ಮೈಸೂರು: ತಾಯಿಯಿಂದ ಬೇರ್ಪಟ್ಟ ಎರಡು ಚಿರತೆ ಮರಿಗಳ ರಕ್ಷಣೆ

ಚಿರತೆ ಮರಿ ಸಿಕ್ಕ ನಂತರ 2 ದಿನ ಚಿರತೆ ಮರಿಗಳನ್ನು ಅರಣ್ಯ ಅಧಿಕಾರಿಗಳು ಅಲ್ಲೇ ಬಿಟ್ಟಿದ್ದರು. ತಾಯಿ ಚಿರತೆ ಬಂದು ಮರಿಗಳನ್ನು ಕರೆದುಕೊಂಡು ಹೋಗಬಹುದೆಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದರು. ಆದರೆ ತಾಯಿ ಚಿರತೆ ಬಾರದ ಕಾರಣ ಚಿರತೆ ಮರಿಗಳ ಸಂರಕ್ಷಣೆ ಮಾಡಲಾಗಿದೆ.

ಮೈಸೂರು: ತಾಯಿಯಿಂದ ಬೇರ್ಪಟ್ಟ ಎರಡು ಚಿರತೆ ಮರಿಗಳ ರಕ್ಷಣೆ
ಎರಡು ಚಿರತೆ ಮರಿಗಳ ರಕ್ಷಣೆ
Follow us
TV9 Web
| Updated By: preethi shettigar

Updated on:Sep 12, 2021 | 9:45 AM

ಮೈಸೂರು: ತಾಯಿಯಿಂದ ಬೇರ್ಪಟ್ಟ ಎರಡು ಚಿರತೆ ಮರಿಗಳನ್ನು ರಕ್ಷಣೆ ಮಾಡಿದ ಘಟನೆ ಮೈಸೂರು ತಾಲೂಕಿನ ದಾರಿಪುರ ಗ್ರಾಮದಲ್ಲಿ ನಡೆದಿದೆ. ದಾರಿಪುರ ಗ್ರಾಮದ ರೈತ ಮಹದೇವಪ್ಪ ಅವರ ಜಮೀನಿನಲ್ಲಿ ಚಿರತೆ ಮರಿಗಳು ಪತ್ತೆಯಾಗಿವೆ.

ಚಿರತೆ ಮರಿ ಸಿಕ್ಕ ನಂತರ 2 ದಿನ ಚಿರತೆ ಮರಿಗಳನ್ನು ಅರಣ್ಯ ಅಧಿಕಾರಿಗಳು ಅಲ್ಲೇ ಬಿಟ್ಟಿದ್ದರು. ತಾಯಿ ಚಿರತೆ ಬಂದು ಮರಿಗಳನ್ನು ಕರೆದುಕೊಂಡು ಹೋಗಬಹುದೆಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದರು. ಆದರೆ ತಾಯಿ ಚಿರತೆ ಬಾರದ ಕಾರಣ ಚಿರತೆ ಮರಿಗಳ ಸಂರಕ್ಷಣೆ ಮಾಡಲಾಗಿದ್ದು, ಮೈಸೂರು ಮೃಗಾಲಯದಲ್ಲಿ ಪ್ರಾಥಮಿಕ‌ ಚಿಕಿತ್ಸೆ ನೀಡಲಾಗಿದೆ. ನಂತರ ಬನ್ನೇರುಘಟ್ಟ ವನ್ಯಧಾಮಕ್ಕೆ ಚಿರತೆ ಮರಿಗಳನ್ನು ರವಾನೆ ಮಾಡಲಾಗಿದೆ.

ವಿಜಯಪುರ: ತಡರಾತ್ರಿ ವಾಹನ ಡಿಕ್ಕಿಯಾಗಿ ನವಿಲು ಸಾವು ಅಪರಿಚಿತ ವಾಹನ ಡಿಕ್ಕಿಯಾಗಿ‌ ಮೃತಪಟ್ಟಿದ್ದ ರಾಷ್ಟ್ರಪಕ್ಷಿ‌ ನವಿಲಿಗೆ ಗೌರವ ಪೂರ್ವಕ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಬಳಿ ನಡೆದಿದೆ. ತಡರಾತ್ರಿ ಅಪರಿಚಿತ ವಾಹನ‌ ಡಿಕ್ಕಿಯಾಗಿ ಮೃತಪಟ್ಟಿದ್ದ ನವಿಲಿನ ಅಂತ್ಯಕ್ರಿಯೆಯನ್ನು ಮುದ್ದೇಬಿಹಾಳದ ಸಲಾಂ‌ ಭಾರತ ಟ್ರಸ್ಟ್ ನೆರವೇರಿಸಿದೆ.

ರಾಷ್ಟ್ರಧ್ವಜ ಹೊದಿಸಿ ಗೌರವ ಸಮರ್ಪಣೆ ಮಾಡಿದ ಸಲಾಂ ಭಾರತ ಟ್ರಸ್ಟ್ ಪದಾಧಿಕಾರಿಗಳು, ನಂತರ ಅಂತ್ಯಕ್ರಿಯೆ ನೆರವೇರಿಸಿ ರಾಷ್ಟ್ರಪಕ್ಷಿಗೆ ವಿದಾಯ ಹೇಳಿದ್ದಾರೆ.

ಕಾರವಾರದ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೆಬರ ಪತ್ತೆ ಕರ್ನಾಟಕ ಕರಾವಳಿಯಲ್ಲಿ ಅಪರೂಪವಾಗಿ ಕಾಣಸಿಗುವ “ಗ್ರೀನ್ ಸೀ” ಆಮೆಯ(chelonia mydas) ಕಳೆಬರ ಕಾರವಾರದ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ಪತ್ತೆಯಾಗಿದೆ. ಇವುಗಳ ವಂಶವು ಅವನತಿಯಲ್ಲಿ ಇರುವುದರಿಂದಾಗಿ ವನ್ಯ ಜೀವಿ ಸೌಂರಕ್ಷಣ ಕಾಯ್ದೆ 1972 ರ ಅನುಭಂದ 1ರ ಅಡಿ ಇದು ಸಂರಕ್ಷಿಸಲ್ಪಟ್ಟಿದೆ. ಕೆಲವೇ ದಿನಗಳ ಹಿಂದೆ ಇದೇ ಜಾತಿಯ ಆಮೆಯ ಕಳೆಬರವೊಂದು ಕಾರವಾರದ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದರ ನಂತರ ಪುನಃ ಇಂದು ಗ್ರೀನ್​ ಸೀ ಆಮೆ ಕಳೆಬರ ಪತ್ತೆಯಾಗಿದೆ.

ಗ್ರೀನ್ ಸೀ ಎಂದು ಕರೆಯಲ್ಪಡುವ ಈ ಆಮೆಯು ಸಸ್ಯಹಾರಿ ಆಮೆಯಾಗಿದ್ದು, ಪೆಸಿಫಿಕ್ ಸಾಗರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ದೇಹದ ವಿಶೇಷ ರಚನೆಯಿಂದ ಇವುಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಇದರ ಮುಖವು ಮೊಂಡವಾಗಿದ್ದು, ಸಮುದ್ರದಲ್ಲಿ ಬೆಳೆಯುವ ಪಾಚಿ, ಹುಲ್ಲುಗಲನ್ನು ತಿನ್ನಲು ಬೇಕಾದ ವ್ಯವಸ್ಥೆಗೆ ರಚನೆಯಾಗಿದೆ.

ವಯಸ್ಕ ಆಮೆಯು 110 ರಿಂದ 190 ಕೆಜಿ ವರೆಗೂ ತೂಕವಿರುತ್ತದೆ. 8 ರಿಂದ 10 ಇಂಚು ಉದ್ದವಾಗಿ ಬೆಳೆಯುತ್ತದೆ. ಇದರ ದೇಹದ ಮೇಲ್ಭಾಗದ ಅಂಗ ರಚನೆಯೂ ವಿಶೇಷವಾಗಿದ್ದು, ಸ್ಲೂಪಿನಂತೆ ಇರುತ್ತದೆ. ಎರಡು ವರ್ಷಗಳಿಗೊಮ್ಮೆ ಮಾತ್ರ ಗೂಡುಕಟ್ಟಿ ಮೊಟ್ಟೆಯಿಡುತ್ತವೆ. ಇವುಗಳ ಸಂತತಿ ಇದೀಗ ಅಳವಿನಂಚಿನಲ್ಲಿದೆ.

ಇಂದು ಪತ್ತೆಯಾದ ಆಮೆಯು ಮೀನುಗಾರರ ಬಲೆಗೆ ಸಿಲುಕಿ ಉಸಿರುಗಟ್ಟಿ ಸತ್ತಿರುವ ಸಾಧ್ಯತೆಯನ್ನು ತಜ್ಞರು ಅಭಿಪ್ರಾಯ ಪಟ್ಟಿದ್ದು, ಸ್ಥಳಕ್ಕೆ ಕಾರವಾರದ ಅರಣ್ಯಾಧಿಕಾರಿ ವಸಂತ್ ರೆಡ್ಡಿ ,ಕೋಸ್ಟಲ್ ಅಂಡ್​ ಮರೈನ್ ಏಕೋ ಸಿಸ್ಟಮ್​ನ ವಲಯದ ಆರ್​ಎಫ್​ಓ ಪ್ರಮೋದ್, ಡಿಆರ್​ಎಫ್​ಓ ಚಂದ್ರಶೇಖರ, ನವೀನ್, ಮಹೇಶ್ ಮತ್ತು ಸಿಬ್ಬಂದಿಗಳು ಹಾಜರಾಗಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಶೌಚಗುಂಡಿಗೆ ಬಿದ್ದು ಮೇಲೆ ಬರಲಾಗದೆ ಆನೆ ಮರಿ ನರಳಾಟ; ರಕ್ಷಣೆಗೆ ಮುಂದಾಗಿರುವ ಗ್ರಾಮಸ್ಥರು

ಕಬ್ಬು ಕಟಾವು ವೇಳೆ ಚಿರತೆ ಮರಿಗಳು ಪ್ರತ್ಯಕ್ಷ, ಕೂಲಿಯವರು ಮಾಡಿದ್ದೇನು?

Published On - 9:40 am, Sun, 12 September 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ