AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್​’ ಚಿತ್ರಕ್ಕೆ ಪ್ರಭಾಸ್​, ಪ್ರಶಾಂತ್​ ನೀಲ್​, ಶ್ರುತಿ ಹಾಸನ್​ ಪಡೆದ ಸಂಭಾವನೆ ಎಷ್ಟು?

ಪ್ರಭಾಸ್​, ಶ್ರುತಿ ಹಾಸನ್​, ಪೃಥ್ವಿರಾಜ್​ ಸುಕುಮಾರನ್​ ಅವರಂತಹ ಘಟಾನುಘಟಿ ಕಲಾವಿದರು ‘ಸಲಾರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಶಾಂತ್​ ನೀಲ್​ ಅವರ ನಿರ್ದೇಶನ ಎಂಬ ಕಾರಣಕ್ಕೆ ನಿರೀಕ್ಷೆ ಹೆಚ್ಚಾಗಿದೆ. ದುಬಾರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರಿಗೆ ಬಹುಕೋಟಿ ರೂ. ಸಂಭಾವನೆ ಸಿಕ್ಕಿದೆ.

‘ಸಲಾರ್​’ ಚಿತ್ರಕ್ಕೆ ಪ್ರಭಾಸ್​, ಪ್ರಶಾಂತ್​ ನೀಲ್​, ಶ್ರುತಿ ಹಾಸನ್​ ಪಡೆದ ಸಂಭಾವನೆ ಎಷ್ಟು?
ಪ್ರಶಾಂತ್​ ನೀಲ್​, ಪ್ರಭಾಸ್​, ಪೃಥ್ವಿರಾಜ್​
ಮದನ್​ ಕುಮಾರ್​
|

Updated on: Dec 20, 2023 | 5:28 PM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಸಲಾರ್​’ (Salaar) ಕೂಡ ಇದೆ. ಎರಡು ಪಾರ್ಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗಿದ್ದು, ಮೊದಲ ಪಾರ್ಟ್​ ಡಿಸೆಂಬರ್​ 22ರಂದು ಬಿಡುಗಡೆ ಆಗುತ್ತಿದೆ. ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ಮೂಡಿಬಂದಿದೆ. ಅಂದಾಜು 400 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧಗೊಂಡಿದೆ. ಘಟಾನುಘಟಿ ಕಲಾವಿದರು ಮತ್ತು ತಂತ್ರಜ್ಞರು ‘ಸಲಾರ್’ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಅವರ ಸಂಭಾವನೆ (Salaar Remuneration) ಎಷ್ಟು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಪ್ರಭಾಸ್​ ಅವರು ಸತತ ಸೋಲು ಕಂಡಿದ್ದಾರೆ. ಹಾಗಿದ್ದರೂ ಕೂಡ ಅವರ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ‘ಸಲಾರ್​’ ಸಿನಿಮಾಗಾಗಿ ಪ್ರಭಾಸ್​ ಅವರು ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಸಿನಿಮಾದಿಂದ ಬರುವ ಲಾಭದಲ್ಲಿ ಅವರಿಗೆ ಶೇಕಡ 10ರಷ್ಟು ಸಂದಾಯ ಆಗಲಿದೆ ಎಂಬ ಮಾಹಿತಿ ಕೂಡ ಇದೆ.

ಪ್ರಶಾಂತ್​ ನೀಲ್​ ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಮೂಲಕ ಭರ್ಜರಿ ಗೆಲವು ಕಂಡರು. ಆ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಾಯಿತು. ‘ಫೈನಾನ್ಷಿಯಲ್​ ಎಕ್ಸ್​ಪ್ರೆಸ್​’ ವರದಿ ಮಾಡಿರುವ ಪ್ರಕಾರ, ‘ಸಲಾರ್​’ಸಿನಿಮಾದ ನಿರ್ದೇಶನಕ್ಕೆ ಪ್ರಶಾಂತ್​ ನೀಲ್​ ಅವರು 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಸಿನಿಮಾದ ಟ್ರೇಲರ್​ ನೋಡಿದವರು ಮೇಕಿಂಗ್​ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಸಲಾರ್​’ ಗೆದ್ದರೆ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: ಹಿಂದಿ ಮಾರುಕಟ್ಟೆಯಲ್ಲಿ ‘ಸಲಾರ್​’ ಚಿತ್ರಕ್ಕೆ ಆಗುತ್ತಾ ಹಿನ್ನಡೆ? ಇಲ್ಲಿದೆ ಕಾರಣ..

ಮಲಯಾಳಂ ಸ್ಟಾರ್​ ನಟ ಪೃಥ್ವಿರಾಜ್​ ಸುಕುಮಾರನ್​ ಅವರು ‘ಸಲಾರ್​’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಪಾತ್ರದ ಗೆಟಪ್​ ತುಂಬ ಡಿಫರೆಂಟ್​ ಆಗಿದೆ. ಈ ಸಿನಿಮಾದಲ್ಲಿನ ನಟನೆಗೆ ಅವರು 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಪ್ರಭಾಸ್​ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್​ ನಟಿಸಿದ್ದಾರೆ. ಅವರಿಗೂ 4 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂಬ ಮಾಹಿತಿ ಇದೆ.

‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯು ನಿರ್ಮಾಣ ಮಾಡಿದ್ದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಸಿತ್ತು. ಹಾಗೆಯೇ ‘ಸಲಾರ್​’ ಚಿತ್ರ ಕೂಡ ಅಬ್ಬರಿಸುತ್ತಾ ಎಂಬುದನ್ನು ಕಾದುನೋಡಬೇಕು. ಈ ಸಿನಿಮಾಗೆ ‘ಡಂಕಿ’ ಚಿತ್ರ ಪೈಪೋಟಿ ನೀಡಲಿದೆ. ಡಿಸೆಂಬರ್​ 21ರಂದು ‘ಡಂಕಿ’ ಬಿಡುಗಡೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!