ನವಾಗಿ ಮಾರ್ಪಡಿಸಲಾಗುತ್ತದೆ. ನಿಮ್ಮ ಠೇವಣಿ ಅವಧಿ ಮುಗಿದ ಬಳಿಕ ಅಷ್ಟೇ ತೂಕದ ಚಿನ್ನವನ್ನು ಗೋಲ್ಡ್ ಕಾಯಿನ್ ಅಥವಾ ಗೋಲ್ಡ್ ಬಾರ್ ರೂಪದಲ್ಲಿ ನಿಮಗೆ ವಾಪಸ್ ಕೊಡಲಾಗುತ್ತದೆ.

ಈ ಕಾರಣಕ್ಕೆ ನೀವು ಸಾಮಾನ್ಯವಾಗಿ ಬಳಸುವ ಆಭರಣವನ್ನು ಈ ಸ್ಕೀಮ್​ನಲ್ಲಿ ಉಪಯೋಗಿಸದಿರುವುದು ಉತ್ತಮ. ನಿರುಪಯುಕ್ತ ಎನಿಸುವ ಒಡವೆಯನ್ನು ಬೇಕಾದರೆ ಬಳಸಬಹುದು. ಗೋಲ್ಡ್ ಕಾಯಿನ್, ಗೋಲ್ಡ್ ಬಾರ್ ಇತ್ಯಾದಿ ಅಪರಂಜಿ ಚಿನ್ನವನ್ನು ಬಳಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ