ಕಬ್ಬು ಕಟಾವು ವೇಳೆ ಚಿರತೆ ಮರಿಗಳು ಪ್ರತ್ಯಕ್ಷ, ಕೂಲಿಯವರು ಮಾಡಿದ್ದೇನು?
ಚಾಮರಾಜನಗರ: ತಾಳವಾಡಿಯ ದೊಡ್ಡಮುತ್ತಿನ ಕೆರೆ ಗ್ರಾಮದ ಬಳಿ ಕಬ್ಬು ಕಟಾವು ಮಾಡುವಾಗ ಗದ್ದೆಯಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಎರಡು ಚಿರತೆ ಮರಿಗಳನ್ನು ಕಂಡ ಕೂಲಿ ಕಾರ್ಮಿಕರು ಮೊದಲಿಗೆ ಗಾಬರಿಗೊಂಡಿದ್ದಾರೆ. ಬಳಿಕ ಚಿರತೆ ಮರಿಗಳನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ತಂಗರಾಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳಗ್ಗೆ ಕಬ್ಬು ಕಟಾವು ಮಾಡುವ ವೇಳೆ ಚಿರತೆ ಮರಿಗಳು ಕಂಡುಬಂದಿವೆ. ಕೂಡಲೇ ಸತ್ಯಮಂಗಲಂ ಅರಣ್ಯಾಧಿಕಾರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಚಿರತೆ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ನಂತರ ಮರಿಗಳಿದ್ದ ಸ್ಥಳದಲ್ಲಿ ಚಿರತೆಗಾಗಿ ಬೋನು […]
ಚಾಮರಾಜನಗರ: ತಾಳವಾಡಿಯ ದೊಡ್ಡಮುತ್ತಿನ ಕೆರೆ ಗ್ರಾಮದ ಬಳಿ ಕಬ್ಬು ಕಟಾವು ಮಾಡುವಾಗ ಗದ್ದೆಯಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಎರಡು ಚಿರತೆ ಮರಿಗಳನ್ನು ಕಂಡ ಕೂಲಿ ಕಾರ್ಮಿಕರು ಮೊದಲಿಗೆ ಗಾಬರಿಗೊಂಡಿದ್ದಾರೆ. ಬಳಿಕ ಚಿರತೆ ಮರಿಗಳನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.
ತಂಗರಾಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳಗ್ಗೆ ಕಬ್ಬು ಕಟಾವು ಮಾಡುವ ವೇಳೆ ಚಿರತೆ ಮರಿಗಳು ಕಂಡುಬಂದಿವೆ. ಕೂಡಲೇ ಸತ್ಯಮಂಗಲಂ ಅರಣ್ಯಾಧಿಕಾರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಚಿರತೆ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ನಂತರ ಮರಿಗಳಿದ್ದ ಸ್ಥಳದಲ್ಲಿ ಚಿರತೆಗಾಗಿ ಬೋನು ಇಟ್ಟು ಕ್ಯಾಮರಾ ಅಳವಡಿಸಿದ್ದಾರೆ.
Published On - 11:41 am, Fri, 27 December 19