AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಂಕಿ’ v/s‘ಸಲಾರ್’: ಮಲ್ಟಿಪ್ಲೆಕ್ಸ್​ನಿಂದ ತಾರತಮ್ಯ, ಪಾಠ ಕಲಿಸಲು ಮುಂದಾದ ಹೊಂಬಾಳೆ?

Salaar: ‘ಸಲಾರ್’ ಸಿನಿಮಾಕ್ಕೆ ಕಡಿಮೆ ಸ್ಕ್ರೀನ್ ನೀಡಿ, ‘ಡಂಕಿ’ ಸಿನಿಮಾಕ್ಕೆ ಹೆಚ್ಚಿನ ಸ್ಕ್ರೀನ್ ನೀಡುತ್ತಿರುವ ಮಲ್ಟಿಪ್ಲೆಕ್ಸ್​ಗಳ ವಿರುದ್ಧ ಹೊಂಬಾಳೆ ಫಿಲ್ಮ್ಸ್​ ಅಸಮಾಧಾನಗೊಂಡಿದ್ದು, ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡದಿರುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

‘ಡಂಕಿ’ v/s‘ಸಲಾರ್’: ಮಲ್ಟಿಪ್ಲೆಕ್ಸ್​ನಿಂದ ತಾರತಮ್ಯ, ಪಾಠ ಕಲಿಸಲು ಮುಂದಾದ ಹೊಂಬಾಳೆ?
ಮಂಜುನಾಥ ಸಿ.
|

Updated on:Dec 20, 2023 | 6:23 PM

Share

ಪ್ರಭಾಸ್ (Prabhas) ನಟನೆಯ ‘ಸಲಾರ್’ (Salaar) ಸಿನಿಮಾ ಇದೇ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದೆ. ಅದಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 21ಕ್ಕೆ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ತೆರೆಗೆ ಬರಲಿದೆ. ಎರಡೂ ಸಿನಿಮಾಗಳ ಮಧ್ಯೆ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಫೈಟ್ ನಡೆಯಲಿದೆ. ಎರಡೂ ಸಿನಿಮಾಗಳ ಅಡ್ವಾನ್ಸ್ ಬುಕಿಂಗ್ ಜೋರಾಗಿದೆ. ಈ ಬಾಕ್ಸ್ ಆಫೀಸ್​ ಫೈಟ್​ನ ಕೇಂದ್ರವಾಗಿರುವ ಮಲ್ಟಿಪ್ಲೆಕ್ಸ್​ಗಳು ‘ಸಲಾರ್​’ಗೆ ಅನ್ಯಾಯ ಮಾಡಿ, ‘ಡಂಕಿ’ ಪರವಾಗಿ ನಿಂತಿವೆ ಎನ್ನಲಾಗುತ್ತಿದೆ. ಮಲ್ಟಿಪ್ಲೆಕ್ಸ್​ಗಳ ಈ ತಾರತಮ್ಯ ನೀತಿಯನ್ನು ಹೊಂಬಾಳೆ ಖಂಡಿಸಿದೆ.

‘ಡಂಕಿ’ ಸಿನಿಮಾಕ್ಕೆ ಹೆಚ್ಚು ಸ್ಕ್ರೀನ್​ ನೀಡಿ, ‘ಸಲಾರ್’ ಸಿನಿಮಾಕ್ಕೆ ಕಡಿಮೆ ಸ್ಕ್ರೀನ್​ಗಳನ್ನು ಮಲ್ಟಿಪ್ಲೆಕ್ಸ್​​ಗಳು ನೀಡುತ್ತಿವೆಯಂತೆ. ಆದರೆ ಹಿಂದೆ ಆಗಿದ್ದ ಒಪ್ಪದಂತೆ ‘ಡಂಕಿ’ ಹಾಗೂ ‘ಸಲಾರ್’ ಸಿನಿಮಾಕ್ಕೆ ತಲಾ 50-50 ಅನುಪಾತದಲ್ಲಿ ಸ್ಕ್ರೀನ್ ಹಂಚಬೇಕಿತ್ತು ಮಲ್ಟಿಪ್ಲೆಕ್ಸ್​ಗಳು ಆದರೆ ಈಗ ‘ಡಂಕಿ’ ಸಿನಿಮಾಕ್ಕೆ ಹೆಚ್ಚು ಸ್ಕ್ರೀನ್ ನೀಡಿ ‘ಸಲಾರ್’ ಸಿನಿಮಾಕ್ಕೆ ಕಡಿಮೆ ಸ್ಕ್ರೀನ್ ನೀಡಲಾಗುತ್ತಿದೆ ಎಂದು ಹೊಂಬಾಳೆ ಅಸಮಾಧಾನ ಹೊರಹಾಕಿದೆ ಎನ್ನಲಾಗುತ್ತಿದೆ.

ಮಲ್ಟಿಪ್ಲೆಕ್ಸ್​ಗಳು ತಮ್ಮ ಈ ತಾರತಮ್ಯ ನೀತಿಯನ್ನು ಕೈಬಿಡದ ಹೊರತು, ‘ಸಲಾರ್’ ಸಿನಿಮಾವನ್ನು ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಹೊಂಬಾಳೆ ಹೇಳುತ್ತಿರುವುದಾಗಿ ವರದಿ ಆಗಿದೆ. ಪಿವಿಆರ್, ಐನಾಕ್ಸ್ ಹಾಗೂ ಮಿರಾಜ್ ಮಲ್ಟಿಪ್ಲೆಕ್ಸ್ ಗಳ ಮೇಲೆ ಹೊಂಬಾಳೆ ತಮ್ಮ ಆಕ್ರೋಶ ಹೊರಹಾಕಿದ್ದು, 50:50 ಅನುಪಾತದಲ್ಲಿ ಸ್ಕ್ರೀನ್ ಹಂಚಿಕೆ ಮಾಡುವಂತೆ ಮಾತುಕತೆ ಆಗಿತ್ತು, ಆದರೆ ಇತ್ತೀಚೆಗೆ ನಟ ಶಾರುಖ್ ಖಾನ್, ಪಿವಿಆರ್ ಮಾಲೀಕ ಅಜಯ್ ಬಿಜಲಿ ಅವರನ್ನು ಭೇಟಿ ಆದ ಬಳಿಕ ‘ಡಂಕಿ’ ಸಿನಿಮಾಕ್ಕೆ ಸ್ಕ್ರೀನ್​ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ.

ಇದನ್ನೂ ಓದಿ:‘ಸಲಾರ್’ಗೆ ನೋ ಅನ್ನಲು ರೆಡಿಯಾಗಿದ್ದ ಪ್ರಭಾಸ್ ನಿರ್ಣಯ ಬದಲಿಸಿದ್ದು ಏಕೆ?

ತಮ್ಮ ಸಿನಿಮಾಕ್ಕೆ ಕಡಿಮೆ ಸ್ಕ್ರೀನ್​ಗಳನ್ನು ನೀಡುತ್ತಿರುವ ಮಲ್ಟಿಪ್ಲೆಕ್ಸ್​ಗಳ ವಿರುದ್ಧ ಅಸಹಕಾರ ತೋರುವ ನಿಟ್ಟಿನಲ್ಲಿ ಯೋಜಿಸಿರುವ ಹೊಂಬಾಳೆಯ ವಿಜಯ್ ವಿರಗಂದೂರು ಅವರು ‘ಸಲಾರ್’ ಸಿನಿಮಾವನ್ನು ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆ ಮಾಡದೆ, ಕೇವಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ ಎನ್ನಲಾಗುತ್ತಿದೆ.

‘ಕೆಜಿಎಫ್’ ಸಿನಿಮಾದ ಸಮಯದಲ್ಲಿಯೂ ಹೊಂಬಾಳೆ ಫಿಲ್ಮ್ಸ್​ ಹಾಗೂ ಮಲ್ಟಿಪ್ಲೆಕ್ಸ್ ನಡುವೆ ಲಾಭ ಹಂಚಿಕೆ ವಿಚಾರಕ್ಕೆ ಚರ್ಚೆಗಳು ನಡೆದಿದ್ದವು. ಆಗ ಮಲ್ಟಿಪ್ಲೆಕ್ಸ್​ನಲ್ಲಿದ್ದ ಲಾಭಾಂಶ ಹಂಚಿಕೆ ಸೂತ್ರವನ್ನು ಬದಲಾಯಿಸುವಂತೆ ಹೊಂಬಾಳೆ ಫಿಲ್ಮ್ಸ್​ ಮಲ್ಟಿಪ್ಲೆಕ್ಸ್​ಗಳ ಮೇಲೆ ಒತ್ತಡ ಹೇರಿತ್ತು. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ತಡವಾಗಿ ‘ಕೆಜಿಎಫ್ 2’ ಸಿನಿಮಾದ ಬುಕಿಂಗ್​ಗಳನ್ನು ಓಪನ್ ಮಾಡಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Wed, 20 December 23