ಮೈಸೂರು ಗ್ಯಾಂಗ್ ರೇಪ್: ಪ್ರಕರಣದ ಗಂಭೀರತೆ ಮನದಟ್ಟು ಪಡಿಸಲು ಮೈಸೂರು ಪೊಲೀಸರು ಮುಂಬೈಗೆ ತೆರಳುವ ಸಾಧ್ಯತೆ
ಸಂತ್ರಸ್ತೆಯ ಪೋಷಕರಿಗೆ ಪ್ರಕರಣದ ಗಂಭೀರತೆ ಮನದಟ್ಟು ಮಾಡುಲು ಪೊಲೀಸರು ಯತ್ನಿಸುತ್ತಿದ್ದಾರೆ. ಸಂತ್ರಸ್ತೆ ಹೇಳಿಕೆ ನೀಡಲು ಮುಂದಾದರೆ ಈ ಪ್ರಕರಣದಲ್ಲಿ ಪೊಲೀಸರ ತನಿಖೆಗೆ ಹೊಸ ಆಯಾಮ ಸಿಗಲಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಮೈಸೂರು ಪೊಲೀಸರ ನಡೆ ಕುತೂಹಲ ಕೆರಳಿಸಿದೆ.
ಮೈಸೂರು: ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆ ಮನವೊಲಿಸಲು ಮುಂದಾದ ಮೈಸೂರು ಪೊಲೀಸರು, ಇಂದು ಮುಂಬೈಗೆ ತೆರಳುವ ಸಾಧ್ಯತೆ ಇದೆ.ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದುವರೆಗೂ ಸಂತ್ರಸ್ತೆಯ ಸಹಕಾರ ಸಿಕ್ಕಿಲ್ಲ. ಹೀಗಾಗಿ ಸಂತ್ರಸ್ತೆಯ ಪೋಷಕರ ಭೇಟಿಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.
ಸಂತ್ರಸ್ತೆಯ ಪೋಷಕರಿಗೆ ಪ್ರಕರಣದ ಗಂಭೀರತೆ ಮನದಟ್ಟು ಮಾಡುಲು ಪೊಲೀಸರು ಯತ್ನಿಸುತ್ತಿದ್ದಾರೆ. ಸಂತ್ರಸ್ತೆ ಹೇಳಿಕೆ ನೀಡಲು ಮುಂದಾದರೆ ಈ ಪ್ರಕರಣದಲ್ಲಿ ಪೊಲೀಸರ ತನಿಖೆಗೆ ಹೊಸ ಆಯಾಮ ಸಿಗಲಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಮೈಸೂರು ಪೊಲೀಸರ ನಡೆ ಕುತೂಹಲ ಕೆರಳಿಸಿದೆ.
ಹೇಳಿಕೆ ನೀಡುವುದಕ್ಕೆ ಸಂತ್ರಸ್ತೆ ನಿರಾಕರಣೆ ಆರೋಪಿಗಳ ಬಂಧನ ಬಳಿಕವೂ ಘಟನೆಯ ಬಗ್ಗೆ ಹೇಳಿಕೆ ನೀಡುವುದಕ್ಕೆ ಸಂತ್ರಸ್ತೆ ನಿರಾಕರಿಸುತ್ತಿದ್ದಾರೆ. ಹೇಳಿಕೆಗಳನ್ನು ಪಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದು, ಸಂತ್ರಸ್ತೆ ಜತೆಗಿದ್ದ ಸ್ನೇಹಿತನ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಸಂತ್ರಸ್ತೆ ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಬೇಕು. ಸಂತ್ರಸ್ತೆ ಹೇಳಿಕೆ ನೀಡಿದರೆ ಅದು ಮಹತ್ವದ ಸಾಕ್ಷ್ಯವಾಗಲಿದೆ. ಆಗ ಸರ್ಕಾರಕ್ಕೂ ಪೊಲೀಸರು ವರದಿಯನ್ನು ನೀಡಬಹುದು. ಆದರೆ ಸಂತ್ರಸ್ತೆ ಮಾತ್ರ ಹೇಳಿಕೆ ನೀಡುವುದಕ್ಕೆ ನಿರಾಕರಣೆ ಮಾಡುತ್ತಿದ್ದಾರೆ.
ಆರೋಪಿಗಳಿಂದ ತಪ್ಪೊಪ್ಪಿಗೆ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಂದು ನಡೆದ ಘಟನೆ ಬಗ್ಗೆ ಪೊಲೀಸರ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಮೈಸೂರಿನ ಅಜ್ಞಾತ ಸ್ಥಳದಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಲಾಗಿದೆ.
ಅತ್ಯಾಚಾರದಲ್ಲಿ 6 ಜನ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಪೊಲೀಸರ ತನಿಖೆ ವೇಳೆ ಇನ್ನೋರ್ವ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಐವರು ಬಂಧನಕ್ಕೊಳಗಾಗಿದ್ದು, ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ. ಇನ್ನು ಆರೋಪಿಗಳನ್ನು ಬಂಧಿಸಲು ಪೊಲೀಸರು ನಡೆಸಿದ ಕಾರ್ಯಚರಣೆ ರೋಚಕವಾಗಿತ್ತು. ಮೈಸೂರು ಪೊಲೀಸರ ತಂಡ ತಾಳವಾಡಿಯ ಸೂಸಿಪುರಂಗೆ ಹೋಗಿತ್ತು. ಮಾಹಿತಿ ಸಿಕ್ಕರೂ ಆರೋಪಿ ಸ್ಥಳಕ್ಕೆ ಹೋಗುವುದು ಸವಾಲಾಗಿತ್ತು. ಮಾಹಿತಿ ಎಲ್ಲಾ ಪಡೆದರು ರಾತ್ರಿಯಾಗುವುದಕ್ಕೆ ಕಾಯುತ್ತಿದ್ದ ಪೊಲೀಸರು, ಕತ್ತಲಾಗುತ್ತಿದ್ದಂತೆ ಮನೆ ಮೇಲೆ ದಾಳಿ ಮಾಡಿದ್ದರು. ತಮಿಳು ಬಾಷೆ ಗೊತ್ತಿರುವ ಪೊಲೀಸರನ್ನು ಮೈಸೂರು ಪೊಲೀಸರು ಕರೆದುಕೊಂಡು ಹೋಗಿದ್ದರು.
ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಐವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
Published On - 11:42 am, Sat, 11 September 21