ಸಿಎಎ ವಿರೋಧಿಸಿ ಹೊಸ ವರ್ಷದಿಂದ ಮತ್ತೊಂದು ಸುತ್ತಿನ ಹೋರಾಟ
ದೆಹಲಿ: ದೇಶದಲ್ಲಿ ಎನ್ಆರ್ಸಿ, ಸಿಎಎ ವಿರೋಧಿ ಪ್ರತಿಭಟನೆಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಹಂತದ ಹೋರಾಟಕ್ಕೆ ಎಡಪಕ್ಷಗಳು ಸಿದ್ಧತೆ ನಡೆಸಿವೆ. ಹೊಸ ವರ್ಷದಿಂದ ಮತ್ತೊಮ್ಮೆ ಪ್ರತಿಭಟನೆಗಳು ಆರಂಭವಾಗಲಿವೆ. ನಡುರೋಡಲ್ಲೇ ಹಿಂಸಾಚಾರ. ಕಂಡಲ್ಲೇ ಕಲ್ಲೇಟು. ಬಸ್, ರೈಲು ಧಗಧಗ. ರೈಲು ನಿಲ್ದಾಣವೂ ಧ್ವಂಸ. ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ಕಿಚ್ಚಿಗೆ ಇಡೀ ದೇಶದ ಹೊತ್ತಿ ಉರಿದು ಬಿಡ್ತು. ಪ್ರತಿಭಟನೆ ಜ್ವಾಲೆ ದಶದಿಕ್ಕಿನಲ್ಲೂ ಧಗಧಗಿಸಿ ತಣ್ಣಗಾಯ್ತು ಅನ್ನೋವಷ್ಟರಲ್ಲೇ ಮತ್ತೆ ಹೋರಾಟ ಭುಗಿಲೇಳೋ ಸಾಧ್ಯತೆ ಇದೆ. […]
ದೆಹಲಿ: ದೇಶದಲ್ಲಿ ಎನ್ಆರ್ಸಿ, ಸಿಎಎ ವಿರೋಧಿ ಪ್ರತಿಭಟನೆಗಳು ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಹಂತದ ಹೋರಾಟಕ್ಕೆ ಎಡಪಕ್ಷಗಳು ಸಿದ್ಧತೆ ನಡೆಸಿವೆ. ಹೊಸ ವರ್ಷದಿಂದ ಮತ್ತೊಮ್ಮೆ ಪ್ರತಿಭಟನೆಗಳು ಆರಂಭವಾಗಲಿವೆ.
ನಡುರೋಡಲ್ಲೇ ಹಿಂಸಾಚಾರ. ಕಂಡಲ್ಲೇ ಕಲ್ಲೇಟು. ಬಸ್, ರೈಲು ಧಗಧಗ. ರೈಲು ನಿಲ್ದಾಣವೂ ಧ್ವಂಸ. ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ ಕಿಚ್ಚಿಗೆ ಇಡೀ ದೇಶದ ಹೊತ್ತಿ ಉರಿದು ಬಿಡ್ತು. ಪ್ರತಿಭಟನೆ ಜ್ವಾಲೆ ದಶದಿಕ್ಕಿನಲ್ಲೂ ಧಗಧಗಿಸಿ ತಣ್ಣಗಾಯ್ತು ಅನ್ನೋವಷ್ಟರಲ್ಲೇ ಮತ್ತೆ ಹೋರಾಟ ಭುಗಿಲೇಳೋ ಸಾಧ್ಯತೆ ಇದೆ.
ಹೊಸ ವರ್ಷದಿಂದ ಮತ್ತೊಂದು ಸುತ್ತಿನ ಹೋರಾಟ..! ದೇಶಾದ್ಯಂತ ಪ್ರತಿಭಟನೆಗಳು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ಪ್ರತಿದಿನ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಹಿಂಸಾಚಾರ, ಗಲಭೆ ಕಡಿಮೆಯಾಗಿರಬಹುದು. ಆದ್ರೆ ಸಂಘಟಿತ ಪ್ರತಿಭಟನೆಗಳು ಪ್ರತಿದಿನ ಮುಂದುವರಿಯುತ್ತಲೇ ಇವೆ.
ಇದ್ರ ಬೆನ್ನಲ್ಲೇ ಈ ಪ್ರತಿಭಟನೆಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಎಡಪಕ್ಷಗಳು ನಿರ್ಧರಿಸಿವೆ. ಹೊಸ ವರ್ಷದ ಆರಂಭದ ದಿನದಿಂದ 8 ದಿನಗಳ ಕಾಲ ದೇಶಾದ್ಯಂತ ಸರಣಿ ಪ್ರತಿಭಟನೆಗಳನ್ನು ನಡೆಸಲು ಪ್ಲ್ಯಾನ್ ಮಾಡಿವೆ. ಜನವರಿ 1 ರಿಂದ 8ರ ವರೆಗೂ ದೇಶದ ಪ್ರಮುಖ ನಗರಗಳಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲಕ್ಕೆ ಕರೆ ನೀಡಿವೆ.
‘ಹೊಸ’ ಹೋರಾಟ..! ಈ ಬಾರಿ ಪ್ರತಿಭಟನೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಬಗ್ಗೆ ಮಾತ್ರ ಧ್ವನಿ ಎತ್ತುತ್ತಿಲ್ಲ. ಒಟ್ಟಾರೆ ದೇಶದ ಸಮಸ್ಯೆಗಳ ಬಗ್ಗೆ ಹೋರಾಟ ನಡೆಯಲಿವೆ. ಆರ್ಥಿಕ ಹಿಂಜರಿತ, ಉದ್ಯೋಗ ನಷ್ಟ ಮತ್ತು ನಿರುದ್ಯೋಗ, ಕೃಷಿ ವಲಯದಲ್ಲಾಗುತ್ತಿರುವ ಹಿನ್ನಡೆ ಮತ್ತು ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಜನಾಂದೋಲನವಾಗಿರಲಿದೆ ಅಂತಾ ಎಡಪಕ್ಷಗಳ ನಾಯಕರು ಹೇಳಿದ್ದಾರೆ.
ಈಗಾಗ್ಲೇ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಕ್ಕೆ ಮೋದಿ ಸರ್ಕಾರ ನಡುಗಿ ಹೋಗಿದೆ. ಎನ್ಆರ್ ಸಿ ಜಾರಿ ಮಾಡಲ್ಲ.. ಸರ್ಕಾರದ ವಿಷಯ ಎನ್ಆರ್ಸಿ ಜಾರಿ ಅಲ್ಲವೇ ಅಲ್ಲ ಎಂದಿದೆ. ಆದ್ರೂ ವಿರೋಧಪಕ್ಷಗಳಿಗೆ ಮೋದಿ ಸರ್ಕಾರದ ವಿರುದ್ಧ ನಂಬಿಕೆ ಬಂದಿರುವಂತೆ ಕಾಣ್ತಿಲ್ಲ. ಹೀಗಾಗಿ, ಮತ್ತೊಂದು ಸುತ್ತಿನ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.