SBI Amrit Kalash FD: ಎಸ್​ಬಿಐನ ಅಮೃತ್ ಕಳಶ್ ಠೇವಣಿ ಸ್ಕೀಮ್​ಗೆ ಕೆಲವೇ ದಿನ ಬಾಕಿ; ಗರಿಷ್ಠ ಬಡ್ಡಿ ಕೊಡುತ್ತದೆ ಈ ಎಫ್​ಡಿ

2023ರ ಫೆಬ್ರುವರಿ 15ರಂದು ಎಸ್​ಬಿಐ ಆರಂಭಿಸಿದ ಅಮೃತ್ ಕಲಶ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಡಿಸೆಂಬರ್ 31ರವರೆಗೆ ಲಭ್ಯ ಇದೆ. ಅಮೃತ್ ಕಳಶ್ ಸ್ಕೀಮ್ 400 ದಿನಗಳ ಠೇವಣಿ ಯೋಜನೆಯಾಗಿದ್ದು ಗರಿಷ್ಠ ಬಡ್ಡಿ ಸಿಗುತ್ತದೆ. ಸಾಮಾನ್ಯ ಎಸ್​ಬಿಐ ಗ್ರಾಹಕರಿಗೆ ಶೇ. 7.1 ಮತ್ತು ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ಬಡ್ಡಿ ಸಿಗುತ್ತದೆ.

SBI Amrit Kalash FD: ಎಸ್​ಬಿಐನ ಅಮೃತ್ ಕಳಶ್ ಠೇವಣಿ ಸ್ಕೀಮ್​ಗೆ ಕೆಲವೇ ದಿನ ಬಾಕಿ; ಗರಿಷ್ಠ ಬಡ್ಡಿ ಕೊಡುತ್ತದೆ ಈ ಎಫ್​ಡಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 07, 2023 | 1:49 PM

ಬೆಂಗಳೂರು, ಡಿಸೆಂಬರ್ 7: ಹತ್ತು ತಿಂಗಳ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರಂಭಿಸಿದ ಅಮೃತ್ ಕಳಶ್ ವಿಶೇಷ ಎಫ್​ಡಿ ಸ್ಕೀಮ್ (SBI Amrit Kalash FD) ಗರಿಷ್ಠ ಬಡ್ಡಿ ನೀಡುತ್ತದೆ. ಈ ಸ್ಕೀಮ್ ಡಿಸೆಂಬರ್ 31ರವರೆಗೂ ಮಾತ್ರವೇ ಲಭ್ಯ ಇರುತ್ತದೆ. ಇನ್ನು ಮೂರು ವಾರ ಕಾಲಾವಕಾಶ ಇದೆ. ಆಗಸ್ಟ್ 15ರವರೆಗೆ ಮಾತ್ರ ಇದ್ದ ಈ ಸ್ಕೀಮ್ ಅನ್ನು ಗ್ರಾಹಕರ ಬೇಡಿಕೆ ಕಾರಣಕ್ಕೆ ಒಂದೆರಡು ಬಾರಿ ಕಾಲಾವಕಾಶ ಹೆಚ್ಚಿಸಲಾಗಿದೆ. ಅಂತಿಮವಾಗಿ 2023ರ ಡಿಸೆಂಬರ್ ಅಂತ್ಯದವರೆಗೂ ಈ ಸ್ಕೀಮ್ ಪಡೆಯಲು ಸಾಧ್ಯ ಇದೆ.

ಏನಿದು ಎಸ್​ಬಿಐ ಅಮೃತ್ ಕಳಶ್ ಎಫ್​ಡಿ ಸ್ಕೀಮ್?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಮೃತ್ ಕಳಶ್ ಎಫ್​ಡಿ ಸ್ಕೀಮ್ ಇತರ ನಿಶ್ಚಿತ ಠೇವಣಿಯಂತೆಯೇ ಇದೆ. ಆದರೆ, ಅವಧಿಯಲ್ಲಿ ಮತ್ತು ಬಡ್ಡಿದರಲ್ಲಿ ಮಾತ್ರ ವ್ಯತ್ಯಾಸ. ಇದರಲ್ಲಿ ಠೇವಣಿ ಅವಧಿ 400 ದಿನ ಇದೆ. ಸಾಮಾನ್ಯ ಗ್ರಾಹಕರಿಗೆ ಈ ಅವಧಿ ಠೇವಣಿಗೆ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ ಠೇವಣಿಗೆ ಶೇ. 7.6ರಷ್ಟು ಬಡ್ಡಿ ಕೊಡಲಾಗುತ್ತದೆ. 400 ದಿನಗಳ ಅವಧಿಯದ್ದಾದ್ದರಿಂದ ಅಮೃತ್ ಕಳಶ್ ಎಂದು ಹೆಸರಿಸಲಾಗಿದೆ.

ಇದನ್ನೂ ಓದಿ: Post Office Fixed Deposit: ಪೋಸ್ಟ್ ಆಫೀಸ್ ಎಫ್​ಡಿ ಹಣ ಹಿಂಪಡೆಯುವ ಮುನ್ನ ಈ ಮಹತ್ವದ ನಿಯಮ ಬದಲಾವಣೆ ತಿಳಿದಿರಿ

ಎಸ್​ಬಿಐ ಅಮೃತ್ ಕಳಶ್ ಎಫ್​ಡಿ ಸ್ಕೀಮ್​ನ ಇತರ ಲಾಭಗಳು

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ 400 ದಿನಗಳ ವಿಶೇಷ ಎಫ್​ಡಿ ಸ್ಕೀಮ್ ಭಾರತೀಯರಿಗೆ ಮಾತ್ರವಲ್ಲ ಎನ್​ಆರ್​ಐ ಗ್ರಾಹಕರಿಗೂ ಲಭ್ಯ ಇದೆ.
  • ಎರಡು ಕೋಟಿ ರೂಗಿಂತ ಕಡಿಮೆ ಮೊತ್ತದ ಹಣವನ್ನು ಠೇವಣಿ ಇಡಬಹುದು.
  • ಈ ಠೇವಣಿಯಿಂದ ಬರುವ ಬಡ್ಡಿಯನ್ನು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಪಡೆಯುವ ಅವಕಾಶ ಇದೆ. ಈ ಬಡ್ಡಿ ಹಣವು ಗ್ರಾಹಕರ ಖಾತೆಗೆ ಠೇವಣಿ ಆಗುತ್ತದೆ.
  • ಅಮೃತ್ ಕಳಶ್ ಸ್ಕೀಮ್​ನಲ್ಲಿ ವಿಶೇಷ ಠೇವಣಿಯ ಆಯ್ಕೆಯೂ ಇದ್ದು, ಇದರಲ್ಲಿ ಬಡ್ಡಿ ಹಣವು ಠೇವಣಿ ಅವಧಿ ಮುಗಿದು ಮೆಚ್ಯೂರ್ ಆದಾಗ ಒಟ್ಟಿಗೆ ಸಿಗುತ್ತದೆ.
  • ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್​ನಲ್ಲಿ ಬರುವ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಐಟಿ ರಿಟರ್ನ್ ಫೈಲ್ ಮಾಡುವಾಗ ಇದನ್ನು ರೀಫಂಡ್ ಪಡೆಯುವ ಅವಕಾಶವೂ ಇರುತ್ತದೆ.
  • ಅಮೃತ್ ಕಳಶ್ ಸ್ಕೀಮ್​ನಲ್ಲಿ ಇಡಲಾಗುವ ಎಫ್​ಡಿಯಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:43 pm, Thu, 7 December 23

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ