ಶೀತಗಾಳಿಗೆ ಥಂಡಾ ಹೊಡೆದ ರಾಷ್ಟ್ರ ರಾಜಧಾನಿ, ಚಳಿ ಜೊತೆ ಮಳೆಯ ಆತಂಕ!

ಶೀತಗಾಳಿಗೆ ಥಂಡಾ ಹೊಡೆದ ರಾಷ್ಟ್ರ ರಾಜಧಾನಿ, ಚಳಿ ಜೊತೆ ಮಳೆಯ ಆತಂಕ!

ದೆಹಲಿ: ಶೀತಗಾಳಿ ಎಲ್ಲೆಲ್ಲೂ ಬೀಸುತ್ತಿದೆ. ಚಳಿಯ ಅಬ್ಬರಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತವು ನಲುಗಿಹೋಗಿದೆ. ಬೆಳ್ಳಂಬೆಳಗ್ಗೆ ಮನೆ ಹೊರಗೆ ಕಾಲಿಡೋದು ಬಿಡಿ, ಹಾಸಿಗೆಯಿಂದ ಎದ್ದೇಳೋದಕ್ಕೂ ಜನರು ಯೋಚನೆ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾದ್ರೆ, ಅಲ್ಲಿನ ಪರಿಸ್ಥಿತಿ ಹೇಗಿದೆ, ಜನಜೀವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ. ಮಂಜು ಮುಸುಕಿದ ವಾತಾವರಣ. ಮೇಲೆ ಏಳೋಕೂ ಯೋಚನೆ ಮಾಡುವಷ್ಟು ಬಿಗಡಾಯಿಸಿರುವ ಪರಿಸ್ಥಿತಿ. ಅಂದಹಾಗೆ ಇದು ಅಂಟಾರ್ಟಿಕದ್ದೋ, ಹಿಮಾಲಯದ್ದೋ ಪರಿಸ್ಥಿತಿ ಅಲ್ಲ. ಉತ್ತರದಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಇದು. ರಾಷ್ಟ್ರ ರಾಜಧಾನಿಯ […]

sadhu srinath

|

Dec 28, 2019 | 12:12 PM

ದೆಹಲಿ: ಶೀತಗಾಳಿ ಎಲ್ಲೆಲ್ಲೂ ಬೀಸುತ್ತಿದೆ. ಚಳಿಯ ಅಬ್ಬರಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತವು ನಲುಗಿಹೋಗಿದೆ. ಬೆಳ್ಳಂಬೆಳಗ್ಗೆ ಮನೆ ಹೊರಗೆ ಕಾಲಿಡೋದು ಬಿಡಿ, ಹಾಸಿಗೆಯಿಂದ ಎದ್ದೇಳೋದಕ್ಕೂ ಜನರು ಯೋಚನೆ ಮಾಡುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಹಾಗಾದ್ರೆ, ಅಲ್ಲಿನ ಪರಿಸ್ಥಿತಿ ಹೇಗಿದೆ, ಜನಜೀವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ.

ಮಂಜು ಮುಸುಕಿದ ವಾತಾವರಣ. ಮೇಲೆ ಏಳೋಕೂ ಯೋಚನೆ ಮಾಡುವಷ್ಟು ಬಿಗಡಾಯಿಸಿರುವ ಪರಿಸ್ಥಿತಿ. ಅಂದಹಾಗೆ ಇದು ಅಂಟಾರ್ಟಿಕದ್ದೋ, ಹಿಮಾಲಯದ್ದೋ ಪರಿಸ್ಥಿತಿ ಅಲ್ಲ. ಉತ್ತರದಲ್ಲಿ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಇದು.

ರಾಷ್ಟ್ರ ರಾಜಧಾನಿಯ ತಾಪಮಾನ 2.4 ಡಿಗ್ರಿ..! ರಾಷ್ಟ್ರ ರಾಜಧಾನಿ ತೀವ್ರ ಚಳಿಗೆ ತತ್ತರಿಸಿದೆ. ಶೀತಗಾಳಿ ಪರಿಣಾಮ ಜನ ಮನೆಯಿಂದ ಹೊರ ಬರೋದಕ್ಕೂ ಚಿಂತೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟುದಿನ ಮಾಲಿನ್ಯದಿಂದ ತತ್ತರಿಸಿದ್ದ ದೆಹಲಿಯಲ್ಲಿ ಚಳಿ ಆರ್ಭಟ ಬಲು ಜೋರಾಗಿದೆ. ದೆಹಲಿಯಲ್ಲಿ ಇಂದು ಕನಿಷ್ಠ ತಾಪಮಾನ 2.4 ಡಿಗ್ರಿಗೆ ತಲುಪುವ ಮುಖೇನ, ರಾಷ್ಟ್ರ ರಾಜಧಾನಿಯ ನಿವಾಸಿಗಳು ಗಡಗಡ ನಡುಗುವಂತಾಗಿತ್ತು.

ಚಳಿ ಜೊತೆ ಶುರುವಾಯ್ತು ಭಾರಿ ಮಳೆ ಆತಂಕ..! ಇದೀಗ ಶೀತಗಾಳಿ ಜೊತೆಯಲ್ಲೇ, ದೆಹಲಿಯಲ್ಲಿ ಭಾರಿ ಮಳೆಯ ಆತಂಕ ಶುರುವಾಗಿದೆ. ಅಂದಹಾಗೆ ಪಶ್ಚಿಮ ಹಿಮಾಲಯದಿಂದ ಮಳೆ ಮಾರುತ ಬೀಸಲಿದ್ದು, ಡಿಸೆಂಬರ್ 31ರಿಂದ ಜನವರಿ 1ರ ನಡುವೆ ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ, ಎಚ್ಚರಿಕೆಯಿಂದ ಇರುವಂತೆ ಜನರಿಗೆ ಮುನ್ಸೂಚನೆಯನ್ನೂ ನೀಡಲಾಗಿದೆ.

ಒಟ್ನಲ್ಲಿ ತೀವ್ರವಾದ ವಾಯುಮಾಲಿನ್ಯ ಹಾಗೂ ಕೆಲ ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ತತ್ತರಿಸಿದ್ದ ದೆಹಲಿ ನಿವಾಸಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಎದೆ ನಡುಗಿಸುವ ಶೀತಗಾಳಿಯಿಂದ ಜನರು ಬೆಚ್ಚಿಬಿದ್ದಿದ್ದು, ಮುಂದಿನ ಪರಿಸ್ಥಿತಿಗೆ ಹೇಗೆ ಅನ್ನೋ ಚಿಂತೆ ಶುರುವಾಗಿದೆ. ಇದಕ್ಕೆಲ್ಲಾ ಆ ಪ್ರಕೃತಿ ಮಾತೆಯೇ ಉತ್ತರ ನೀಡಬೇಕಿದೆ.

Follow us on

Related Stories

Most Read Stories

Click on your DTH Provider to Add TV9 Kannada