‘ಕೆಜಿಎಫ್’ ಬಗ್ಗೆ ವ್ಯಂಗ್ಯವಾಡಿದ್ದ ನಿರ್ದೇಶಕ ಈಗ ಪ್ರಭಾಸ್ ಅಭಿಮಾನಿಗಳಿಗೂ ವಿಲನ್

Salaar: ‘ಕೆಜಿಎಫ್’ ಸಿನಿಮಾ ಬಗ್ಗೆ ಕೀಳಾಗಿ ಮಾತನಾಡಿ ವ್ಯಂಗ್ಯವಾಡಿದ್ದ ತೆಲುಗು ಸಿನಿಮಾ ನಿರ್ದೇಶಕ ಇದೀಗ ಪ್ರಭಾಸ್ ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ.

‘ಕೆಜಿಎಫ್’ ಬಗ್ಗೆ ವ್ಯಂಗ್ಯವಾಡಿದ್ದ ನಿರ್ದೇಶಕ ಈಗ ಪ್ರಭಾಸ್ ಅಭಿಮಾನಿಗಳಿಗೂ ವಿಲನ್
Follow us
ಮಂಜುನಾಥ ಸಿ.
|

Updated on:Dec 20, 2023 | 5:14 PM

ಮಾಸ್, ಕ್ಲಾಸ್ ಸಿನಿಮಾಗಳು ದಶಕಗಳಿಂದ ಜೊತೆ-ಜೊತೆಯಾಗಿ ಸಾಗಿ ಬರುತ್ತಿವೆ. ಪ್ರತಿ ಚಿತ್ರೋದ್ಯಮದಲ್ಲಿಯೂ ಎರಡೂ ಪ್ರಕಾರದ ಸಿನಿಮಾಗಳು ಚಾಲ್ತಿಯಲ್ಲಿವೆ, ಕ್ಲಾಸ್-ಮಾಸ್ ಸಿನಿಮಾಗಳು ಜೊತೆ-ಜೊತೆಯಾಗಿ ಸಾಗಿದರಷ್ಟೆ ಚಿತ್ರರಂಗ ಸುಭಿಕ್ಷವಾಗಿ ಸಾಗುತ್ತದೆ ಎಂಬುದು ಬಹುತೇಕ ಸಾಬೀತಾಗಿದೆ. ಹೀಗಿದ್ದಾಗಿಯೂ ಕೆಲವು ಕ್ಲಾಸ್ ಸಿನಿಮಾ ನಿರ್ದೇಶಕರಿಗೆ ತಾವು ಮೇಲೆಂಬ, ತಾವು ಬುದ್ಧಿವಂತ ನಿರ್ದೇಶಕರ ಹಮ್ಮು-ಕೊಂಬು ಬೆಳೆಸಿಕೊಂಡಿರುತ್ತಾರೆ. ಇಂಥಹವರು ಆಗಾಗ್ಗೆ ಕಮರ್ಶಿಯಲ್ ಸಿನಿಮಾಗಳನ್ನು ಹೀಗಳೆಯುತ್ತಿರುತ್ತಾರೆ. ಇತ್ತೀಚೆಗಷ್ಟೆ ತೆಲುಗಿನ ‘ಸೆನ್ಸಿಬಲ್’ ನಿರ್ದೇಶಕ ಎನಿಸಿಕೊಂಡಿರುವ ಮಹಾ ವೆಂಕಟೇಶ್ (Maha Venkatesh) ‘ಕೆಜಿಎಫ್’ (KGF) ಸಿನಿಮಾವನ್ನು ಕೆಟ್ಟದಾಗಿ ಹೀಗಳೆದು ಕರ್ನಾಟಕ ಸಿನಿಮಾ ಪ್ರೇಮಿಗಳಿಂದ ಬೈಸಿಕೊಂಡಿದ್ದರು. ಈಗ ಇದೇ ನಿರ್ದೇಶಕ ಪ್ರಭಾಸ್ ಅಭಿಮಾನಿಗಳಿಂದ ಬೈಗುಳ ಕೇಳುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಹಾ ವೆಂಕಟೇಶ್, ‘ಕೆಜಿಎಫ್’ ಒಂದು ಕೆಟ್ಟ ಸಿನಿಮಾ, ಜಗತ್ತಿನ ಯಾವ ತಾಯಿ ತಾನೆ, ಹಣದ ಹಿಂದೆ ಹೋಗು, ಹಣಕ್ಕಾಗಿ ಕೆಟ್ಟವನಾಗು ಎಂದು ಹೇಳಿಕೊಡುತ್ತಾಳೆ ಎಂದು ಹೇಳಿ ಕೆಟ್ಟದಾಗಿ ವ್ಯಂಗ್ಯವಾಡಿದ್ದ, ‘ನಾವು ಹಿಂಸೆಯನ್ನು ತೋರಿಸಲು ಪ್ರಾರಂಭಿಸಿದರೆ ಅದಕ್ಕಿಂತೂ ಹೆಚ್ಚು ಕಲಾತ್ಮಕವಾಗಿ ತೋರಿಸಬಲ್ಲೆವು’ ಎಂದು ಸವಾಲು ಸಹ ಎಸೆದಿದ್ದ.

ಈಗ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ಅದೇ ಮಹಾ ವೆಂಕಟೇಶ್, ಹಿಂದಿಯ ‘ಡಂಕಿ’ ಸಿನಿಮಾ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದು, ತಾನು ‘ಡಂಕಿ’ ಸಿನಿಮಾ ನೋಡಲು ಹೋಗುತ್ತಿರುವಾಗಿ ಪೋಸ್ಟ್ ಹಾಕಿರುವ ಜೊತೆಗೆ ರಾಜ್​ಕುಮಾರ್ ಹಿರಾನಿ ಹಾಗೂ ಶಾರುಖ್ ಖಾನ್​ರನ್ನು ತಮ್ಮ ಪೋಸ್ಟ್​ನಲ್ಲಿ ಕೊಂಡಾಡಿದ್ದರು.

ಇದನ್ನೂ ಓದಿ:Salaar Vs Dunki: ಅಡ್ವಾನ್ಸ್​ ಬುಕಿಂಗ್​ನಲ್ಲಿ ‘ಸಲಾರ್​’ ಚಿತ್ರವನ್ನು ಹಿಂದಿಕ್ಕಿದ ‘ಡಂಕಿ’

ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಭಾಸ್ ಅಭಿಮಾನಿಗಳು, ‘ಸಲಾರ್’ ಸಿನಿಮಾದ ಟ್ರೈಲರ್ ವೈರಲ್ ಆಗಿದೆ ಆ ಬಗ್ಗೆ ಒಂದೂ ಪೋಸ್ಟ್ ಹಾಕದ ಈತ ಹಿಂದಿ ಸಿನಿಮಾದ ಪೋಸ್ಟ್ ಹಾಕಿದ್ದಾನೆ ಎಂದು ಆಕ್ಷೇಪ ಎತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾ ವೆಂಕಟೇಶ್, ‘ಸಲಾರ್’ ಸಿನಿಮಾದ ಟ್ರೈಲರ್ ಬಂದಿರುವುದೇ ನನಗೆ ಗೊತ್ತಿರಲಿಲ್ಲ, ನೀವು ಈಗ ಕಮೆಂಟ್ ಮಾಡಿದ ಬಳಿಕವಷ್ಟೆ ‘ಸಲಾರ್’ನ ಟ್ರೈಲರ್​ ಬಂದಿದೆ ಎಂದು ಗೊತ್ತಾಗಿ ನೋಡಿದೆ, ಬಹಳ ಚೆನ್ನಾಗಿದೆ’ ಎಂದು ಪ್ರತಿಕ್ರಿಯಿಸಿದ್ದರು. ಮಹಾ ವೆಂಕಟೇಶ್​ರ ಈ ಪ್ರತಿಕ್ರಿಯೆ ಪ್ರಭಾಸ್ ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿತು.

ಪ್ರಭಾಸ್ ಅಭಿಮಾನಿಗಳ ಸತತ ನಿಂದನೆ, ಟೀಕೆಗೆ ಬೇಸರಗೊಂಡ ಮಹಾ ವೆಂಕಟೇಶ್, ತಮ್ಮ ಟ್ವಿಟ್ಟರ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಖಾತೆ ಡಿಲೀಟ್ ಮಾಡುವ ಮುನ್ನ, ತಾವು ಸಹ ಪ್ರಭಾಸ್ ಅಭಿಮಾನಿಯೇ, ಅವರೊಟ್ಟಿಗೆ ಕೆಲಸ ಮಾಡಲು ಹಲವು ವರ್ಷಗಳಿಂದ ಕಾಯುತ್ತಿದ್ದೇನೆ. ನೀವು ವಿನಾ ಕಾರಣ ವಿವಾದ ಸೃಷ್ಟಿಸುತ್ತಿದ್ದೀರ ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Wed, 20 December 23

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ