ಆಸೀಫಾಬಾದ್ ಜಿಲ್ಲೆಯ ಹಾಸ್ಟೆಲ್​ನಲ್ಲಿ ಹಲವು ವಿದ್ಯಾರ್ಥಿನಿಯರು ಪ್ರೆಗ್ನೆಂಟ್​!

ಹೈದರಾಬಾದ್: ತೆಲಂಗಾಣದ ಆಸೀಫಾಬಾದ್ ಜಿಲ್ಲೆಯಲ್ಲಿ ದಾರುಣ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪದವಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್​ನಲ್ಲಿದ್ದ ಹಲವಾರು ವಿದ್ಯಾರ್ಥಿನಿಯರು ಪ್ರೆಗ್ನೆಂಟ್ ಎಂದು ತಿಳಿದುಬಂದಿದೆ. ಗಿರಿಜನ‌ ವಿದ್ಯಾರ್ಥಿನಿಯರ ಹಾಸ್ಟೆಲ್​ನ 10 ವಿದ್ಯಾರ್ಥಿನಿಯರಿಗೆ ಮಾಸಿಕ ಋತು ಸ್ರಾವ ನಿಂತ ಹಿನ್ನೆಲೆಯಲ್ಲಿ ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿನಿಯರು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಮೂವರು ವಿದ್ಯಾರ್ಥಿನಿಯರ ಪ್ರೆಗ್ನೆನ್ಸಿ ಪಾಸಿಟಿವ್ ಬಂದಿದ್ದು, ಓರ್ವ ವಿದ್ಯಾರ್ಥಿನಿ 3 ತಿಂಗಳ ಗರ್ಭಿಣಿಯಾಗಿರೋದು ಪತ್ತೆಯಾಗಿದೆ. ಮತ್ತೋರ್ವ ವಿದ್ಯಾರ್ಥಿನಿ 2 ತಿಂಗಳ ಗರ್ಭಿಣಿಯಾಗಿರೋದು ಸಹ […]

ಆಸೀಫಾಬಾದ್ ಜಿಲ್ಲೆಯ ಹಾಸ್ಟೆಲ್​ನಲ್ಲಿ ಹಲವು ವಿದ್ಯಾರ್ಥಿನಿಯರು ಪ್ರೆಗ್ನೆಂಟ್​!
Follow us
ಸಾಧು ಶ್ರೀನಾಥ್​
|

Updated on:Dec 29, 2019 | 10:05 AM

ಹೈದರಾಬಾದ್: ತೆಲಂಗಾಣದ ಆಸೀಫಾಬಾದ್ ಜಿಲ್ಲೆಯಲ್ಲಿ ದಾರುಣ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪದವಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್​ನಲ್ಲಿದ್ದ ಹಲವಾರು ವಿದ್ಯಾರ್ಥಿನಿಯರು ಪ್ರೆಗ್ನೆಂಟ್ ಎಂದು ತಿಳಿದುಬಂದಿದೆ.

ಗಿರಿಜನ‌ ವಿದ್ಯಾರ್ಥಿನಿಯರ ಹಾಸ್ಟೆಲ್​ನ 10 ವಿದ್ಯಾರ್ಥಿನಿಯರಿಗೆ ಮಾಸಿಕ ಋತು ಸ್ರಾವ ನಿಂತ ಹಿನ್ನೆಲೆಯಲ್ಲಿ ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿನಿಯರು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಮೂವರು ವಿದ್ಯಾರ್ಥಿನಿಯರ ಪ್ರೆಗ್ನೆನ್ಸಿ ಪಾಸಿಟಿವ್ ಬಂದಿದ್ದು, ಓರ್ವ ವಿದ್ಯಾರ್ಥಿನಿ 3 ತಿಂಗಳ ಗರ್ಭಿಣಿಯಾಗಿರೋದು ಪತ್ತೆಯಾಗಿದೆ. ಮತ್ತೋರ್ವ ವಿದ್ಯಾರ್ಥಿನಿ 2 ತಿಂಗಳ ಗರ್ಭಿಣಿಯಾಗಿರೋದು ಸಹ ಕಂಡುಬಂದಿದೆ.

ವಿದ್ಯಾರ್ಥಿನಿಯರು ಗರ್ಭಿಣಿಯಾಗಿರುವ ಕಾರಣ ಹಾಸ್ಟೆಲ್ ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಇಂದು ವಿದ್ಯಾರ್ಥಿನಿಯರ ಹಾಸ್ಟೆಲ್​ಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ  ವಿಚಾರಣೆ ನಡೆಸುವ ಸಾಧ್ಯತೆ ಇದೆ.

Published On - 1:03 pm, Sat, 28 December 19