‘ಬಿಗ್ ಬಾಸ್’ಗೆ ಬಂದ ಅಮ್ಮನ ಬಳಿ ಮಾತನಾಡಲೂ ಆಗಲಿಲ್ಲ; ನಿಯಮಕ್ಕೆ ಕಟ್ಟುಬಿದ್ದು ಕಣ್ಣೀರು ಹಾಕಿದ ಕಾರ್ತಿಕ್
ಕಾರ್ತಿಕ್ ತಾಯಿ ಬಂದಾಗಲೇ ಬಿಗ್ ಬಾಸ್ ಕಡೆಯಿಂದ ಪೌಸ್ ಎನ್ನುವ ಆದೇಶ ಬಂದಿದೆ. ಮಗನ ಬಳಿ ಆಗಮಿಸಿದ ತಾಯಿ ಸಂತೈಸಿದ್ದಾರೆ. ಆ ಬಳಿಕ ಮುಖ್ಯದ್ವಾರ ಓಪನ್ ಆದ ಕಾರಣ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ.
ಬಿಗ್ ಬಾಸ್ (Bigg Boss) ಮನೆಯಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ. ಬಿಗ್ ಬಾಸ್ ಪೌಸ್ ಎಂದಾಗ ಸ್ಪರ್ಧಿಗಳು ನಿಲ್ಲಬೇಕು. ಪ್ಲೇ ಎಂದಾಗ ಮುಂದುವರಿಯಬೇಕು. ಕಾರ್ತಿಕ್ ತಾಯಿ ಬಂದಾಗಲೇ ಬಿಗ್ ಬಾಸ್ ಕಡೆಯಿಂದ ಪೌಸ್ ಎನ್ನುವ ಆದೇಶ ಬಂದಿದೆ. ಮಗನ ಬಳಿ ಆಗಮಿಸಿದ ತಾಯಿ ಸಂತೈಸಿದ್ದಾರೆ. ಆ ಬಳಿಕ ಮುಖ್ಯದ್ವಾರ ಓಪನ್ ಆದ ಕಾರಣ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ. ಇದನ್ನು ನೋಡಿ ಕಾರ್ತಿಕ್ ಕಣ್ಣೀರು ಹಾಕಿದ್ದಾರೆ. ಅಮ್ಮನ ಬಳಿ ಮರಳಿ ಬರುವಂತೆ ಕೋರಿದ್ದಾರೆ. ಹೊಸ ಪ್ರೋಮೋ ಗಮನ ಸೆಳೆಯುತ್ತಿದೆ. ಎಪಿಸೋಡ್ನಲ್ಲಿ ಕಾರ್ತಿಕ್ ತಾಯಿ ಮರಳಿ ಬರುವುದನ್ನು ತೋರಿಸಬಹುದು ಎಂದು ಅನೇಕರು ಊಹಿಸಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ