AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಹೊರ ವಲಯದಲ್ಲೊಂದು ಆಗಂತುಕ ಕೋತಿ; ಮಹಿಳೆಯರು, ಲುಂಗಿ ಉಟ್ಟವರೇ ಟಾರ್ಗೆಟ್, ಇಲ್ಲಿದೆ ವಿಡಿಯೋ

ಮಂಗಳೂರು ಹೊರ ವಲಯದಲ್ಲೊಂದು ಆಗಂತುಕ ಕೋತಿ; ಮಹಿಳೆಯರು, ಲುಂಗಿ ಉಟ್ಟವರೇ ಟಾರ್ಗೆಟ್, ಇಲ್ಲಿದೆ ವಿಡಿಯೋ

ಅಶೋಕ್​ ಪೂಜಾರಿ
| Edited By: ಕಿರಣ್ ಹನುಮಂತ್​ ಮಾದಾರ್|

Updated on: Dec 27, 2023 | 3:37 PM

Share

ಮಂಗಳೂರು(Mangalore) ತಾಲೂಕಿನ ಕುಪ್ಪೆಪದವಿನ ನೆಲ್ಲಿಜೋರ ಪ್ರದೇಶದಲ್ಲಿ ಕೋತಿಯ ಕಾಟಕ್ಕೆ ಜನ ಹೈರಾಣು ಆಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ, ಒಂಟಿ ಕೋತಿ(Monkey)ಯ ದಾಳಿಗೆ ಹೆದರಿ ಮನೆಯಿಂದ ಕೂಡ ಹೊರಬರಲು ಭಯ ಪಡುತ್ತಿದ್ದಾರೆ.

ದಕ್ಷಿಣ ಕನ್ನಡ, ಡಿ.27: ಜಿಲ್ಲೆಯ ಮಂಗಳೂರು(Mangalore) ತಾಲೂಕಿನ ಕುಪ್ಪೆಪದವಿನ ನೆಲ್ಲಿಜೋರ ಪ್ರದೇಶದಲ್ಲಿ ಕೋತಿಯ ಕಾಟಕ್ಕೆ ಜನ ಹೈರಾಣು ಆಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ, ಒಂಟಿ ಕೋತಿ(Monkey)ಯ ದಾಳಿಗೆ ಹೆದರಿ ಮನೆಯಿಂದ ಕೂಡ ಹೊರಬರಲು ಭಯ ಪಡುತ್ತಿದ್ದಾರೆ. ಇನ್ನು ಈ ಕೋತಿಯು ಮಹಿಳೆಯರು ಹಾಗೂ ಲುಂಗಿ ಉಟ್ಟವರನ್ನೇ ಟಾರ್ಗೆಟ್ ಮಾಡುತ್ತಿದ್ದು, ಕೇವಲ ಮೂರು-ನಾಲ್ಕು ಕುಟುಂಬಗಳಿಗೆ ಮಾತ್ರ ಕಂಟಕ ಪ್ರಾಯವಾಗಿ ಕಾಡುತ್ತಿದೆ. ಈ ಕೋತಿಯ ದಾಳಿಗೆ ಗಾಯಗೊಂಡು ಮಹಿಳೆಯೋರ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಷ್ಟಾದರೂ ಕೋತಿ ಸೆರೆ ಹಿಡಿಯುವ ವಿಚಾರದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಶೋಕ್​ ಪೂಜಾರಿ
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More