ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಫುಲ್! ಧನುರ್ಮಾಸದಲ್ಲಿ ಭರ್ಜರಿ ಕಲೆಕ್ಷನ್
ಚಾಮರಾಜನಗರ: ಎಪ್ಪತ್ತೇಳು ಮಲೆಗಳ ಒಡೆಯ ಮತ್ತೆ ಕೋಟ್ಯಾಧೀಶನಾಗಿರುವ ಸುದ್ದಿಯಿದು! ಧನುರ್ಮಾಸದಲ್ಲಿ ದೇಗುಲದಲ್ಲಿ ಹುಂಡಿ ಕಲೆಕ್ಷನ್ ಭರ್ಜರಿಯಾಗಿದ್ದು, ದಾಖಲೆಯ ಮೊತ್ತ ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರ ದೇವಾಲಯದಲ್ಲಿ ಪ್ರತಿ ತಿಂಗಳು ಮಾದಪ್ಪನ ಹುಂಡಿಗೆ ಕೋಟಿಗಟ್ಟಲೆ ಹಣ ಹರಿದುಬರುತ್ತಿದೆ. ನಿನ್ನೆ ತಡರಾತ್ರಿವರೆಗೂ ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಈ ಮಾಸದ ಲೆಕ್ಕದಲ್ಲಿ 1 ಕೋಟಿ 88 ಲಕ್ಷದ 21 ಸಾವಿರದ 108 ರೂಪಾಯಿ ನಗದು ಸಂಗ್ರಹವಾಗಿದೆ. ನಗದು ಜೊತೆಗೆ 48 ಗ್ರಾಂ ಚಿನ್ನ, 2 ಕೆ.ಜಿ 1.800 […]
ಚಾಮರಾಜನಗರ: ಎಪ್ಪತ್ತೇಳು ಮಲೆಗಳ ಒಡೆಯ ಮತ್ತೆ ಕೋಟ್ಯಾಧೀಶನಾಗಿರುವ ಸುದ್ದಿಯಿದು! ಧನುರ್ಮಾಸದಲ್ಲಿ ದೇಗುಲದಲ್ಲಿ ಹುಂಡಿ ಕಲೆಕ್ಷನ್ ಭರ್ಜರಿಯಾಗಿದ್ದು, ದಾಖಲೆಯ ಮೊತ್ತ ಸಂಗ್ರಹವಾಗಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಹದೇಶ್ವರ ದೇವಾಲಯದಲ್ಲಿ ಪ್ರತಿ ತಿಂಗಳು ಮಾದಪ್ಪನ ಹುಂಡಿಗೆ ಕೋಟಿಗಟ್ಟಲೆ ಹಣ ಹರಿದುಬರುತ್ತಿದೆ. ನಿನ್ನೆ ತಡರಾತ್ರಿವರೆಗೂ ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಈ ಮಾಸದ ಲೆಕ್ಕದಲ್ಲಿ 1 ಕೋಟಿ 88 ಲಕ್ಷದ 21 ಸಾವಿರದ 108 ರೂಪಾಯಿ ನಗದು ಸಂಗ್ರಹವಾಗಿದೆ.
ನಗದು ಜೊತೆಗೆ 48 ಗ್ರಾಂ ಚಿನ್ನ, 2 ಕೆ.ಜಿ 1.800 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ಭಕ್ತರು ಹೆಚ್ಚಾಗಿ ಐದು ಮತ್ತು ಹತ್ತು ರುಪಾಯಿ ನಾಣ್ಯ ಮತ್ತು ನೋಟುಗಳನ್ನು ಸಮರ್ಪಿಸಿದ್ದಾರೆ.