AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ನಾಡಿನಲ್ಲಿ ಮೂವರ ಮೇಲೆ ಮಂಗನ ದಾಳಿ; ರೇಗಿಸಿದವನ ಅಟ್ಟಾಡಿಸಿ ಕೈ ಕಚ್ಚಿದ ಕೋತಿ

ಮಂಗನಿಗೆ ಹೆದರಿ ಆಟೋ, ಕಾರುಗಳಲ್ಲಿ ಜಗದೀಶ್ ಕದ್ದು ಕೂತಿದ್ದರೂ ಬಿಡದೆ ದಾಳಿ ಮಾಡಿದೆ. ಅಲ್ಲದೆ ಜಗದೀಶ್ ಆಟೋದ ಸೀಟು ಕೂಡ ಹರಿದು ಹಾಕಿದೆ. ಅರಣ್ಯ ಸಿಬ್ಬಂದಿಗಳಿಗೂ ಸಿಗದೆ ಕೋತಿ ಓಡಾಡುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ಕಾಫಿ ನಾಡಿನಲ್ಲಿ ಮೂವರ ಮೇಲೆ ಮಂಗನ ದಾಳಿ; ರೇಗಿಸಿದವನ ಅಟ್ಟಾಡಿಸಿ ಕೈ ಕಚ್ಚಿದ ಕೋತಿ
ರೇಗಿಸಿದವನ ಅಟ್ಟಾಡಿಸಿ ಕೈ ಕಚ್ಚಿದ ಕೋತಿ
TV9 Web
| Edited By: ಸಾಧು ಶ್ರೀನಾಥ್​|

Updated on:Sep 17, 2021 | 3:57 PM

Share

ಚಿಕ್ಕಮಗಳೂರು: ಮೂವರ ಮೇಲೆ ಮಂಗ ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗ ನುಗ್ಗಿದ್ದು, ರೇಗಿಸಿದವನನ್ನು ಹುಡುಕಿ ಕೈ ಕಚ್ಚಿ ಗಾಯಗೊಳಿಸಿದೆ.

ನಿನ್ನೆ ಮಧ್ಯಾಹ್ನದಿಂದಲೂ ಕೋತಿ ಕಾಟ ಕೊಡಲು ಶುರುಮಾಡಿದ್ದು, ಕಾಫಿ ನಾಡಿನ ಜನ ಬೇಸತ್ತು ಹೋಗಿದ್ದಾರೆ. ನಿನ್ನೆ ಬೇರೆಯವರ ತಲೆ ಮೇಲೆ ಕೂತು ಕೋತಿ ಆಟವಾಡಿದ್ದು, ಆತನಿಗೆ ತೊಂದರೆ ಮಾಡಲಿಲ್ಲ. ಆದರೆ ಈ ಸಂದರ್ಭದಲ್ಲಿ ಆಟೋ ಚಾಲಕ ಮಂಗನಿಗೆ ರೇಗಿಸಿದ್ದು, ಸಿಟ್ಟಿಗೆದ್ದ ಕೋತಿ ಆಟೋ ಚಾಲಕ ಜಗದೀಶ್​ನನ್ನು ಹುಡುಕಿ ಕೈ ಕಚ್ಚಿದೆ.

ಮಂಗನಿಗೆ ಹೆದರಿ ಆಟೋ, ಕಾರುಗಳಲ್ಲಿ ಜಗದೀಶ್ ಕದ್ದು ಕೂತಿದ್ದರೂ ಬಿಡದೆ ದಾಳಿ ಮಾಡಿದೆ. ಅಲ್ಲದೆ ಜಗದೀಶ್ ಆಟೋದ ಸೀಟು ಕೂಡ ಹರಿದು ಹಾಕಿದೆ. ಅರಣ್ಯ ಸಿಬ್ಬಂದಿಗಳಿಗೂ ಸಿಗದೆ ಕೋತಿ ಓಡಾಡುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಕಾಡಾನೆ ಹಾವಳಿ; ಮನೆಯ ಕಾಂಪೌಂಡ್ ಬಳಿ ಬಂದು ಜನರನ್ನ ಅಟ್ಟಾಡಿಸಿದ ಒಂಟಿ ಆನೆಯ ಫೋಟೋಗಳಿವೆ

ಮೈಸೂರು: ತಾಯಿಯಿಂದ ಬೇರ್ಪಟ್ಟ ಎರಡು ಚಿರತೆ ಮರಿಗಳ ರಕ್ಷಣೆ

ಈ ಹಿಂದೆಯೂ ಕೂಡ ಕಾಫಿನಾಡಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ಬೆಳೆಯನ್ನು ನಾಶಪಡಿಸುತ್ತಿದ್ದವು:

ಮೂಡಿಗೆರೆ ತಾಲೂಕಿನಾದ್ಯಂತ ಬಹುತೇಕ ಕಾಫಿ ತೋಟಗಳಲ್ಲಿ ಈ ವಾನರಸೇನೆ ಮಾಡ್ತಿರೋ ಕಿತಾಪತಿ ಅಂತಿಂಥದ್ದಲ್ಲ. ಬರೀ ಕಾಫಿ ಕೊಯ್ಲು ಮಾಡ್ತಿಲ್ಲ, ಈ ಕೋತಿಗಳ ಗ್ಯಾಂಗ್ ಇಡೀ ಕಾಫಿ ತೋಟವನ್ನೇ ಗುಡಿಸಿ ಗುಂಡಾಂತರ ಮಾಡುತ್ತಿವೆ. ಒಂದೊಂದು ಮಂಗಗಳು ಒಂದೊಂದು ಕಾಫಿ ಗಿಡ ಏರಿ ಕುಳಿತು ಕಾಫಿ ಹಣ್ಣನ್ನು ಹಾಳು ಮಾಡುತ್ತಿರುವುದು ಕಾಫಿ ಬೆಳೆಗಾರರಲ್ಲಿ ಅತೀವ ಬೇಸರ ತರಿಸಿದೆ.

ಕಾಫಿ ಬೆಳೆಗಾರರು ವರ್ಷವಿಡೀ ಕಾಫಿ ಗಿಡಗಳನ್ನು ಮಕ್ಕಳಂತೆ ಪೋಷಿಸಿ, ಬೆಳೆಸಿ ಕಾಪಾಡಿಕೊಂಡ ಬಂದ ಬೆಳೆಯನ್ನು ಮಂಗಗಳು ತಿನ್ನುತ್ತಿರುವುದು ಕಾಫಿ ಬೆಳೆಗಾರರಿಗೆ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾಫಿ ತೋಟಗಳಿಗೆ ನೂರಾರು ಮಂಗಗಳು ಲಗ್ಗೆಯಿಟ್ಟು, ಫಸಲನ್ನು ತಿನ್ನುತ್ತಿದ್ದು, ಕೋತಿಗಳ ಕಿತಾಪತಿಗೆ ಕಡಿವಾಣ ಹಾಕುವುದಕ್ಕೆ ರೈತರು ಹರಸಾಹಸ ಪಡುತ್ತಿದ್ದಾರೆ.

Published On - 11:59 am, Fri, 17 September 21

Follow Us
TV9 Web
TV9 Web

TV9 Kannada

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ